ಮೈಸೂರು: ರಾಜ್ಯ ಸರ್ಕಾರ ಪಂಚ ಖಾತ್ರಿ ಯೋಜನೆಗಳನ್ನು ಜಾರಿಗೊಳಿಸಿದ್ದರೆ, ಇತ್ತ ನಗರದ ಅರಮನೆಯಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯನ್ನು ಬಹಳ ಮುತುವರ್ಜಿಯಿಂದ ಪೋಷಣೆ ಮಾಡಲು ಅರಣ್ಯ ಇಲಾಖೆಯು ಪಂಚ ಸೂತ್ರಗಳನ್ನು ರೂಪಿಸಿದೆ.
ಆಹಾರ, ಆರೈಕೆ, ತಾಲೀಮು, ತರಬೇತಿ ಮತ್ತು ವ್ಯಾಯಾಮ. . ! ಇವೇ ಆ ಸೂತ್ರಗಳು. ಇವುಗಳ ಅಡಿಯಲ್ಲೇ ಆನೆಗಳನ್ನು ಜಂಬೂಸವಾರಿಗೆ ಅಣಿಗೊಳಿಸಲಾಗುತ್ತಿದೆ. ಅದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿ ದ್ದಾರೆ. ವಿಶ್ವವಿಖ್ಯಾತ ಜಂಬೂಸವಾರಿಗೆ ಆನೆಗಳನ್ನು ಸಜ್ಜುಗೊಳಿಸುವುದು ಸವಾಲಿನ ಕೆಲಸ. ಅದಕ್ಕಾಗಿ ತಿಂಗಳುಗಟ್ಟಲೆ ಸಿದ್ಧತೆ ಬೇಕು. ಆದ್ದರಿಂದ ಪಂಚಸೂತ್ರಗಳ ಪ್ರಕಾರವೇ ಈ ಪ್ರಕ್ರಿಯೆ ಸಾಗುತ್ತದೆ.
ನಿತ್ಯ ತಾಲೀಮು: 750 ಕೆ. ಜಿ. ತೂಕದ ಅಂಬಾರಿ ಹೊತ್ತುಕೊಳ್ಳುವ ‘ಅಭಿಮನ್ಯು’ ಆನೆ ಸುಮಾರು 6 ಕಿ. ಮೀ. ನಡೆಯಬೇಕು. ಅಷ್ಟೊಂದು ತೂಕ ಹೊತ್ತುಕೊಂಡು ಹೋಗುವುದು ಸಾಮಾನ್ಯ ಆನೆಗಳಿಗೆ ಕಷ್ಟಕರ. ಕಾಡಿನ ಸ್ವಚ್ಛಂದ ಹಾಗೂ ಶಾಂತ ಪರಿಸರದಿಂದ ದಿಢೀರ್ ನಗರಕ್ಕೆ ಬಂದಾಗ ಆನೆಗಳು ಗಾಬರಿಗೊಳ್ಳುವುದು ಸ್ವಾಭಾವಿಕ. ಆದ್ದರಿಂದ ಮುಂಚೆಯೇ ಸೂಕ್ತ ತರಬೇತಿ ನೀಡುವುದು ಅಗತ್ಯ. ಈ ಹಿನ್ನೆಲೆಯಲ್ಲಿ ತಾಲೀಮು ನಡೆಯುತ್ತಿದೆ.
ನಿತ್ಯ ಬೆಳಿಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳಿಗೆ ಅಭ್ಯಾಸ ಮಾಡಿಸಲಾಗುತ್ತದೆ. ಗಜಪಡೆಗೆ ನಿತ್ಯ ಭೂರಿ ಭೋಜನ: ಗಜಪಡೆಗೆ ನಿತ್ಯ ಭೂರಿ ಭೋಜನವನ್ನೇ ನೀಡಲಾಗುತ್ತದೆ. ಇದು ಪೌಷ್ಟಿಕಾಂಶಯುಕ್ತ ಆಹಾರವಾಗಿರುತ್ತದೆ. ನಿತ್ಯ ಎರಡು ಹೊತ್ತು (ಮುಂಜಾನೆ 6.30 ಮತ್ತು ಸಂಜೆ 4 ಗಂಟೆಗೆ) ಆನೆಗಳಿಗೆ ಆಹಾರ ಕೊಡಲಾಗುತ್ತದೆ. ಆಲ-ಅರಳಿ ಮರಗಳ ಕೊಂಬೆಗಳ ಜೊತೆಗೆ, ಭತ್ತ, ಗೋಽ, ಹೆಸರು ಕಾಳು, ಉದ್ದಿನ ಕಾಳು, ತೆಂಗಿನಕಾಯಿ, ಬೆಲ್ಲ ಇವುಗಳನ್ನು ಒಟ್ಟಾಗಿ ಬೇಯಿಸಿ ಇದಕ್ಕೆ ಹಸಿ ತರಕಾರಿ ಗಳಾದ ಸೌತೆಕಾಯಿ, ಕ್ಯಾರೆಟ್, ಮೂಲಂಗಿ, ಹೂ ಕೋಸು, ನವ್‌ಕೋಲು ಹಾಗೂ ಬೇಯಿಸಿದ ಈರುಳ್ಳಿಯನ್ನು ಮಿಶ್ರಣ ಮಾಡಿ ತಿನ್ನಿಸಲಾಗುತ್ತದೆ. ಕೆಲ ಆನೆಗಳಿಗೆ ಬೆಣ್ಣೆ ಮಿಶ್ರಿತ ಆಹಾರವನ್ನು ಕೊಡಲಾಗುತ್ತಿದೆ. ಗಂಡು ಆನೆಗಳಿಗೆ ದಿನಕ್ಕೆ 600 ರಿಂದ 750 ಕೆ. ಜಿ. , ಹೆಣ್ಣು ಆನೆಗಳಿಗೆ 450 ರಿಂದ 500 ಕೆ. ಜಿ. ಆಹಾರ ನೀಡಲಾಗುತ್ತದೆ.
