Mysore
22
broken clouds
Light
Dark

ಶೃತಿ ಬದುಕಿಗೆ ರಾಗ ನೀಡಿದ ಝಮ್ಯಾಟೊ

• ಹನಿ ಉತ್ತಪ್ಪ

ಸಾಮಾನುಗಳನ್ನು ತರುವುದಕ್ಕೆಂದು ಹೊರಟಾಗ ಸಂಜೆಯಾಗಿತ್ತು, ಅಲ್ಲೇ ಪಕ್ಕದಲ್ಲಿ ಖಾಸಗಿ ಆಹಾರ ಕಂಪೆನಿಯ ಮಹಿಳಾ ಉದ್ಯೋಗಿಯೊಬ್ಬರು ಆನ್ ಲೈನ್ ಆರ್ಡರ್ ಗಳನ್ನು ನೀಡುವುದಕ್ಕಾಗಿ ಹೊರಬಂದಿದ್ದರು. ನನ್ನನ್ನು ನೋಡಿ ನಕ್ಕರು. ಅವರಾಡಿದ ಮುಕ್ತ ಮಾತುಗಳೆಲ್ಲ ಬದುಕಿನ ಕತೆಯನೇ ತೆರೆದಿಟ್ಟವು.

“ಖಾಸಗಿ ಕಂಪನಿಗಳಲ್ಲಿ ಹಗಲು ರಾತ್ರಿ ಎನ್ನದೆ ದುಡಿಸಿಕೊಳ್ಳುತ್ತಾರೆ, ಸಂಬಳ ಸರಿಯಾಗಿ ಕೊಡಲ್ಲ’ ಎನ್ನುವ ಮಾತುಗಳು: ಬಾಯಿಪಾಠವಾಗಿ ಹೋದಂತಿವೆ. ಹಾಗಾದರೆ ಎಲ್ಲ ಖಾಸಗಿ ಕಂಪೆನಿಗಳಿಗೂ ಈ ಮಾತು ಹೊಂದುತ್ತದೆಯಾ? ಎಂದರೆ ಇಲ್ಲ, ಕೆಲಸ ಮಾಡುತ್ತಿರುವ ಉದ್ಯೋಗಿಗಳ ನಿಜಸ್ಥಿತಿ ಬೇರೆಯೇ ಆಗಿದೆ ಎನ್ನುತ್ತಾರೆ ಶೃತಿ ಭರತ್.

ಶೃತಿ ಭರತ್ ಇವರು ಖಾಸಗಿ ಆಹಾರ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ದ್ವಿತೀಯ ಪಿಯುಸಿ ಮುಗಿಸಿ, ಆರ್ಥಿಕ ಪರಿಸ್ಥಿತಿಯಿಂದಾಗಿ ಮುಂದೆ ಓದುವುದಕ್ಕೆ ಶೃತಿ ಅವರಿಗೆ ಸಾಧ್ಯವಾಗಲಿಲ್ಲ. ಮನೆಯಲ್ಲಿ ಸುಮನೆ ಕೂರಲೂ ಆಗದೆ, ಕೆಲಸಗಳನ್ನು ಹುಡುಕುತ್ತಿರು ವಾಗ ಪರಿಚಯವಾದ ಸೇಹವೊಂದು ಪ್ರೀತಿಯಾಗಿ, ಏಳು ವರ್ಷಗಳಾದ ಮೇಲೆ ಒಂದು ವರ್ಷದ ಹಿಂದೆ ಅವರನ್ನೇ ಮದುವೆಯಾದರು. ಝಮ್ಯಾಟೊದಲ್ಲಿ ಕೆಲಸ ಮಾಡುತ್ತಿದ್ದ ಭರತ್ ಅವರನ್ನು ಮದುವೆಯಾದ ಮೇಲೆ ತನಗೂ ಆರ್ಥಿಕ ಸ್ವಾವಲಂಬಿತನ ಬೇಕೆನಿಸಿದ್ದಿತು. ಕೆಲಸಕ್ಕಾಗಿ ಅಲೆದಾಟ ಆರಂಭವಾಗಿದ್ದೇ ಅಲ್ಲಿಂದ.

ಗುಮಾಸ್ತ ಕೆಲಸಕ್ಕೂ ಓದು, ಪದವಿ ಇದ್ದರೆ ಮಾತ್ರವಲ್ಲ ಮುಖ್ಯವಾಗಿ ಹಣ ಇರಬೇಕು ಎಂಬ ಸಂಗತಿ ತಿಳಿಯುವುದಕ್ಕೆ ಶೃತಿ ಅವರಿಗೆ ಹೆಚ್ಚೇನೂ ಸಮಯ ಹಿಡಿಯಲಿಲ್ಲ. ಇನ್ನೊಬ್ಬರಿಗೆ ಅನ್ಯಾಯ ಮಾಡದ ಯಾವ ಕೆಲಸವಾದರೂ ಸರಿ ಎನ್ನುತ್ತಾ ಅನೇಕ ಕಡೆಗಳಲ್ಲಿ ಹುಡುಕುತ್ತಿದ್ದರು. ಕಾಕತಾಳಿಯವೋ ಏನೊ, ಇದೇ ಖಾಸಗಿ ಆಹಾರ ಕಂಪೆನಿಯ ಮುಖ್ಯಸ್ಥರಾಗಿದ್ದ ಪರಿಚಿತರೊಬ್ಬರಿಂದ ಕೆಲಸವೂ ಸಿಕ್ಕಿತು.

