‘ದಸರಾ ಜಾತ್ಯತೀತತೆಯ ಪ್ರತೀಕವಲ್ಲ ಧಾರ್ಮಿಕ ಆಚರಣೆ’ಎಂದಿದ್ದಾರೆ ಪ್ರತಾಪ್! ದಸರಾ ಜಾತಿ ಮತ ವರ್ಗ ಲಿಂಗ ಭೇದಗಳನು ಮೀರಿದ ನಾಡಿನ ಸರ್ವಜನಾಂಗದವರೂ ಪ್ರೀತಿ ಸ್ನೇಹ ಅನ್ಯೋನ್ಯತೆಯಿಂದ ಆಚರಿಸುವ ನಾಡ ಸಾಂಸ್ಕ ತಿಕ ಹಬ್ಬ! ಭಾವೈಕ್ಯತೆ ಸೋದರತೆಯ ಪ್ರತೀಕ! ಸೀಮಿತವಲ್ಲ ದಸರಾ ಒಂದು ಜಾತಿ ಧರ್ಮಕೆ!
ಹೀಗಿರಲು ಬಾನು ಅವರನು ಉದ್ಘಾಟನೆಗೆ ಆಹ್ವಾನಿಸಿರುವುದನು ವಿರೋಧಿಸುವುದು ಸಮಂಜಸವಲ್ಲ! ಕರ್ನಾಟಕ ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನಲಿಲ್ಲವೇ ರಾಷ್ಟ್ರಕವಿ ಕುವೆಂಪು!
– ಸಿ.ಪಿ.ಸಿದ್ಧಾಶ್ರಮ, ವಿಜಯನಗರ , ಮೈಸೂರು



