ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಹೈರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಎಚ್.ಮಟಕೆರೆ , ಹೈರಿಗೆ ಹಾಗೂ ಮಲಾರ ಕಾಲೋನಿ ಹಾಗೂ ಇತರೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ಭಯಪಡುತ್ತಿದ್ದಾರೆ. ಹೈರಿಗೆ ಗ್ರಾಮದಿಂದ ಮಲಾರ ಕಾಲೋನಿ ಗ್ರಾಮದವರೆಗೂ ಬೆಳಗಿನ ಜಾವ ವಾಯುವಿಹಾರ ಮಾಡುವವರಿಗೆ ಚಿರತೆ ಭಯ ಕಾಡುತ್ತಿದೆ.
ಆದ್ದರಿಂದ ಜನ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಸೆರೆ ಹಿಡಿಯುವ ಮೂಲಕ ಗ್ರಾಮಸ್ಥರಿಗೆ
ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಎಚ್.ಡಿ. ಕೋಟೆ ತಾ





