Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ಮಡಾ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಇಡಿ

ಎರಡನೇ ದಿನವೂ ಮುಂದುವರಿದ ಕಡತಗಳ ಪರಿಶೀಲನೆ
ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಪತ್ನಿಯ ಮೂಲ ದಾಖಲೆಗಳನ್ನು ಒದಗಿಸುವ ಜತೆಗೆ ಜನಪ್ರತಿನಿಧಿಗಳ ಶಿಫಾರಸು ಪತ್ರಗಳನ್ನು ಒದಗಿಸುವಂತೆ ೧೦ ದಿನಗಳ ಹಿಂದೆ ನೋಟಿಸ್ ಜಾರಿ ಗೊಳಿಸಿ ದ್ದರೂ ಪ್ರತಿಕ್ರಿಯಿಸದೇ ಕಡೆಗಣಿಸಿದ್ದ ಮುಡಾ ಅಧಿಕಾರಿಗಳಿಗೆ ಈಗ ಇಡಿ(ಜಾರಿ ನಿರ್ದೇಶನಾಲಯ)ಯವರು ಬಿಸಿ ಮುಟ್ಟಿಸಿದ್ದಾರೆ.

ತೆರೆಮರೆಯಲ್ಲಿ ಬೇರೆಯವರ ರಕ್ಷಣೆಗೆ ನಿಂತ ಮುಡಾ ಅಧಿಕಾರಿಗಳು ಇಡಿಯ ಬಲೆಗೆ ಸಿಲುಕಿದ್ದಾರೆ. ಕಾನೂನಾತ್ಮಕ ವಿಚಾರಗಳಿಗೆ ಉತ್ತರಿಸಲಾಗದೆ ಕೈಕಟ್ಟಿ ಕುಳಿತಿದ್ದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಚಾರಣೆ ಎದುರಿಸುವಂತಾಗಿದೆ. ಅಲ್ಲದೆ, ೫೦:೫೦ ಅನುಪಾತದ ನಿವೇಶನಕ್ಕೆ ಸಂಬಂಧಿಸಿದ ಶಿಫಾರಸನ್ನು ಯಾರು ಯಾರಿಗೆ ಮಾಡಿದ್ದರು? ಯಾರು ಯಾರಿಗೆ ಬದಲಿ ನಿವೇಶನ ಕೊಡಿಸಿದರು ಎನ್ನುವ ಸಮಗ್ರ ದಾಖಲೆಗಳು ಸಿಕ್ಕಿದ್ದು, ಇದನ್ನು ತಮ್ಮ
ವಶಕ್ಕೆ ಪಡೆದಿದ್ದಾರೆ.

ತಹಸಿಲ್ದಾರ್ ಕಚೇರಿಯಲ್ಲೂ ಅದೇ ಪರಿಸ್ಥಿತಿ: ನಜರ್‌ಬಾದ್ ನಲ್ಲಿರುವ ತಾಲ್ಲೂಕು ಕಚೇರಿಯಲ್ಲಿಯೂ ಇಡಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ. ಸರ್ವೆ ನಂಬರ್ ೪೬೪ಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಹಸಿಲ್ದಾರ್ ಮಹೇಶ್ ಕುಮಾರ್ ಅವರಿಂದ ಪಡೆದಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂಬರ್ ೪೬೪ರ ಭೂಮಿಗೆ ಸಂಬಂಽಸಿದ ೧೯೩೫ರ ಇಸವಿಯ ಎಂಆರ್ ಕಾಪಿ ಕೇಳಿ ಪಡೆದುಕೊಂಡಿದ್ದಾರೆ. ಶುಕ್ರವಾರೂ ತಾಲ್ಲೂಕು ಕಚೇರಿಯಿಂದ ನೂರು ಪುಟಗಳಷ್ಟು ದಾಖಲೆಗಳನ್ನು ಕೊಂಡೊಯ್ದಿದ್ದರು. ಜೆರಾಕ್ಸ್ ಪ್ರತಿಗೆ ಮಹೇಶ್ ಕುಮಾರ್ ಅವರಿಂದ ಸಹಿ ಹಾಕಿಸಿಕೊಂಡ ಮೇಲೆ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದಿದ್ದರು. ಎಲ್ಲದಕ್ಕೂ ಪೂರಕ ದಾಖಲೆ ಪಡೆದಿದ್ದರೆ, ಕೆಲವು ವಿಚಾರಗಳು ನನ್ನ ಗಮನಕ್ಕೆ ಬಂದಿಲ್ಲ, ಕೆಲವು ವಿಚಾರಗಳು ಗೊತ್ತಿಲ್ಲವೆಂದು ಹೇಳಿದ್ದಾರೆ. ಇದರಿಂದ ಇಡಿ ಅಽಕಾರಿಗಳು ನಾವು ಕೇಳಿದಾಗ ಮೂಲ ದಾಖಲೆಗಳನ್ನು ಕೊಡಬೇಕು. ವಿಚಾರಣೆಗೆ ಕರೆದಾಗ ಹಾಜರಾಗಬೇಕೆಂದು ಸೂಚನೆ ನೀಡಿದ್ದಾರೆ.

ದಾಖಲೆಗಳ ದೃಢೀಕರಣ
ಹಗರಣದ ಮೂಲವನ್ನು ಕೆದಕುತ್ತಿರುವ ಇಡಿ ಅಧಿಕಾರಿಗಳು ದಾಖಲೆಗಳ ದೃಢೀಕರಣ ಮಾಡುತ್ತಿದ್ದಾರೆ. ತಮ್ಮ ಕಚೇರಿಗೆ ಮತ್ತಿಬ್ಬರು ಅಧಿಕಾರಿಗಳನ್ನು ಶನಿವಾರ ಕರೆಯಿಸಿಕೊಂಡಿದ್ದರು. ಕಚೇರಿಯ ಹಿಂಬಾಗಿಲಿನಿಂದ ಹಾರ್ಡ್ ಡಿಸ್ಕ್ ತಂದ ಅಧಿಕಾರಿಗಳಿಬ್ಬರು ಆಯುಕ್ತರ ಕಚೇರಿಯಲ್ಲಿ ಮಾತುಕತೆ ನಡೆಸಿದ ಬಳಿಕ ರೆಕಾರ್ಡ್ ರೂಂನಲ್ಲಿ ಕುಳಿತು ಪರಿಶೀಲಿಸಿದರು. ಪ್ರತಿಯೊಂದನ್ನು ಪರಿಶೀಲಿಸಿ ದೃಢೀಕರಣ ಮಾಡುತ್ತಲೇ ಅದನ್ನು ಕಂಪ್ಯೂಟರ್‌ಗೆ ಅಪ್‌ಲೋಡ್ ಮಾಡಿ ಸಂಗ್ರಹಿಸಿದ್ದಾರೆ.

ದಾಖಲೆಗಳ ಬದಲಾವಣೆ, ಮೂಲ ಕಡತಗಳನ್ನು ತಿದ್ದಿರುವ ಕೆಲಸ ಆಗಿರುವ ಅನುಮಾನವಿರುವ ಕಾರಣ ಪ್ರತಿಯೊಂದನ್ನು ದೃಢೀಕರಿಸಲಾಗುತ್ತಿದೆ.

Tags:
error: Content is protected !!