ಶತಮಾನದ ಶಾಲೆಗೆ ಹಳೆಯ ವಿದ್ಯಾರ್ಥಿಗಳು, ದಾನಿಗಳ ಆಸರೆ
ಲೇಖಕ : ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ
ಮೈಸೂರು: ಸಾಮಾನ್ಯವಾಗಿ ವಯೋವೃದ್ಧ ಪೋಷಕರಿಗೆ ಮಕ್ಕಳು ಆಸರೆಯಾಗುವುದು ಲೋಕಾರೂಢಿ. ಅದೇ ಒಂದು ಶಾಲೆಗೆ ವಯಸ್ಸಾದರೆ ಯಾರು ಗತಿ? ಉತ್ತರ. . . ಹಳೆಯ ವಿದ್ಯಾರ್ಥಿಗಳು, ದಾನಿಗಳು!
ಹೌದು. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೂರಾ ಎಂಟು (108) ವರ್ಷಗಳನ್ನು ಗೊಳಿಸಿರುವ ಪೂರ್ಣ ಸರ್ಕಾರಿ ಶಾಲೆಯೊಂದು ಕೆಲ ಹಳೆಯ ವಿದ್ಯಾರ್ಥಿ ಗಳು ಹಾಗೂ ದಾನಿಗಳ ಪ್ರೀತಿ, ಕಾಳಜಿಯಿಂದ ವೃದ್ಧಾಪ್ಯ ಕಳೆದು ಕೊಂಡು ಡಿಜಿಟಲ್ ಸ್ಪರ್ಶ ದೊಂದಿಗೆ ಮತ್ತೆ ಯೌವನ ಪಡೆದಂತೆ ಜೀವಕಳೆ ತುಂಬಿ ಕೊಂಡಿದೆ.
ಇದು ನಗರದ ಲಕ್ಷ್ಮಿಪುರಂ ನಲ್ಲಿರುವ ‘ಗಾಡಿಚೌಕ ಮಕ್ಕಳ ಸಂಖ್ಯೆ ಶಾಲೆ ಎಂದೇ ಹೆಸರುವಾಸಿ 2 6 ಯಾಗಿರುವ ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆ. ಕೆಲ ಹಳೆಯ 3 8 ವಿದ್ಯಾರ್ಥಿಗಳಿಂದ, ದಾನಿಗಳ ಸಹಾಯದಿಂದ 4 6 ಉನ್ನತೀಕರ ಗೊಂಡು ಯಾವುದೇ 5 16 ಶತಮಾನದ ಶಾಲೆಗಳ ಸುಖ-ದುಃಖ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಜೀವಕಳೆ ತುಂಬಿ ಕೊಂಡಿದೆ.
ಹೊಸ ಶಾಲಾ ಕಟ್ಟ ಡದ ಕೆಲಸ ನಡೆಯು ತಿದೆ. ಈ ಕಟ್ಟಡದ ಎದುರು ನವೀನವಾದ ಸಭಾಂಗಣ ಆಕರ್ಷಕ ವಾಗಿ ನಿಂತಿತ್ತು. ಪಕ್ಕದಲ್ಲಿ ಶಾಲೆಯ ಮತ್ತೆರಡು ಕಟ್ಟಡಗಳು ಆಕರ್ಷಕವಾದ ಬಣ್ಣಗಳನ್ನು ಹೊದ್ದುಕೊಂಡು ನಿಂತಿವೆ.
1918ರಲ್ಲಿ ಸ್ಥಾಪನೆಯಾದ ಈ ಶಾಲೆಗೆ ಈಗ 108 ವರ್ಷಗಳಾಗಿದೆ. ಈ ಸಾಲಿನಲ್ಲಿ ಶಾಲೆಯು ಡಿಜಿಟಲ್ ಸ್ಪರ್ಶ ಪಡೆದುಕೊಂಡಿದೆ. 2016ರಲ್ಲಿ ಕೇವಲ 6 ಮಕ್ಕ ಳಿದ್ದ ಶಾಲೆಯಲ್ಲಿ ಆಡಳಿತ ವರ್ಗದ ಪರಿಶ್ರಮದಿಂದ ಸದ್ಯ 1 ರಿಂದ 7ನೇ ತರಗತಿಯವರೆಗೆ ಒಟ್ಟು 58 ಮಕ್ಕಳಿ ದ್ದಾರೆ. 1ರಿಂದ 7ನೇ ತರಗತಿವರೆಗೂ ವಿದ್ಯಾರ್ಥಿಗಳಿಂದ ವ್ಯಾಸಂಗಕ್ಕೆ ಒಂದು ರೂಪಾಯಿಯೂ ಖರ್ಚಾಗದಂತೆ ನೋಡಿಕೊಳ್ಳುವುದೇ ನಮ್ಮ ಶಾಲೆ ಮುಖ್ಯ ಕರ್ತವ್ಯವಾ ಗಿದೆ ಎಂಬುದು ಶಾಲೆಯ ಪ್ರಭಾರ ಮುಖ್ಯೋಪಾ ಧ್ಯಾಯ ಎಸ್. ರವಿಕುಮಾರ್ ಅವರ ಸಂತಸದ ಮಾತು.
