Mysore
29
few clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಓದುಗರ ಪತ್ರ:  ‘ಮನೆ ಮನೆಗೆ ಪೊಲೀಸ್’ ವಿನೂತನ ಪ್ರಯೋಗ

ಓದುಗರ ಪತ್ರ

ಮೈಸೂರಿನಲ್ಲಿ ‘ಮನೆ ಮನೆಗೆ ಪೊಲೀಸ್’ ವಿನೂತನಕಾರ್ಯಕ್ರಮವನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಪರಿಚಯಿಸಿರುವುದು ಒಳ್ಳೆಯ ಬೆಳವಣಿಗೆ. ಇದು ಜನರು ಹಾಗೂ ಪೊಲೀಸರ ನಡುವಣ ಅಂತರವನ್ನು ಕಡಿಮೆ ಮಾಡಲಿದೆ.

ಜಾವಗಲ್ ಶ್ರೀನಾಥ್ ಅವರು ಜನರನ್ನು ಕೆಲಸದಿಂದ ಸಮಾಧಾನಪಡಿಸುವುದು ಕಷ್ಟವಿದೆ,ಪೊಲೀಸರು ಮನೆ ಮನೆಗೆ ಭೇಟಿ ನೀಡಿದರೆ ಕಾನೂನು ಸುವ್ಯವಸ್ಥೆ ಬಗ್ಗೆ ಜನರಲ್ಲಿ ಅರಿವು ಮೂಡಿ ಎಲ್ಲರಲ್ಲೂ ಸ್ನೇಹ ಭಾವ ಬೆಳೆದು ಇದೊಂದು ಅದ್ಭುತ ಕೆಲಸವಾಗುವುದರಲ್ಲಿ ಸಂಶಯವಿಲ್ಲ ಎಂದಿರುವುದು ನಿಜಕ್ಕೂ ವಾಸ್ತವ.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿದ್ದು, ಮನೆ ಮನೆಗೆ ಬರುವ ಬೀಟ್ ಪೊಲೀಸರಿಗೆ ಜನರು ತಮ್ಮ ಬಡಾವಣೆಯ ಅನುಮಾನಾಸ್ಪದ ವಿಷಯಗಳ ಕುರಿತು ಸ್ಪಷ್ಟ ಮಾಹಿತಿ ನೀಡಬಹುದು. ಈ ಕಾರ್ಯಕ್ರಮ ಯಶಸ್ವಿಯಾಗಲು ನಾಗರಿಕರ ಬೆಂಬಲ ಅತ್ಯಗತ್ಯವಾಗಿದ್ದು, ನಗರದ ಶಾಂತಿ,ನೆಮ್ಮದಿಗಾಗಿ ನಾಗರಿಕರು ಪೊಲೀಸರ ಜೊತೆ ಸಹಕರಿಸಬೇಕಿದೆ.

-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.

Tags:
error: Content is protected !!