ಮುಂಗಾರು ಬಿತ್ತನೆಗೆ ಯೂರಿಯಾ ರಸಗೊಬ್ಬರ ಪೂರೈಕೆ ಆಗದ ಕಾರಣ ರೈತ ಸಮುದಾಯ ಕೈಚೆಲ್ಲಿ ಕುಳಿತಿದೆ, ಹೀಗಿದ್ದರೂ ಸದನದಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷದ ಶಾಸಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿಯೇ ಕಾಲಹರಣ ಮಾಡುವುದು ಸರಿಯಲ್ಲ.
ರೈತರ ಬಗ್ಗೆ ರಾಜಕೀಯ ಮಾಡುವ ಮುಖಂಡರ ಧೋರಣೆ ಸರಿಯಲ್ಲ. ಅನ್ನದಾತರ ವಿಚಾರದಲ್ಲಿ ಚೆಲ್ಲಾಟ ಆಡುವುದು ಶೋಭಾ ತರುವುದಿಲ್ಲ. ಪಕ್ಷಭೇದ ಮರೆತು ರಸಗೊಬ್ಬರ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಸಕಾಲದಲ್ಲಿ ರಸಗೊಬ್ಬರ ಬಿತ್ತನೆ ಬೀಜ ಪೂರೈಸಿ ರೈತರ ಹಿತ ಕಾಯಬೇಕಾಗಿದೆ..
-ಸಿದ್ದಲಿಂಗೇಗೌಡ,ಹೈರಿಗೆ, ಎಚ್. ಡಿ. ಕೋಟೆ ತಾಲ್ಲೂಕು.





