Mysore
19
overcast clouds

Social Media

ಮಂಗಳವಾರ, 13 ಜನವರಿ 2026
Light
Dark

3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೌಲಭ್ಯ ಮರೀಚಿಕೆ

ಮಹಾದೇಶ್ ಎಂ. ಗೌಡ
ಹನೂರು: ಹನೂರು ಶೈಕ್ಷಣಿಕ ವಲಯದಲ್ಲಿ ವ್ಯಾಸಂಗ ಮಾಡುತ್ತಿರುವ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಇಲ್ಲದೆ, ೨,೭೦೦ ವಿದ್ಯಾರ್ಥಿಗಳು ತಮ್ಮ ಆಧಾರ್ ತಿದ್ದುಪಡಿ ಆಗದೆ ಇರುವುದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಹನೂರು ಶೈಕ್ಷಣಿಕ ವಲಯದಲ್ಲಿ ವಿದ್ಯಾ ಭ್ಯಾಸ ಮಾಡುತ್ತಿರುವ ೩ ಸಾವಿರ ವಿದ್ಯಾರ್ಥಿ ಗಳು ಈಗಾಗಲೇ ಆಧಾರ್ ನೋಂದಣಿ ಮಾಡಿಸಿದ್ದಾರೆ. ಆದರೆ ಕೆಲವು ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಅಕ್ಷರಗಳು ತಿದ್ದುಪಡಿಯಾಗಬೇಕಿದೆ.

ಕೆಲವು ವಿದ್ಯಾರ್ಥಿಗಳ ಆಧಾರ್ ಕಾರ್ಡ್‌ನಲ್ಲಿ ವಿಳಾಸ, ಪೋಷಕರ ಹೆಸರು ತಪ್ಪು ಇರುವುದರಿಂದ ತಿದ್ದುಪಡಿ ನಡೆಯುತ್ತಿದೆ. ತಿದ್ದುಪಡಿ ಸಂದರ್ಭದಲ್ಲಿಯೂ ಸಮರ್ಪಕ ದಾಖಲಾತಿ ಇಲ್ಲದೆ ಇರುವುದರಿಂದ ತೊಂದರೆಯಾಗುತ್ತಿದೆ. ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕು ಎಂಬುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.

ಆಧಾರ್ ಕಿಟ್ ಮೂಲಕ ತಿದ್ದುಪಡಿ: ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ತಹಸಿಲ್ದಾರ್ ಕಚೇರಿ ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಯಲ್ಲಿ ಮಾತ್ರ ಆಧಾರ್ ತಿದ್ದುಪಡಿ ಸಮಸ್ಯೆಗಳನ್ನು ಬಗೆಹರಿಸಲು ಆಧಾರ್ ಕೇಂದ್ರ ತೆರೆಯಲಾಗಿದೆ. ಪ್ರತಿದಿನಕ್ಕೆ ೩೦ ಜನರ ತಿದ್ದುಪಡಿಯನ್ನಷ್ಟೇ ಮಾಡಬಹುದು. ಕೆಲವು ಸಂದರ್ಭಗಳಲ್ಲಿ ಸರ್ವರ್ ಸಮಸ್ಯೆಯಿಂದ ವಾರಗಟ್ಟಲೆ ತಿದ್ದುಪಡಿ ಸ್ಥಗಿತಗೊಂಡಿದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಜಿಲ್ಲಾಡಳಿತ ಪ್ರತಿ ಶಾಲೆಗಳಿಗೆ ಆಧಾರ್ ಕಿಟ್ ಕಳುಹಿಸಿಕೊಡುವ ಮೂಲಕ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗಿದೆ.

ಜನನ ಪ್ರಮಾಣಪತ್ರವಿಲ್ಲದೆ ಆಧಾರ್ ನೋಂದಣಿ ಕಷ್ಟ: ಇತ್ತೀಚೆಗೆ ಮಕ್ಕಳ ಆಧಾರ್ ಮಾಡಿಸಲು ಜನನ ಪ್ರಮಾಣಪತ್ರ ಸಲ್ಲಿಸುವು ದನ್ನು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಶಾಲಾ ದಾಖಲಾತಿಯನ್ನು ಪರಿಗಣಿಸಿ ಆಧಾರ್ ನೋಂದಣಿ ಮಾಡಲಾಗುತ್ತಿತ್ತು. ಆದರೆ ಇದೀಗ ಜನನ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯ ಮಾಡಿರುವುದರಿಂದ ಪೋಷಕರಿಗೆ ಇದು ತಲೆನೋವಾಗಿ ಪರಿಗಣಿಸಿದೆ. ಹನೂರು ಶೈಕ್ಷಣಿಕ ವಲಯದಲ್ಲಿ ೮೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜನನ ಪ್ರಮಾಣಪತ್ರವೇ ಇಲ್ಲದೆ ಇರುವುದರಿಂದ ಆಧಾರ್ ನೋಂದಣಿ ಸಮಸ್ಯೆಯಾಗಿದೆ.

ಸಮರ್ಪಕ ದಾಖಲಾತಿ ಕೊರತೆ: ಈಗಾ ಗಲೇ ಆಧಾರ್ ನೋಂದಣಿ ಮಾಡಿಸಿಕೊಂಡಿರು ವವರ ಆಧಾರ್‌ನಲ್ಲಿ ಲೋಪ-ದೋಷಗಳಿದ್ದರೆ ತಿದ್ದುಪಡಿ ಮಾಡಲು ಸಮರ್ಪಕ ದಾಖಲಾತಿಗಳನ್ನು ಒದಗಿಸಿಕೊಡಬೇಕಿದೆ. ಸಮರ್ಪಕ ದಾಖಲಾತಿಗಳನ್ನು ಒದಗಿಸಿಕೊಟ್ಟರೆ ಮಾತ್ರ ಆಧಾರ ತಿದ್ದುಪಡಿಯಾಗುತ್ತದೆ. ಹನೂರು ಶೈಕ್ಷಣಿಕ ವಲಯ ವ್ಯಾಪ್ತಿಯ ಮಾರ್ಟಳ್ಳಿ, ರಾಮಾಪುರ, ಮ. ಬೆಟ್ಟ, ಹೂಗ್ಯಂ, ಬಂಡಳ್ಳಿ, ಕೌದಳ್ಳಿ, ಕುರಹಟ್ಟಿ ಹೊಸೂರು ಗ್ರಾಮಗಳ ಶಾಲೆಗಳಲ್ಲಿ ಇದುವರೆಗೂ ಸುಮಾರು ೨,೭೦೦ ಆಧಾರ್ ತಿದ್ದುಪಡಿ ಮಾಡಲಾಗಿದೆ.

ಸಮರ್ಪಕ ದಾಖಲಾತಿ ಒದಗಿಸಿಕೊಡದ ಹಿನ್ನೆಲೆಯಲ್ಲಿ ಕೇವಲ ೪೦೦ ಆಧಾರ್ ನೋಂದಣಿ ಮಾತ್ರ ಯಶಸ್ವಿಯಾಗಿದೆ. ಇನ್ನು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಶಾಲೆಗಳಲ್ಲಿಯೂ ತಿದ್ದುಪಡಿ ಆಗಬೇಕಿದೆ.

Tags:
error: Content is protected !!