Mysore
29
few clouds

Social Media

ಮಂಗಳವಾರ, 11 ಮಾರ್ಚ್ 2025
Light
Dark

ಸತತ 6 ದಿನಗಳ ಷೇರು ಮಾರುಕಟ್ಟೆ ಕುಸಿತಕ್ಕೆ ಬ್ರೇಕ್;‌ ನಿಟ್ಟುಸಿರು ಬಿಟ್ಟ ಹೂಡಿಕೆದಾರರು

ಮುಂಬೈ: ಕಳೆದ ೬ ದಿನಗಳಿಂದ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಕೊನೆಗೂ ಮಂಗಳವಾರ ತನ್ನ ಕುಸಿತಕ್ಕೆ ಬ್ರೇಕ್ ಹಾಕಿದ್ದು, ಹೂಡಿಕೆದಾರರು ನಿಟ್ಟು ಸಿರು ಬಿಟ್ಟಿದ್ದಾರೆ.

ಭಾರತೀಯ ಷೇರುಮಾರುಕಟ್ಟೆ ವಾರದ ಆರಂಭಿಕ ದಿನ ಸೋಮ ವಾರವೂ ಕುಸಿತಕಂಡಿತ್ತು. ಆದರೆ ಮಂಗಳವಾರ ಸತತ ಆರು ದಿನಗಳ ಕುಸಿತಕ್ಕೆ ಬ್ರೇಕ್ ಬಿದ್ದಿದ್ದು, ಮಂಗಳ ವಾರ ಸೆನ್ಸೆಕ್ಸ್ ೫೮೪. ೮೧ ಅಂಕಗಳ ಏರಿಕೆ ಯೊಂದಿಗೆ, ೮೧,೬೩೪. ೮೧ ಅಂಕಗಳಿಗೆ ಏರಿಕೆ ಕಂಡು ದಿನದ ವಹಿವಾಟು ಅಂತ್ಯಗೊಳಿಸಿದೆ.

ಅಂತೆಯೇ ನಿಫ್ಟಿ ಕೂಡ ೨೧೭. ೪೦ ಅಂಕಗಳ ಏರಿಕೆಯೊಂದಿಗೆ ೨೫,೦೧೩. ೧೫ ಅಂಕಗಳಿಗೆ ಏರಿ ವಹಿ ವಾಟು ಅಂತ್ಯಗೊಳಿಸಿದೆ. ಕಳೆ ದೊಂದು ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕದ ಕುಸಿತದಿಂದಾಗಿ ಭಾರತೀಯ ಹೂಡಿಕೆದಾರರು ಬರೋಬ್ಬರಿ ೨೬ ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದರು. ಅಂತೆಯೇ ಬಾಂಬೇ ಸ್ಟಾಕ್ ಎಕ್ಸ್ ಚೇಂಜ್ ಲಿಸ್ಟೆಡ್ ಕಂಪೆನಿಗಳ ಹೂಡಿಕೆ ಮೊತ್ತ ೪೫೨ ಲಕ್ಷ ಕೋಟಿ ರೂ. ಗೆ ಕುಸಿದಿತ್ತು.

ಯಾರಿಗೆ ಲಾಭ? ಯಾರಿಗೆ ನಷ್ಟ?
ಇನ್ನು ಮಂಗಳವಾರದ ವಹಿ ವಾಟಿನಲ್ಲಿ ನಿಫ್ಟಿಯ ಲಿಸ್ಟೆಡ್ ಸಂಸ್ಥೆಗಳಾದ ಟ್ರೆಂಟ್, ಅದಾನಿ ಎಂಟರ್‌ಪ್ರೈಸಸ್,ಅದಾನಿ ಪೋರ್ಟ್ಸ್, ಭಾರತ್ ಎಲೆಕ್ಟ್ರಾ ನಿಕ್ಸ್, ಎಂ – ಎಂ ಸಂಸ್ಥೆಗಳು ಲಾಭಾಂಶಗಳಿಸಿವೆ. ಅಂತೆಯೇ ಟಾಟಾ ಸ್ಟೀಲ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಟೈಟನ್ ಕಂಪೆನಿ, ಜೆಎಸ್‌ಡಬ್ಲ್ಯು ಸ್ಟೀಲ್ ಮತ್ತು ಬಜಾಜ್ ಫಿನ್‌ಸರ್ವ್ ಸಂಸ್ಥೆಗಳು ನಷ್ಟ ಅನುಭವಿಸಿದವು. ಲೋಹವನ್ನು ಹೊರತುಪಡಿಸಿ, ಇತರ ಎಲ್ಲಾ ವಲಯದ ಸೂಚ್ಯಂಕಗಳು ಅಂದರೆ ಆಟೋ, ಬ್ಯಾಂಕ್, ಆರೋಗ್ಯ, ರಿಯಾಲ್ಟಿ, ಬಂಡವಾಳ ಸರಕುಗಳು, ವಿದ್ಯುತ್, ಟೆಲಿಕಾಂ, ಮಾಧ್ಯಮ ವಲಯದ ಷೇರುಗಳ ಮೌಲ್ಯ ಶೇ. ೧ರಿಂದ ೨ ರಷ್ಟು ಏರಿಕೆಯಾಗಿದೆ.

Tags: