Mysore
23
mist

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕೆ.ಆರ್‌ ಆಸ್ಪತ್ರೆ: ಒಪಿಡಿಗೆ ಹೊಸ ಕಟ್ಟಡ

ಮೈಸೂರು: ಬಡವರು, ಮಧ್ಯಮ ವರ್ಗದ ವರ ಪಾಲಿಗೆ ದೊಡ್ಡಾಸ್ಪತ್ರೆ ಎಂದೇ ಹೇಳಲಾಗುವ ಕೃಷ್ಣರಾಜೇಂದ್ರ ಆಸ್ಪತ್ರೆಯ ಆವರಣದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಶತಮಾನೋತ್ಸವ ಪ್ರಯುಕ್ತ ಹೊಸ ದಾಗಿ ಮತ್ತೊಂದು ಹೊರ ರೋಗಿ ಚಿಕಿತ್ಸಾ ಕಟ್ಟಡದ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸ ಲಾಯಿತು.

೭೫ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ನಾಲ್ಕು ಮಹಡಿಗಳುಳ್ಳ ಹೊರ ರೋಗಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ರೋಗಿಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಒಂದೇ ಸೂರಿ ನಡಿ ಹಲವು ಸೌಲಭ್ಯಗಳು ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಸಂಸ್ಥೆಯ ಲೈಬ್ರರಿ ಕಟ್ಟಡದಲ್ಲಿ ನಡೆದ ಸಮಾ ರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಿಮೋಟ್ ಬಟನ್ ಒತ್ತಿ ಕಟ್ಟಡ ನಿರ್ಮಾಣ ಹಾಗೂ ವಿವಿಧ ಕಾಮಗಾರಿಗಳಿಗೂ ಶಿಲಾನ್ಯಾಸ ನೆರವೇರಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಜಿಲ್ಲಾ ಉಸ್ತು ವಾರಿ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರು ಉಪಸ್ಥಿತರಿದ್ದರು.

ಕೆ. ಆರ್. ಆಸ್ಪತ್ರೆಯು ೧,೨೦೦ ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಮೈಸೂರು, ಚಾಮರಾಜ ನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಪ್ರತಿನಿತ್ಯ ೨,೨೦೦ ಹೊರರೋಗಿಗಳು, ೨೨೦ ಒಳ ರೋಗಿಗಳು ಹಾಗೂ ೫೦ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಇದಲ್ಲದೆ, ೧,೦೦೦ ರಕ್ತ ಪರೀಕ್ಷೆಗಳು, ೩೫೦ ಎಕ್ಸ್ ರೇಗಳು, ೨೦೦ ಅಲ್ಟ್ರಾಸೌಂಡ್‌ಗಳು, ೧೦೦ ಸಿಟಿ ಸ್ಕ್ಯಾನ್‌ಗಳು, ೨೪ ಎಂಆರ್‌ಐಗಳು ನಡೆಯುತ್ತವೆ. ಆದರೆ, ಹಾಲಿ ಲಭ್ಯವಿರುವ ಕಟ್ಟಡಗಳು ಬೇರೆ ಬೇರೆ ಕಡೆ ಇರುವುದರಿಂದ ವಿಭಾಗವಾರು ಚಿಕಿತ್ಸೆ ಪಡೆಯಲು ರೋಗಿಗಳಿಗೆ ಕಷ್ಟವಾಗುತ್ತಿರುವ ಕಾರಣ ಒಂದೇ ಸೂರಿನಡಿ ನಿರ್ಮಾಣ ಮಾಡಲಾಗುತ್ತದೆ.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವ ಲಾಂಛನದ ಶಿಲಾಫಲಕ ಉದ್ಘಾಟನೆ. ಸಂಸ್ಥೆಯ ಸಿಟಿ ಸ್ಕ್ಯಾನ್ ಯಂತ್ರದ ಉದ್ಘಾಟನೆ, ಸ್ಕಿನ್ ಬ್ಯಾಂಕ್ ಉದ್ಘಾಟನೆ, ಶತಮಾನೋತ್ಸವ ನೆನಪಿನ ಬೆಳ್ಳಿನಾಣ್ಯ, ವಿಶೇಷ ಲಕೋಟೆ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶಾಸಕ ಕೆ.ಹರೀಶ್‌ಗೌಡ, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮತ್ತಿತರರು ಹಾಜರಿದ್ದರು.

Tags:
error: Content is protected !!