Mysore
31
scattered clouds
Light
Dark

ಇದೇನು ಶಾಲಾ ಕೊಠಡಿಯೋ, ಧೂಳು ಸಂಗ್ರಹ ಸ್ಥಳವೋ?

ನಂಜನಗೂಡು:ಶತಮಾನದ ಹೊಸ್ತಿಲಲ್ಲಿರುವ ನಗರದ ಬಾಲಕರ ಪ್ರೌಢಶಾಲೆಯ ಕೊಠಡಿಗಳ ಸ್ಥಿತಿಯನ್ನು ಕಂಡ ಶಾಸಕ ದರ್ಶನ್ ಧ್ರುವನಾರಾ ಯಣ ಅವರು, ಇದೇನು ಶಾಲಾ ಕೊಠಡಿಯೋ, ಧೂಳು ಶೇಖರಣಾ ಸ್ಥಳವೋ? ಎಂದು ಪ್ರಶ್ನಿಸಿದರು.

ಮಂಗಳವಾರ ಬಾಲಕರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿನ ಕೊಠಡಿಗಳಲ್ಲಿ ಕಸದ ರಾಶಿಯನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ, 10 ದಿನಗಳಲ್ಲಿ ಎಲ್ಲ ಕೊಠಡಿಗಗಳನ್ನೂ ಸ್ವಚ್ಛ ಗೊಳಿಸಿ ತಮಗೆ ಚಿತ್ರ ಸಹಿತವಾದ ಮಾಹಿತಿ ನೀಡುವಂತೆ ಶಾಲಾ ಮುಖ್ಯ ಶಿಕ್ಷಕಿ ಬಾಲ ಸರಸ್ವತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಅವರಿಗೆ ತಾಕೀತು ಮಾಡಿದರು.

ನಂತರ ವಾಚನಾಲಯದ ಬೀಗತೆಗಿಸಿ ನೋಡಿದಾಗ ಅನೇಕ ತಿಂಗಳುಗಳಿಂದ ಬಾಗಿಲು ತೆರೆಯದೆ ದೂಳು, ಜೇಡಗ ಳಿಂದ ಆವೃತವಾಗಿದ್ದನ್ನು ಗಮನಿಸಿ ಕುಪಿತಗೊಂಡು, ವಾಚನಾ ಲಯದ ಕೊಠಡಿಗಳ ಬಾಗಿಲು ತೆರೆಯದೇ ಎಷ್ಟು ತಿಂಗಳಾಯಿತು ಎಂದು ಪ್ರಶ್ನಿಸಿದರು.

ಪ್ರತಿದಿನ ವಾಚನಾಲಯದ ಬಾಗಿಲು ತೆರೆಯಬೇಕು. ಇಲ್ಲಿಗೆ ನಿತ್ಯ ದಿನಪತ್ರಿಕೆಗಳು, ಮಾಸ ಪತ್ರಿಕೆಗಳನ್ನು ತರಿಸಬೇಕು ಎಂದು ಸೂಚಿಸಿದರು.

10 ದಿನಗಳಲ್ಲಿ ಇಲ್ಲಿನ ಎಲ್ಲ ಕೊಠಡಿ ಗಳು ಸ್ವಚ್ಛಗೊಳ್ಳಬೇಕು. ಸ್ವಚ್ಛವಾದ ಕೊಠಡಿಗಳ ಚಿತ್ರಗಳನ್ನು ತಮಗೆ ಕಳಿಸಬೇಕು ಎಂದು ಜೊತೆಯಲ್ಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ ಅವರಿಗೆ ಆದೇಶಿಸಿದರು.

ಮುಖ್ಯ ಶಿಕ್ಷಕರ ಕೊಠಡಿಯಲ್ಲಿರುವ ಸ್ವಚ್ಛತೆಯಂತೆಯೇ ಮಕ್ಕಳು ವ್ಯಾಸಂಗ ಮಾಡುವ ಕೊಠಡಿಗಳಲ್ಲೂ ಇರಬೇಕು ಎಂದರು. ಈಗಬಿಡುಗಡೆ ಮಾಡಿಸಿರುವ 38 ಲಕ್ಷ ರೂ.ಗಳನ್ನು ಬಳಕೆ ಮಾಡಿ ಶತಮಾನಗಳ ಹೊಸ್ತಿಲ್ಲಿರುವ ಶಾಲೆಗೆ ಇನ್ನೇನು ಆಗಬೇಕು ಎಂಬುದನ್ನು ತಿಳಿಸಿ ದರೆ ಮಾಡಿಸಿಕೊಡುವುದಾಗಿ ಹೇಳಿ ದರು. ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ಮುಖ್ಯಶಿಕ್ಷಕಿ ಬಾಲಸರಸ್ವತಿ, ಶಂಕರಪುರ ಸುರೇಶ ಇತರರಿದ್ದರು.