Mysore
27
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕೊಡಗು ಜಿಲ್ಲೆಯಲ್ಲಿ 279 ಮತದಾರರ ಹೆಚ್ಚಳ

ಮಡಿಕೇರಿಯಲ್ಲಿ ಇಳಿಕೆ, ವಿರಾಜಪೇಟೆಯಲ್ಲಿ ಏರಿಕೆ: ಮತದಾರರ ಪಟ್ಟಿ ಪರಿಷ್ಕರಣೆ ಬಳಿಕವೂ ಮಹಿಳಾ ಮತದಾರರೇ ಪ್ರಾಬಲ್ಯ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ೨೭೯ ಮತದಾರರು ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಇಳಿಕೆಯಾಗಿದ್ದರೆ, ವಿರಾಜಪೇಟೆ ಕ್ಷೇತ್ರದಲ್ಲಿ ಏರಿಕೆಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಬಳಿಕವೂ ಕೊಡಗಿನಲ್ಲಿ ಮಹಿಳಾ ಮತದಾರರೇ ಪ್ರಾಬಲ್ಯ ಮೆರೆದಿದ್ದಾರೆ.

೨೦೨೪ರ ಅಕ್ಟೋಬರ್ ೨೯ರ ಪ್ರಕಟಣೆಯಂತೆ ಜಿಲ್ಲೆಯಲ್ಲಿ ೫೫೨ ಮತಗಟ್ಟೆಗಳಲ್ಲಿ ೪,೭೪,೦೯೭ ಮತದಾರರು ಇದ್ದರು. ಇದರಲ್ಲಿ ೨,೩೨,೦೪೧ ಪುರುಷರು, ೨,೪೨,೦೪೧ ಮಹಿಳಾ ಮತದಾರರು ಹಾಗೂ ೧೫ ಇತರ ಮತದಾರರು ಇದ್ದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ೨೭೫ರ ಮತಗಟ್ಟೆಯಲ್ಲಿ ೨,೪೦,೨೪೭ ಮತದಾರರು ಇದ್ದು, ಇದರಲ್ಲಿ ೧,೧೬,೭೮೭ ಪುರುಷರು, ೧,೨೩,೪೫೨ ಮಹಿಳೆಯರು ಮತ್ತು ೮ ಇತರ ಮತದಾರರು ಇದ್ದರು. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೭ ಮತಗಟ್ಟೆಗಳಿದ್ದು, ೨,೩೩,೮೫೦ ಮತದಾರರು ಇದ್ದರು. ಇದರಲ್ಲಿ ೧,೧೫,೨೫೪ ಪುರುಷರು, ೧,೧೮,೫೮೯ ಮಹಿಳೆಯರು, ೭ ಮಂದಿ ಇತರೆ ಮತದಾರರು ಇದ್ದರು.

ಪ್ರಸ್ತುತ ೨೦೨೫ರ ಜನವರಿ ೬ರ ಅಂತಿಮ ಮತದಾರರ ಪಟ್ಟಿಯಂತೆ ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೪,೭೪,೩೭೬ ಮತದಾರರು ಇದ್ದಾರೆ. ೫೫೨ ಮತಗಟ್ಟೆಗಳಲ್ಲಿ ೨,೩೨,೦೪೨ ಪುರುಷರು ಮತ್ತು ೨,೪೨,೩೨೧ ಮಹಿಳಾ ಮತದಾರರು ಇದ್ದು, ೧೩ ಇತರೆ ಮತದಾರರು ಇದ್ದಾರೆ. ಕೊಡಗು ಜಿಲ್ಲೆಯಲ್ಲಿ ೧,೩೪೩ ಸೇವಾ ಮತದಾರರು ಇದ್ದಾರೆ. ಇದರಲ್ಲಿ ೧,೨೮೪ ಪುರುಷ ಮತ್ತು ೫೯ ಮಹಿಳಾ ಸೇವಾ ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದ ೨೭೫ ಮತಗಟ್ಟೆಯಲ್ಲಿ ೨,೪೦,೧೬೩ ಮತದಾರರು ಇದ್ದು, ಇದರಲ್ಲಿ ೧,೧೬,೬೮೪ ಪುರುಷರು, ೧,೨೩,೪೭೨ ಮಹಿಳೆಯರು ಮತ್ತು ೭ ಇತರ ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೭೭ ಮತಗಟ್ಟೆಗಳಿದ್ದು, ೨,೩೪,೨೧೩ ಮತದಾರರು ಇದ್ದಾರೆ. ಇದರಲ್ಲಿ ೧,೧೫,೩೫೮ ಪುರುಷರು, ೧,೧೮,೮೪೯ ಮಹಿಳೆಯರು, ೬ ಮಂದಿ ಇತರೆ ಮತದಾರರು ಇದ್ದಾರೆ.

