Mysore
21
broken clouds

Social Media

ಬುಧವಾರ, 13 ನವೆಂಬರ್ 2024
Light
Dark

ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಗಳ ನಿರುತ್ಸಾಹ

 ನ. ೨೩ಕ್ಕೆ ಹನೂರು ಪಪಂ ೧೨ನೇ ವಾರ್ಡ್ ಉಪಚುನಾವಣೆ; ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ

ಮಹಾದೇಶ್ ಎಂ ಗೌಡ
ಹನೂರು: ಪಟ್ಟಣ ಪಂಚಾಯಿತಿಯ ೧೨ನೇ ವಾರ್ಡಿನ ಬಿಜೆಪಿ ಸದಸ್ಯರಾಗಿದ್ದ ಚಂದ್ರಮ್ಮರವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚು ನಾವಣೆ ದಿನಾಂಕ ನಿಗದಿಯಾಗಿದ್ದರೂ ಕಾಂಗ್ರೆಸ್, ಬಿಜೆಪಿ, ಜಾ. ದಳ ಪಕ್ಷಗಳಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

೨೦೧೯ರಲ್ಲಿ ನಡೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿ ಯಲು ಯಾವುದೇ ಪಕ್ಷಕ್ಕೆ ಬಹುಮತ ಬಾರದಿ ದ್ದರಿಂದ ಅತಂತ್ರವಾಗಿತ್ತು. ನಂತರ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಜಾ. ದಳವನ್ನು ಅಽಕಾರ ದಿಂದ ದೂರವಿಡಲು ಅಂದಿನ ಶಾಸಕರಾಗಿದ್ದ ಆರ್. ನರೇಂದ್ರರವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ೧೨ನೇ ವಾರ್ಡಿನ ಬಿಜೆಪಿ ಸದಸ್ಯೆ ಚಂದ್ರಮ್ಮ ಅಧ್ಯಕ್ಷರಾಗಿಯೂ ಮೂರನೇ ವಾರ್ಡಿನ ಸದಸ್ಯ ಹರೀಶ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬಿಜೆಪಿ ಸದಸ್ಯೆ ಚಂದ್ರಮ್ಮರವರು ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ನ. ೨೩ರಂದು ಚುನಾವಣೆ ನಿಗದಿ ಮಾಡಿದೆ. ಈ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ನಾಮಪತ್ರ ಸಲ್ಲಿಕೆ ನವೆಂಬರ್ ೪ರಿಂದ ಪ್ರಾರಂಭವಾಗಿದೆ. ಆದರೆ, ಇದುವರೆಗೂ ಯಾವುದೇ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಕೆಗೆ ನ. ೧೧ರಂದು ಕೊನೆಯ ದಿನವಾಗಿದ್ದು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕುತೂಹಲ ಮೂಡಿಸಿದೆ. ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ೧೨ನೇ ವಾರ್ಡಿನಲ್ಲಿ ೬೮೫ ಮತದಾರರಿದ್ದು, ಮಹಿಳಾ ಮತದಾರರು ೩೪೯, ಪುರುಷ ಮತದಾರರು ೩೩೬ ಮಂದಿ ಇದ್ದಾರೆ.

ಸ್ಪರ್ಧಿಸಲು ನಿರುತ್ಸಾಹ: ಉಪಚುನಾವಣೆಯಲ್ಲಿ ಈ ವಾರ್ಡಿನಿಂದ ಸದಸ್ಯರಾಗಿ ಆಯ್ಕೆಯಾಗುವವರ ಅವಽ ಕೇವಲ ೯ ತಿಂಗಳು ಇರುವುದರಿಂದ ಪ್ರಮುಖ ಮೂರೂ ಪಕ್ಷಗಳ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ.

ಬಿಜೆಪಿಯಿಂದ ಆರ್. ಎಸ್. ದೊಡ್ಡಿ ಗ್ರಾಮದ ಪ್ರಭುಸ್ವಾಮಿರವರ ಪತ್ನಿ ಚಂದ್ರಕಲಾ ಸ್ಪಽಸುವ ನಿರೀಕ್ಷೆ ಇದೆ. ಇನ್ನು ಜಾ. ದಳ ಹಾಗೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದೆ ಬಂದಿಲ್ಲ.

೧೨ನೇ ವಾರ್ಡಿನಲ್ಲಿ ಬಿಜೆಪಿ ವತಿಯಿಂದ ಚಂದ್ರಮ್ಮ ರವರು ಆಯ್ಕೆಯಾಗಿ ಅಧ್ಯಕ್ಷರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ವಾರ್ಡಿನ ಹಿರಿಯರ ಜೊತೆ ಚರ್ಚೆ ನಡೆಸಿ ಅಂತಿಮವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುವುದು.
-ವೃಷಭೇಂದ್ರ, ಬಿಜೆಪಿ ಹನೂರು ಮಂಡಲ ಅಧ್ಯಕ್ಷ

ಪಟ್ಟಣ ಪಂಚಾಯಿತಿ ೧೨ನೇ ವಾರ್ಡಿನ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ೨ ದಿನಗಳು ಬಾಕಿ ಇವೆ. ಶೀಘ್ರದಲ್ಲಿಯೇ ಸ್ಥಳೀಯ ಮುಖಂಡರುಗಳ ಜೊತೆ ಚರ್ಚೆ ನಡೆಸಿ ಕಾಂಗ್ರೆಸ್ ಪಕ್ಷದಿಂದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಸಲಾಗುವುದು.
-ಆರ್. ನರೇಂದ್ರ, ಮಾಜಿ ಶಾಸಕ

 

Tags: