ಪ್ರವಾಹ ಭೀತಿಯಲ್ಲಿದ್ದ ಜನತೆ ಈಗ ನಿರಾಳ: ಜಮೀನುಗಳಿಗೆ ನೀರು ಹರಿಸಲು ಆಗ್ರಹ
- ಮಂಜು ಕೋಟೆ
ಎಚ್. ಡಿ. ಕೋಟೆ: ತಾಲ್ಲೂಕಿನ ಕಬಿನಿ, ನುಗು, ತಾರಕ ಜಲಾಶಯಗಳು ಭರ್ತಿಯಾಗಿದ್ದರಿಂದ ಹೊರ ಬಿಡಲಾಗುತ್ತಿದ್ದ ಭಾರೀ ಪ್ರಮಾಣದ ನೀರನ್ನು ಕಡಿಮೆ ಮಾಡಿರುವುದರಿಂದ ತಾಲ್ಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿರುವ ಕಬಿನಿ, ತಾರಕ, ನುಗು ಜಲಾಶಯಗಳು ಜುಲೈ ತಿಂಗಳಲ್ಲೇ ಭರ್ತಿಯಾಗಿ ರೈತರು, ಜನರಲ್ಲಿ ಸಂತಸ ಮೂಡಿತ್ತು. ಆದರೆ, ಕೇರಳದ ವಯನಾಡು, ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯ ಆರ್ಭಟದಿಂದ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದ್ದರಿಂದ ಪ್ರವಾಹ ಸ್ಥಿತಿ ಉಂಟಾಗಿ ಜನಸಾಮಾನ್ಯರಲ್ಲಿ ಆತಂಕ ಉಂಟಾಗಿತ್ತು.
ಆದರೆ, ೨ ದಿನಗಳಿಂದ ಮಳೆ ಪ್ರಮಾಣ ಕಡಿಮೆ ಯಾಗಿದ್ದು ಜಲಾಶಯಗಳಿಗೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಸಹ ಕಡಿಮೆಯಾಗಿದೆ. ಇದರಿಂ ದಾಗಿ ಕಬಿನಿ ಜಲಾಶಯದಿಂದ ಹೊರಬಿಡುತ್ತಿದ್ದ ೭೦ ಸಾವಿರ ಕ್ಯೂಸೆಕ್ಸ್ ನೀರಿನ ಹೊರಹರಿ ವನ್ನು ೪೦ ಸಾವಿರ ಕ್ಯೂಸೆಕ್ಸ್‌ಗೆ ಇಳಿಸಲಾಗಿದೆ. ತಾರಕ ಜಲಾಶಯದಿಂದ ೩ ಸಾವಿರ ಕ್ಯೂಸೆಕ್ಸ್‌ನಿಂದ ೨೦೦ ಕ್ಯೂಸೆಕ್ಸ್‌ಗೆ, ನುಗು ಜಲಾಶಯದಿಂದ ೧೦ ಸಾವಿರ ಕ್ಯೂಸೆಕ್ಸ್‌ನಿಂದ ೩ ಸಾವಿರ ಕ್ಯೂಸೆಕ್ಸ್‌ಗೆ ಹೊರಹರಿವನ್ನು ತಗ್ಗಿಸಲಾಗಿದೆ.
ಒಂದೇ ತಿಂಗಳಲ್ಲಿ ಮೂರು ಜಲಾಶಯಗಳಿಂದ ೬೫ ಟಿಎಂಸಿ ನೀರನ್ನು ನದಿಯ ಮೂಲಕ ತಮಿಳು ನಾಡಿಗೆ ಹರಿಸಲಾಗಿದೆ. ಮೂರೂ ಜಲಾಶಯಗಳಿಗೆ ಒಟ್ಟು ೮೦ ಟಿಎಂಸಿ ನೀರು ಹರಿದು ಬಂದಿದೆ. ಕಬಿನಿ ಜಲಾಶಯದ ಗರಿಷ್ಟ ಮಟ್ಟ ೮೪ ಅಡಿಗಳನ್ನು ತಲುಪಿದ್ದು, ಒಳಹರಿವು ೪೦,೦೦೦ ಕ್ಯೂಸೆಕ್ಸ್‌ನಷ್ಟಿದೆ.
ನುಗು ಜಲಾಶಯದ ಗರಿಷ್ಟ ಮಟ್ಟ ೧೧೦ ಅಡಿಗಳಿದ್ದು, ಸಂಪೂರ್ಣ ಭರ್ತಿಯಾಗಿದೆ. ೫ ಸಾವಿರ ಕ್ಯೂಸೆಕ್ಸ್ ಹರಿದುಬರುತ್ತಿದೆ.
ತಾರಕ ಜಲಾಶಯವೂ ಗರಿಷ್ಟ ಮಟ್ಟ ೧೨೫ ಅಡಿಗಳನ್ನು ತಲುಪಿದ್ದು ೩೦೦ ಕ್ಯೂಸೆಕ್ಸ್ ಒಳಹರಿವು ಬರುತ್ತಿದೆ. ಈ ಎಲ್ಲಾ ಜಲಾಶಯಗಳು ಏಕಕಾಲ ದಲ್ಲೇ ಭರ್ತಿಯಾಗಿದ್ದು, ಜಲಾಶಯಗಳಿಂದ ಕೆರೆ ಕಟ್ಟೆಗಳಿಗೆ, ರೈತರ ಜಮೀನುಗಳಿಗೆ ನೀರು ಹರಿಸಲು ಅಽಕಾರಿಗಳು ಮತ್ತು ಜನಪ್ರತಿನಿಽಗಳು ಸಕ್ರಿಯವಾಗಿ ಕೆಲಸ ನಿರ್ವಹಿಸಬೇಕಿದೆ.
ಕ್ಷೇತ್ರದ ಕಬಿನಿ, ತಾರಕ, ನುಗು ಜಲಾಶಯಗಳು ಕಳೆದ ತಿಂಗಳು ಭರ್ತಿಯಾಗಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ತಾರಕ ಮತ್ತು ನುಗು ಜಲಾಶಯಗಳಿಗೆ ಬಾಗಿನ ಅರ್ಪಿಸಲಾ ಗುವುದು. ಕಬಿನಿ ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ ವೇಳೆ ಕ್ಷೇತ್ರದ ಮತ್ತು ಜಲಾಶಯಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದ್ದಾರೆ
-ಅನಿಲ್ ಚಿಕ್ಕಮಾದು, ಶಾಸಕರು