ಮಡಿಕೇರಿ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ ಇಳಿಕೆಯಾಗಿದ್ದು, ವಿರಾಜಪೇಟೆ ಕ್ಷೇತ್ರದಲ್ಲಿ ಏರಿಕೆಯಾಗಿರುವುದು ಗಮನಾರ್ಹವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅವಧಿಯಲ್ಲಿ ಜಿಲ್ಲೆಯಲ್ಲಿ ನಮೂನೆ-೬ರಲ್ಲಿ ೧,೫೪೯ ಅರ್ಜಿ ಸ್ವೀಕೃತವಾಗಿದ್ದು, ೧,೪೬೦ ಅರ್ಜಿಗಳು ಅಂಗೀಕಾರವಾಗಿವೆ. ೮೯ ಅರ್ಜಿಗಳು ತಿರಸ್ಕೃತವಾಗಿವೆ. ನಮೂನೆ-೭ರಡಿ ೧,೬೩೧ ಅರ್ಜಿಗಳು ಸ್ವೀಕೃತವಾಗಿದ್ದು, ೧,೫೪೯ ಅರ್ಜಿಗಳು ಅಂಗೀಕೃತವಾಗಿವೆ. ೮೨ ಅರ್ಜಿಗಳು ತಿರಸ್ಕೃತಗೊಂಡಿವೆ. ಹಾಗೆಯೇ ನಮೂನೆ-೮ರಲ್ಲಿ ೩,೧೨೩ ಅರ್ಜಿಗಳು ಸ್ವೀಕೃತವಾಗಿದ್ದು, ೨,೮೭೧ ಅರ್ಜಿಗಳು ಅಂಗೀಕೃತವಾಗಿವೆ. ೨೫೨ ಅರ್ಜಿಗಳು ತಿರಸ್ಕೃತಗೊಂಡಿವೆ.

ಮತದಾರರ ಪಟ್ಟಿ ಪರಿಷ್ಕರಣೆ ಅವಽಯಲ್ಲಿ ೧೮-೧೯ ವರ್ಷದ ಯುವ ಮತದಾರರ ನೋಂದಣಿ ಕುರಿತಂತೆ ನಮೂನೆ-೬ನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ ಜಿಲ್ಲೆಯಲ್ಲಿ ೫೦೦ ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ ೪೯೦ ಅರ್ಜಿ ಅಂಗೀಕೃತವಾಗಿದ್ದು, ೧೦ ಅರ್ಜಿ ಅರ್ಜಿಗಳು ತಿರಸ್ಕೃತವಾಗಿವೆ. ಪ್ರಸ್ತುತ ಮತದಾರರ ಪಟ್ಟಿ ನಿರಂತರ ಪರಿಷ್ಕರಣೆ ನಡೆಯುತ್ತಿದ್ದು, ಈ ಅವಧಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-೬ರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-೭ರಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತದಾರರ ಪಟ್ಟಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-೮ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಮತದಾರರ ಪಟ್ಟಿ ಮತ್ತು ಚುನಾವಣೆಯ ಕುರಿತು ಮತದಾರರಿಗೆ ಮಾಹಿತಿ ನೀಡುವ ಸಲುವಾಗಿ ಭಾರತ ಚುನಾವಣಾ ಆಯೋಗವು ಮತದಾರರ ಸಹಾಯವಾಣಿ ಆಪ್ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿ ಪಡಿಸಿದ್ದು, ಎಲ್ಲಾ ಮತದಾರರು, ನಾಗರಿಕರು ತಮ್ಮ ಮೊಬೈಲ್‌ನಲ್ಲಿ ಮತದಾರರ ಸಹಾಯವಾಣಿ ವೋಟರ್ ಹೆಲ್ಪ್‌ಲೈನ್ ಆಪ್‌ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೋರಿದೆ.

 

Tags:
error: Content is protected !!