ಗ್ರಾಹಕರ ಆರ್ಡರ್ ಗಳನ್ನು ತೆಗೆದುಕೊಳ್ಳುವ ಕೆಲಸವದು. ಬೆಳಿಗ್ಗೆ ಒಂಬತ್ತು ಗಂಟೆಯಿಂದ ತಡರಾತ್ರಿ ಎರಡು-ಮೂರು ಗಂಟೆಯವರೆಗೂ ಅಲ್ಲಿ ನಿತ್ಯ ಆಹಾರ ಸರಬರಾಜು ಆಗುತ್ತಲೇ ಇರುತ್ತದೆ. ಆದರೆ, ಇವರ ಕೆಲಸ ಆರಂಭವಾಗುವುದೇ. ಮಧ್ಯಾಹ್ನ ಹನ್ನೆರಡು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಕೆಲಸ ಇರುತ್ತದೆ. ತಿಂಗಳಿಗೆ ಹದಿನೇಳು ಸಾವಿರ ರೂಪಾಯಿ ಸಂಬಳ ನೀಡುತ್ತಾರೆ. ಉದ್ಯೋಗಕ್ಕೆ ಸೇರಿ ಏಳು ತಿಂಗಳಾದರೂ ಕಷ್ಟವೆಂದು ಇವರಿಗೆ ಅನಿಸಿಯೇ ಇಲ್ಲ.

‘ನೋಡಿ, ಅಡ್ಡೆ ಮಾಡಿ, ಮನೆ ಕೆಲ್ಲನೆಲ್ಲ ಮುಗಿಟ್ಟು ಬರ್ಬೋದಲ್ಲಾ! ಇಷ್ಟು ಸಂಬಳ ಯಾರು ಕೊಡ್ತಾರೆ, ಮತ್ತೆ ಎಲ್ಲ ಕಡೆ ಓದಿದೋ ರನ್ನೇ ಕೆಲ್ಲಕ್ಕೆ ತಗೊಳ್ತಾರೆ ಎಂಬ ಮಾತುಗಳ ನಂತೂ ಭಾವ ತುಂಬಿ ನುಡಿಯುತ್ತಾರೆ. ಈ ಆಹಾರದಂಗಡಿಯಲ್ಲೇ ಕೂತು ತಿನ್ನಬೇಕೆಂದರೆ ಆನ್‌ಲೈನ್ ಆರ್ಡರ್ ಮಾಡಬೇಕು. ಕೌಂಟರ್ ನಲ್ಲಿ ನಂಬರ್ ಹೇಳಿ, ಆನಂತರ ಹಣ ಪಾವತಿಸ ಬೇಕು. ನಮ್ಮ ಕೆಲಸ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿಕೊಡುವುದು. ಈಗಿನ ಯುವಕರು ಇದನ್ನೆಲ್ಲ ಆರಾಮಾಗಿ ಮಾಡುತ್ತಿದ್ದರೆ, ಹಿರಿಯರು ಮಾತ್ರ ಏನೊ ಮ್ಯಾಜಿಕ್ ಎಂಬಂತೆ ಕಾಣುತ್ತಾರೆ. ಒಮ್ಮೊಮ್ಮೆ, ಅದು ಬೇಡ, ಇದು ಬೇಕಿತ್ತು’ ಎನ್ನುವವರು ಸಿಗುತ್ತಾರೆನ್ನುತ್ತಾ ನಗು ತ್ತಾರೆ. ಆಗೆಲ್ಲ ಶೃತಿ ಅವರಿಗೆ ಮನೆಯವರದ್ದೇ ನೆನಪು. ಗ್ರಾಹಕರೊಡನೆ ವ್ಯವಹರಿಸುವಾಗ ಸಿಟ್ಟು ಬಂದರೂ, ನನ್ನ ಕೆಲಸವೇ ಇದು ಎಂದು ಸುಮ್ಮನಾಗುತ್ತಾರೆ.

ಕೆಲಸ ಸಿಕ್ಕ ಮೇಲೆ ಇವರ ಬದುಕು ಆರಾಮಾಗಿದೆ. ಖುಷಿಯಾಗಿದೆ. ಹೆಣ್ಣು ತನ್ನ ಖರ್ಚುಗಳನ್ನು ತಾನೇ ನಿಭಾಯಿಸಿಕೊಳ್ಳಬೇಕು. ಒಬ್ಬರಿಗೆ ಕೊಡುವುದಕ್ಕೆ ಸಾಧ್ಯವಾಗದಿದ್ದರೂ ನಮ್ಮ ಸಣ್ಣ ಆಸೆಗಳನ್ನು ಪೂರೈಸುವುದಕ್ಕಾದರೂ ಎನ್ನುತ್ತಾ ಕೈಯಲ್ಲಿರುವ ಕೆಲಸವೇ ಕಾಯಕವೆಂದು ತಿಳಿದಿದ್ದಾರೆ.