Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕೊಡಗು: ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ!

ಸಾರ್ವಜನಿಕ ಕೆಲಸಗಳಲ್ಲಿ ವಿಳಂಬ ಧೋರಣೆ

-ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆ ಸೇರಿದಂತೆ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿದ್ದು, ಇರುವ ಖಾಯಂ ಸಿಬ್ಬಂದಿ ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ.

ಮಡಿಕೇರಿ ನಗರಸಭೆಯಲ್ಲಿ ಮಂಜೂರಾಗಿರುವ 185 ಹುದ್ದೆಗಳ ಪೈಕಿ, 58 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇರುವವರೂ ಒತ್ತಡದ ನಡುವೆ ಕೆಲಸ ಮಾಡುವಂತಾಗಿದೆ. ನಗರಸಭೆಯಲ್ಲಿ 127 ಹುದ್ದೆಗಳು ಖಾಲಿ ಇವೆ. ಈ ಪೈಕಿ ಪೌರ ಕಾರ್ಮಿಕರು ಸೇರಿ ಕೆಲ ಹೊರಗಿನ ಕೆಲಸದ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಪ್ರಸ್ತುತ ಇರುವ ಸಿಬ್ಬಂದಿ 2-3 ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಹೈರಾಣಾಗಿದ್ದಾರೆ.

ನಗರಸಭೆಯಲ್ಲಿ ಓರ್ವ ಸೀನಿಯರ್  ಪ್ರೋಗ್ರಾಮರ್, ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕಚೇರಿ ವ್ಯವಸ್ಥಾಪಕ, ಲೆಕ್ಕ ಅಧಿಕ್ಷಕ, ಅಕೌಂಟೆಂಟ್, ಸಮುದಾಯ ಸಂಘಟನಾಕಾರಿ, ಎಲೆಕ್ಟ್ರಿಷಿಯನ್, ಲ್ಯಾಬ್ ಟೆಕ್ನಿಷಿಯನ್, ಪ್ಲಂಬರ್ ಹುದ್ದೆಗಳು ಮಂಜೂರಾಗಿವೆ. ಆದರೆ,
ಈ ಯಾವುದೇ ಹುದ್ದೆಗಳಿಗೆ ನೇಮಕಾತಿಯೇ ಆಗಿಲ್ಲ. ಮೂವರು ಕಿರಿಯ ಇಂಜಿನಿಯರ್ ಗಳು ಇರಬೇಕಾದ ಸ್ಥಳದಲ್ಲಿ ಒಬ್ಬರು ಮಾತ್ರ ಇದ್ದಾರೆ. ಹಿರಿಯ ಆರೋಗ್ಯ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರ ತಲಾ 3 ಹುದ್ದೆಗಳಲ್ಲಿ ಮೂರೂ ಖಾಲಿ ಇವೆ.

ನೀರು ಸರಬರಾಜು ಸಹಾಯಕರ 8 ಹುದ್ದೆಗಳಲ್ಲಿ ಅಷ್ಟೂ ಖಾಲಿ ಇವೆ. 49 ಪೌರ ಕಾರ್ಮಿಕರ ಹುದ್ದೆಗಳ ಪೈಕಿ 22 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 16 ಲೋಡರ್  ಹುದ್ದೆಗಳಲ್ಲಿ ಅಷ್ಟೂ ಖಾಲಿ ಇವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ನಗರಸಭೆಯ ಬಹುತೇಕ ಹುದ್ದೆಗಳು ಖಾಲಿಯಾಗಿವೆ. ಸಿಬ್ಬಂದಿ ಕೊರತೆಯಿಂದ ನಲುಗಿರುವ ನಗರಸಭೆ ಆಡಳಿತ ಸಂಪೂರ್ಣ ಹದಗೆಟ್ಟಿದೆ.

  • ಸಾರ್ವಜನಿಕ ಕೆಲಸಗಳಿಗೆ ತೊಡಕು
  •  ಹಲವೆಡೆ ಒಬ್ಬ ನೌಕರ ಹೆಚ್ಚುವರಿ ಹುದ್ದೆ ನಿರ್ವಹಿಸುವ ಸಂಕಷ್ಟ
  •  ಜಿಲ್ಲೆಯಲ್ಲಿ 1 ನಗರ ಸಭೆ, 2 ಪುರಸಭೆ, 2 ಪಟ್ಟಣ ಪಂಚಾಯಿತಿ

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ

ಗ್ರಾಮ ಪಂಚಾಯಿತಿಯಾಗಿದ್ದ ಪೊನ್ನಂಪೇಟೆ ಪಟ್ಟಣ ಪಂಚಾಯಿತಿಯಾಗಿ ಇತ್ತೀಚೆಗೆ ಮೇಲ್ದರ್ಜೆಗೇರಿದ್ದು, ಮುಖ್ಯಾಧಿಕಾರಿ ಮಾತ್ರ ನೇಮಕವಾಗಿದ್ದಾರೆ. ಉಳಿದ ಸಿಬ್ಬಂದಿಗಳ ನೇಮಕ ಇನ್ನಷ್ಟೇ ಆಗಬೇಕಿದೆ.

