ವಿಶ್ವವಿಖ್ಯಾತ ದಸರಾಕ್ಕೆ ಮೈಸೂರಿನಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ರಾಜ್ಯದ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಆಗಮಿಸಿರುವ ಆನೆಗಳು ರಾಜ ಬೀದಿಯಲ್ಲಿ ಪ್ರತಿನಿತ್ಯ ತಾಲೀಮು ನಡೆಸುತ್ತಿವೆ. ಪ್ರತಿನಿತ್ಯ ಆನೆಗಳು ಸಾಗುವ ರಾಜಬೀದಿಯಲ್ಲಿ ಪಟಾಕಿ ಸದ್ದು, ಮೋಟಾರ್ ಗಾಡಿಗಳ ಕರ್ಕಶವಾದ ಶಬ್ದ, ತಮಟೆ, ಧ್ವನಿವರ್ಧಕಗಳ ಸದ್ದುಗಳಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು.
ಆನೆಗಳು ರಸ್ತೆಗಿಳಿದ ಕೂಡಲೇ ಕರ್ಕಶವಾದ ಶಬ್ದಗಳಿಂದ ಗಾಬರಿಯಾಗಿ ದಿಕ್ಕೆಟ್ಟು ಓಡಿದರೆ ಅನಾಹುತಗಳಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ದಸರಾ ಆನೆಗಳು ತಾಲೀಮಿಗೆ ಬರುವ ರಾಜ ಬೀದಿಗಳಲ್ಲಿ ನಿಶ್ಶಬ್ದ ವಾತಾವರಣವನ್ನು ಕಲ್ಪಿಸುವ ಮೂಲಕ ಅವು ನಮ್ಮ ಪರಿಸರಕ್ಕೆ ಹೊಂದಿಕೊಳ್ಳಲು ಅವಕಾಶ ನೀಡುವುದು ಅಗತ್ಯ.
-ಎಂ.ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು





