Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ಹಬ್ಬಗಳು ಸೌಹಾರ್ದತೆ ಮೂಡಿಸಲಿ

ಓದುಗರ ಪತ್ರ

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸಂದಿಗವಾಡ ಗ್ರಾಮದಲ್ಲಿ ಮಸೀದಿ ಒಳಗೆ ಗಣೇಶ ಮೂರ್ತಿಯನ್ನು ಹಿಂದೂ -ಮುಸ್ಲಿಮರು ಜತೆಗೂಡಿ ಪ್ರತಿಷ್ಠಾಪಿಸಿ ಭಾವೈಕ್ಯತೆಯನ್ನು ಮೆರೆದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಇದನ್ನು ಓದಿ :ಹನೂರು: ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಹಣ ಎಗರಿಸಿದ ಖದೀಮರು

ಮುಸ್ಲಿಮರ ಪವಿತ್ರ ಹಬ್ಬವಾದ ಮೊಹರಂ ( ಬಾಬಯ್ಯನ ಹಬ್ಬ) ಹಬ್ಬವನ್ನು ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹಿಂದೂಗಳೇ ಆಚರಿಸಿಕೊಂಡು ಬರುತ್ತಿರುವುದು ಸೌಹಾರ್ದತೆಯ ಸಂಕೇತವಾಗಿದೆ.

ಯಾವುದೇ ಸಮುದಾಯದ ಹಬ್ಬವಿರಲಿ ಸರ್ವ ಧರ್ಮದವರೂ ಸೇರಿ ಸೌಹಾರ್ದತೆಯಿಂದ ಆಚರಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.

 -ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!