Mysore
15
overcast clouds

Social Media

ಗುರುವಾರ, 08 ಜನವರಿ 2026
Light
Dark

ಪಾರಂಪರಿಕ ಇಲಾಖೆ ಹುಟ್ಟು ಹಾಕಿದವರು ಎಸ್‌ಎಂಕೆ: ಪ್ರೊ. ಎನ್. ಎಸ್. ರಂಗರಾಜು

ಮೈಸೂರು: ರಾಜ್ಯದಲ್ಲಿ ಪ್ರಾಚ್ಯವಸ್ತು, ಪುರಾತತ್ವ ಮತ್ತು ಸಂಗ್ರಹಾಲಯಗಳ ಇಲಾಖೆ ಪ್ರಾರಂಭ ಮಾಡಿ ಅದಕ್ಕೆ ಪುರಾತತ್ವ ಶಾಸ್ತ್ರ ಅಧ್ಯಯನ ಮಾಡಿದ ಅಧಿಕಾರಿಗಳನ್ನೇ ನೇಮಿಸಬೇಕು ಎಂಬ ನಿಯಮ ತಂದವರು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಎಂದು ಪಾರಂಪರಿಕ ತಜ್ಞ ಪ್ರೊ. ಎನ್. ಎಸ್. ರಂಗರಾಜು ತಿಳಿಸಿದ್ದಾರೆ.

೨೦೦೪ರಲ್ಲಿ ಪರಂಪರೆ ಸಂರಕ್ಷಣಾ ಸಮಿತಿ ಪ್ರಾರಂಭ ಮಾಡಿ ಸರ್ಕಾರಿ ಆದೇಶ ಹೊರಡಿಸಿದ್ದರು. ಮೈಸೂರು, ಶ್ರೀರಂಗಪಟ್ಟಣ ಪರಂಪರೆ ರಕ್ಷಣೆ ಮಾಡುವುದಕ್ಕೆ ಪ್ರಮುಖ ಪಾತ್ರ ವಹಿಸಿದ್ದರು. ಇದರ ಜತೆಗೆ ಬೀದರ್, ಕಲಬುರಗಿ, ವಿಜಯಪುರ, ಕಿತ್ತೂರಿನಲ್ಲಿ ರುವ ವಿವಿಧ ಕ್ಷೇತ್ರಗಳ ರಕ್ಷಣೆಗೆ ಹೆಚ್ಚಿನ ಆಸ್ಥೆ ವಹಿಸಿದ್ದರು. ಸದ್ಯಕ್ಕೆ ಪ್ರಾಚ್ಯವಸ್ತು, ಪುರಾತತ್ವ ಮತ್ತು ಸಂಗ್ರಹಾಲಯಗಳ ಇಲಾಖೆ ಮೈಸೂರಿನಲ್ಲಿರುವ ಕರ್ನಾಟಕ ವಸ್ತುಪ್ರದರ್ಶನದ ಆವರಣದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ.

ಪಾರಂಪರಿಕ ರಚನೆಗಳ ರಕ್ಷಣೆ ಮತ್ತು ಸಂರಕ್ಷಣೆಯ ಮಹತ್ವವನ್ನು ಅರಿತಿದ್ದ ಕೃಷ್ಣ ಅವರು, ವಿಶೇಷವಾಗಿ ಮೈಸೂರಿನಲ್ಲಿ ಪಾರಂಪರಿಕ ಇಲಾಖೆಯನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ನಂತರ ಅದರ ವಿಲೀನವನ್ನು ಜಾರಿಗೆ ತಂದರು. ಪ್ರಾಚ್ಯವಸ್ತು, ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯನ್ನು ನಂತರದ ದಿನಗಳಲ್ಲಿ ಆಯುಕ್ತಾಲಯವನ್ನಾಗಿ ಮೇಲ್ದರ್ಜೆ ಗೇರಿಸಲಾಗಿದ್ದು, ಐಎಎಸ್ ಅಥವಾ ಹಿರಿಯ ಕೆಎಎಸ್ ಅಧಿಕಾರಿಯನ್ನು ಆಯುಕ್ತ ರನ್ನಾಗಿ ನೇಮಕ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ನಿರ್ದೇಶಕರು, ಪುರಾತತ್ವ ಶಾಸ್ತ್ರಜ್ಞರು ಇಲಾಖೆಯ ಮುಖ್ಯಸ್ಥರಾಗಿರುತ್ತಿದ್ದರು ಎಂದು ಪ್ರೊ. ಎನ್. ಎಸ್. ರಂಗರಾಜು ನೆನಪಿಸಿಕೊಂಡರು.

ಐಎಎಸ್ ಅಧಿಕಾರಿ ತ. ಮ. ವಿಜಯಭಾಸ್ಕರ್ ಇಲಾಖೆಯ ಮೊದಲ ಆಯುಕ್ತರಾಗಿದ್ದರು. ‘ನಿರ್ದೇಶಕರ ಕಚೇರಿಯನ್ನು ವಿಜಯನಗರ ಜಿಲ್ಲೆಯ ಹಂಪಿಗೆ ಸ್ಥಳಾಂತರಿಸಲಾಯಿತು. ತಜ್ಞರನ್ನು ಒಳಗೊಂಡ ಪಾರಂಪರಿಕ ಸಮಿತಿಯನ್ನು ರಚಿಸಲಾಯಿತು. ಮೈಸೂರು ಮತ್ತು ಶ್ರೀರಂಗಪಟ್ಟಣ ವನ್ನು ಜಂಟಿಯಾಗಿ ‘ಪಾರಂಪ ರಿಕ ನಗರ’ವೆಂದು ಘೋಷಿಸಲಾಯಿತು. ಬಳಿಕ ವಿಜಯಪುರ, ಕಲಬುರಗಿ, ಬೀದರ್ ಮತ್ತು ಬೆಳಗಾವಿ ಜಿಲ್ಲೆಯ ಕಿತ್ತೂರನ್ನು ಸೇರಿಸಲಾಯಿತು ಎಂದು ಅವರು ಎಸ್. ಎಂ. ಕೃಷ್ಣ ಅವರ ಕಾರ್ಯ ವೈಖರಿಯನ್ನು ಸ್ಮರಿಸಿಕೊಂಡಿದ್ದಾರೆ.

 

Tags:
error: Content is protected !!