ಆನೆಗಳಿಗೆ ನಿತ್ಯವೂ ಮಜ್ಜನ: ದಸರಾ ಆನೆಗಳಿಗೆ ನಿತ್ಯ ಮಜ್ಜನ ಮಾಡಿಸಲಾಗುತ್ತದೆ. ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ತೊಟ್ಟಿ ಬಳಿ ಆನೆಗಳನ್ನು ಮಾವುತರು,ಕಾವಾಡಿಗಳು ಕರೆ ತಂದು ಪೈಪ್ ಸಹಾಯದಿಂದ ನೀರು ಚಿಮುಕಿಸುತ್ತಾರೆ. ಬಳಿಕ ಸಹಾಯಕರು ಬ್ರಷ್‌ನಿಂದ ಆನೆಗಳ ಮೈಯೆಲ್ಲಾ ಉಜ್ಜಿ ಸ್ನಾನ ಮಾಡಿಸುತ್ತಾರೆ.
ಆರೋಗ್ಯದ ಮೇಲೆ ನಿಗಾ: ಗಜಪಡೆಯ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ. ಲಿವರ್ ಉದ್ದೀಪಕ, ಜೀವಸತ್ವಗಳು ಮತ್ತು ಖನಿಜಯುಕ್ತ ಪೂರಕ ಮಾತ್ರೆಗಳನ್ನು ಬೆಲ್ಲದಲ್ಲಿ ಬೆರೆಸಿ ಸಿರಪ್ ರೂಪದಲ್ಲಿ ನೀಡಲಾಗುತ್ತದೆ.
24 ಗಂಟೆಯೂ ಎಚ್ಚರಿಕೆ: ಆನೆಗಳ ನಿರ್ವಹಣೆಗಾಗಿ ಅರಣ್ಯ ಇಲಾಖೆಯ ತಂಡ ಹಗಲಿರುಳು ಶ್ರಮಿಸುತ್ತದೆ. ಉಪ ಅರಣ್ಯ ಸಂರಕ್ಷಣಾಽಕಾರಿ, ಪಶು ವೈದ್ಯರು, ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಅಡುಗೆಯ ವರು, ಮಾರ್ಜಕರು, ಸಹಾಯಕರು ಮತ್ತು ಮಾವುತ-ಕಾವಾಡಿಗಳ ಕುಟುಂಬದವರು ದಿನದ ೨೪ ಗಂಟೆಗಳೂ ಗಜಪಡೆಯ ಮೇಲೆ ನಿಗಾ ಇಟ್ಟು, ಆರೈಕೆ ಮಾಡುತ್ತಾರೆ.
ಆನೆಗಳಿಗೆ ನಿತ್ಯವೂ ಮಜ್ಜನ: ದಸರಾ ಆನೆಗಳಿಗೆ ನಿತ್ಯ ಮಜ್ಜನ ಮಾಡಿಸಲಾಗುತ್ತದೆ. ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ತೊಟ್ಟಿ ಬಳಿ ಆನೆಗಳನ್ನು ಮಾವುತರು, ಕಾವಾಡಿಗಳು ಕರೆ ತಂದು ಪೈಪ್ ಸಹಾಯದಿಂದ ನೀರು ಚಿಮುಕಿಸುತ್ತಾರೆ. ಬಳಿಕ ಸಹಾಯಕರು ಬ್ರಷ್‌ನಿಂದ ಆನೆಗಳ ಮೈಯೆಲ್ಲಾ ಉಜ್ಜಿ ಸ್ನಾನ ಮಾಡಿಸುತ್ತಾರೆ.
ಪ್ರೋಟಿನ್ ಆಹಾರದಿಂದ ಆನೆಗಳ ಸಾಮರ್ಥ್ಯ ಹೆಚ್ಚಳ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಗೆ ರುಚಿಯಾದ ಪ್ರೋಟಿನ್ ಯುಕ್ತ ಆಹಾರವನ್ನು ನಿತ್ಯವೂ ನೀಡಲಾಗುತ್ತಿದೆ. ಇದರಿಂದ ಆನೆಗಳಲ್ಲಿ ಸಾಮರ್ಥ್ಯ ಹೆಚ್ಚುತ್ತದೆ. ಅವುಗಳ ಮೂಳೆಗಳ ಸಾಂದ್ರತೆಯೂ ಅಽಕಗೊಳ್ಳುತ್ತದೆ. ಈ ಪೌಷ್ಟಿಕ ಆಹಾರವನ್ನು ಗಂಡು ಆನೆಗೆ ಶೇ. 10 ಹೆಚ್ಚಾಗಿ ಕೊಡುತ್ತೇವೆ. ತೂಕ ಕಾಯ್ದುಕೊಳ್ಳಲು ತಾಲೀಮು, ದೈಹಿಕ ವ್ಯಾಯಾಮ ಮಾಡಿಸಲಾಗುತ್ತದೆ. ಆನೆಗಳ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚಿನ ಕಾಳಜಿ ವಹಿಸಿದ್ದಾರೆ. – ಡಾ. ಐ. ಬಿ. ಪ್ರಭುಗೌಡ, ಡಿಸಿಎ-, ಮೈಸೂರು ವನ್ಯಜೀವಿ ವಿಭಾಗ