Mysore
23
clear sky

Social Media

ಬುಧವಾರ, 21 ಜನವರಿ 2026
Light
Dark

ಓದುಗರ ಪತ್ರ: ಜಿಎಸ್‌ಟಿ ಗೊಂದಲ ನಿವಾರಿಸಿ

ಓದುಗರ ಪತ್ರ

ವೈಯಕ್ತಿಕ, ಜೀವ ವಿಮಾ ಪಾಲಿಸಿ ಮತ್ತು ಆರೋಗ್ಯ ವಿಮಾ ಪಾಲಿಸಿಗಳ ಪ್ರೀಮಿಯಂ ಮೇಲೆ ಪ್ರಸ್ತುತ ಇರುವ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ಗೆ, ಸಂಪೂರ್ಣ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಬಯಸಿದೆ ಎಂದು ಕೇಂದ್ರ ವಿಮೆ ಸಂಬಂಧಿಸಿದ ಸಮಿತಿಯ ಸಂಚಾಲಕರಾದ ಸಾಮ್ರಾಟ ಚೌಧರಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ. ಈ ಬಗ್ಗೆ ಅಂತಿಮ ತೀರ್ಮಾನವನ್ನು ಮುಂದಿನ ತಿಂಗಳು ಸೆಪ್ಟೆಂಬರ್ ೯ ರಂದು, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಆದರೆ, ಈಗ ಪಾಲಿಸಿಯನ್ನು ತೆಗೆದುಕೊಳ್ಳುವ ಗ್ರಾಹಕರು ಹಾಲಿ ಇರುವ ಜಿಎಸ್‌ಟಿಯನ್ನು ಪಾವತಿಸಲೇ ಬೇಕು, ಕೆಲವು ಗ್ರಾಹಕರು ಸೆಪ್ಟೆಂಬರ್ ೯ ರ ವರೆಗೆ ಕಾದು ನೋಡಿ ನಂತರ ಪಾಲಿಸಿ ತೆಗೆದುಕೊಳ್ಳಲು ಬಯಸುತ್ತಾರೆ. ಇದರಿಂದಾಗಿ ವಿಮಾ ಕಂಪೆನಿಗಳ ಹೊಸ ವ್ಯವಹಾರವು ಕುಂಠಿತವಾಗುವ ಸಾಧ್ಯತೆ ಇರುತ್ತದೆ, ಆದ್ದರಿಂದ ಆಗಸ್ಟ್ ೨೦(೨೦೨೫) ರಿಂದ ತೆಗೆದುಕೊಳ್ಳುವ ಪಾಲಿಸಿಗಳಿಗೆ ಜಿಎಸ್‌ಟಿ ತೆರಿಗೆ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳ ಬೇಕಾಗುತ್ತದೆ, ಜಿಎಸ್‌ಟಿ ಗೊಂದಲದ ಬಗ್ಗೆ ಕೇಂದ್ರ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಲಿ.

– ಬೂಕನಕೆರೆ ವಿಜೇಂದ್ರ , ಕುವೆಂಪು ನಗರ, ಮೈಸೂರು

Tags:
error: Content is protected !!