ಕುಶಾಲನಗರ ಪುರಸಭೆ

ಮಂಜೂರಾಗಿರುವ 104 ಹುದ್ದೆಗಳಲ್ಲಿ 33 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪರಿಸರ ಅಭಿಯಂತರರು, ದರ್ಜೆ 2ರ ಮುಖ್ಯಾಧಿಕಾರಿ, ಅಕೌಂಟೆಂಟ್, ಕಿರಿಯ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕರು, ಸಮುದಾಯ ಸಂಘಟನಾ ಅಧಿಕಾರಿ, ಶೀಘ್ರ ಲಿಪಿಗಾರರು, ಜೂನಿಯರ್ ಪ್ರೋಗ್ರಾಮರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ನೀರು ಸರಬರಾಜು ಆಪರೇಟರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್, ಕಿರಿಯ ಆರೋಗ್ಯ ನಿರೀಕ್ಷಕರು, ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 71 ಹುದ್ದೆಗಳು ಖಾಲಿ ಇವೆ.

ವಿರಾಜಪೇಟೆ ಪುರಸಭೆ

ವಿರಾಜಪೇಟೆ ಪುರಸಭೆಗೆ ಮಂಜೂರಾಗಿರುವ 92 ಹುದ್ದೆಗಳ ಪೈಕಿ 35 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಲೆಕ್ಕಾಧಿಕಾರಿ, ಅಕೌಂಟೆಂಟ್,
ಕಿರಿಯ ಇಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕರು, ಪ್ರಥಮ ದರ್ಜೆ ಸಹಾಯಕರು, ಸಮುದಾಯ ಸಂಘಟನಾ ಅಧಿಕಾರಿ, ಶೀಘ್ರ ಲಿಪಿಗಾರರು, ಜೂನಿಯರ್  ಪ್ರೋಗ್ರಾಮರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ನೀರು ಸರಬರಾಜು ಆಪರೇಟರ್, ಕಂಪ್ಯೂಟರ್, ಡಾಟಾ ಎಂಟ್ರಿ ಆಪರೇಟರ್, ಕಿರಿಯ ಆರೋಗ್ಯ ನಿರೀಕ್ಷಕರು, ಸಮುದಾಯ ಸಂಘಟಕರು ಸೇರಿದಂತೆ ೫೮ ಹುದ್ದೆಗಳು ಖಾಲಿ ಇವೆ.

ಸೋಮವಾರಪೇಟೆ ಪಪಂ

ಈ ಪಟ್ಟಣ ಪಂಚಾಯಿತಿಗೆ ಮಂಜೂರಾಗಿರುವ 40 ಹುದ್ದೆಗಳಲ್ಲಿ 20 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಿರಿಯ ಇಂಜಿನಿಯರ್, ಪ್ರಥಮ
ದರ್ಜೆ ಸಹಾಯಕರು, ನೀರು ಸರಬ ರಾಜು ಆಪರೇಟರ್, ಸಮದಾಯ ಸಂಘಟಕರು, ದ್ವಿತೀಯ ದರ್ಜೆ ಸಹಾಯಕರು, ಕರ ವಸೂಲಿಗಾ ರರು, ವಾಹನ
ಚಾಲಕರು, ಸಹಾಯಕ ನೀರು ಸರಬರಾಜು ಆಪರೇಟರ್ ಸೇರಿದಂತೆ  20 ಹುದ್ದೆಗಳು ಖಾಲಿ ಇವೆ.ಸೋಮವಾರಪೇಟೆ ಪಪಂ ಈ ಪಟ್ಟಣ ಪಂಚಾಯಿತಿಗೆ ಮಂಜೂರಾಗಿರುವ 40 ಹುದ್ದೆಗಳಲ್ಲಿ 20 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಿರಿಯ ಇಂಜಿನಿಯರ್, ಪ್ರಥಮ ದರ್ಜೆ ಸಹಾಯಕರು, ನೀರು ಸರಬ ರಾಜು ಆಪರೇಟರ್, ಸಮದಾಯ ಸಂಘಟಕರು, ದ್ವಿತೀಯ ದರ್ಜೆ ಸಹಾಯಕರು, ಕರ ವಸೂಲಿಗಾ ರರು, ವಾಹನ ಚಾಲಕರು, ಸಹಾಯಕ ನೀರು ಸರಬರಾಜು ಆಪರೇಟರ್ ಸೇರಿದಂತೆ 20 ಹುದ್ದೆಗಳು ಖಾಲಿ ಇವೆ.

ಕೊಡಗು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಈ ಸಂಬಂಧ ಈಗಾಗಲೇ ಮೇಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಸಿಬ್ಬಂದಿಗಳ ನೇಮಕವಾದಲ್ಲಿ ಸಮಸ್ಯೆ ಬಗೆಹರಿಯಲಿದೆ.

-ಬಸಪ್ಪ, ಯೋಜನಾಧಿಕಾರಿ,ಜಿಲ್ಲಾ ನಗರಾಭಿವೃದ್ಧಿ ಕೋಶ

Tags:
error: Content is protected !!