ನಂಜನಗೂಡು: ನನ್ನ ಓದು ಆರಂಭವಾಗಿದ್ದೇ ‘ಆಂದೋಲನ’ ಪತ್ರಿಕೆಯಿಂದ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಿಳಿಸಿದರು. ತಾಲ್ಲೂಕು ಆಡಳಿತ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ‘ಆಂದೋಲನ’ದ ೫೨ನೇ ವರ್ಷದ ವಿಶೇಷ ಸಂಚಿಕೆಯನ್ನು ಲೋಕಾರ್ಪ ಣೆಗೊಳಿಸಿ ಅವರು ಮಾತನಾಡಿದರು. ನಾನು ಚಿಕ್ಕವನಾಗಿದ್ದಾಗ ಮನೆಗೆ ಬರುತ್ತಿದ್ದ ‘ಆಂದೋಲನ’ದ ಅಕ್ಷರ ಗಳನ್ನು ಓದಿಯೇ ಕನ್ನಡ ಕಲಿತಿದ್ದು. ಕೋಟಿಯವರು ಕಟ್ಟಿ ಬೆಳೆಸಿದ ಈ ಸಮಾಜಮುಖಿ ಸಂಸ್ಥೆಯನ್ನು ಇಂದು ಅವರ ಮಕ್ಕಳು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಪತ್ರಿಕೆ ಶತನೋತ್ಸವ ಕಾಣುವಂತಾಗಲಿ ಎಂದರು. ಹೋರಾಟಗಾರ ಚುಂಚನಹಳ್ಳಿ ಮಲ್ಲೇಶ ಮಾತನಾಡಿ, ೭೦ – ೮೦ರ ದಶಕದಲ್ಲಿ ‘ಆಂದೋಲನ’ ರೈತ, ದಲಿತ ಚಳವಳಿಗಳ ಹೋರಾಟಗಾರರ ಬೆನ್ನೆಲು ಬಾಗಿ ಕೆಲಸ ಮಾಡಿತ್ತು ಎಂದು ಸ್ಮರಿಸಿ ದರು. ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ, ತಹಸಿಲ್ದಾರ್ ಶಿವಕುಮಾರ್ ಕ್ಯಾಸನೂರು, ತಾಪಂ ಇಒ ಜೆರಾಲ್ಡ್ ರಾಜೇಶ್, ಮಲ್ಲಳ್ಳಿ ನಾರಾಯಣ, ಚುಂಚನ ಹಳ್ಳಿ ಮಲ್ಲೇಶ, ಕಾರ್ಯ ಬಸವಣ್ಣ, ವಿಜಯಕುಮಾರ್, ಸ್ವಾಮಿ, ಬೊಕ್ಕಹಳ್ಳಿ ಲಿಂಗಯ್ಯ, ದೇವರಾಜು, ಮಹದೇವಯ್ಯ, ರಾಜೇಶ, ಸಿ. ಎಂ. ಶಂಕರ್, ದೇವನೂರು ಶಿವಪ್ಪದೇವರು, ವಿಜಯ ಕುಮಾರ್, ದೊರೆಸ್ವಾಮಿ ನಾಯಕ, ಹಗಿನವಾಳು ಬಸವಣ್ಣ ಹಾಜರಿದ್ದರು.