ಶಾಲೆಯಲ್ಲಿ ಪ್ರಸ್ತುತ 1 ರಿಂದ 5ನೇ ತರಗತಿವರೆಗೆ ದ್ವಿ-ಭಾಷಾ ಮಾಧ್ಯಮ ಅಳವಡಿಸಿಕೊಳ್ಳಲಾಗಿದೆ. ಮುಂದಿನ ವರ್ಷದಿಂದ 7ನೇ ತರಗತಿವರೆಗೂ ವಿಸ್ತರಿಸಲು ಆಲೋಚಿಸಲಾಗಿದೆ. ಇದಲ್ಲದೆ, ಎಲ್‌ಕೆಜಿ, ಯುಕೆಜಿ ಆರಂಭಿಸುವ ಚಿಂತನೆಯೂ ಇದೆ.
ಸರ್ಕಾರವು ಶಾಲೆಗೆ ನೀಡುವ ಉಚಿತ ಸೌಲಭ್ಯಗಳ ಜೊತೆಗೆ ಸ್ಟಾರ್ಟ್ ಕ್ಲಾಸ್‌ಗೆ ಬೇಕಿರುವ ಕಂಪ್ಯೂಟರ್‌ಗಳು, ಲ್ಯಾಪ್ ಟಾಪ್‌ಗಳು, ಪಿಪಿಟಿ ಸ್ಟೀನಿಂಗ್, ಇಂಟರ್‌ನೆಟ್ ಟ ವ್ಯವಸ್ಥೆ ಅಚ್ಚುಕಟ್ಟಾಗಿ ಇದ್ದೂ, ಶಾಲೆಯಲ್ಲಿ ಇಂಡಿಯನ್ ಹಾಗೂ ಪಾಶ್ಚಿಮಾತ್ಯ ಶೈಲಿ ಶೌಚಾಲಯದ ವ್ಯವಸ್ಥೆಯೂ ಇದೆ. ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೂಡ ಇದೆ. ಇವೆಲ್ಲವೂದಾನಿಗಳು ನೀಡಿದ ಕೊಡುಗೆಯಾಗಿವೆ.
ಶಾಲೆಯ ಹಳೆಯ ವಿದ್ಯಾರ್ಥಿ ಡಾ. ಬಿ. ಆರ್. ಸಚ್ಚಿದಾನಂದಮೂರ್ತಿ ಎಂಬವರು ಹೊಸ ಸಭಾಂಗಣವನ್ನೂ 1 ಕೋಟಿ 65 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದಾರೆ. ಅಲ್ಲದೆ, ಶಾಲಾ ಕಟ್ಟಡ ಮತ್ತು 7 ಕೊಠಡಿಗಳನ್ನೂ 1 ಕೋಟಿ 85 ಲಕ್ಷ ರೂ. ವೆಚ್ಚದಲ್ಲಿ ಕಟ್ಟಿಸುತ್ತಿದ್ದಾರೆ.
ಈ ಶಾಲೆಯಲ್ಲಿ 1958ರಲ್ಲಿ ವ್ಯಾಸಂಗ ಮಾಡಿದ ಸಚ್ಚಿದಾನಂದಮೂರ್ತಿ ಅವರು ಈಗ ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲದೆ, ಹಳೆ ವಿದ್ಯಾರ್ಥಿಗಳಾದ ಮೈಸೂರಿನ ಉಲ್ಲಾಸ್ ಮೋಟಾರ್ ಮಾಲೀಕರು ಹಾಗೂ ಕೋ ಆಪರೇಟಿವ್ ಸೊಸೈಟಿಯ ನಿವೃತ್ತ ಅಧಿಕಾರಿ ಪ್ರಕಾಶ್, ಅಗ್ರಹಾರ ನಿವಾಸಿ ಸೈಯದ್ ತೌಸಿಫ್ ಈ ಶಾಲೆಗೆ ಆಸರೆಯಾಗಿದ್ದಾರೆ. ದಾನಿಗಳಾಗಿ ಶಾಸಕ ಶ್ರೀವತ್ಸ, ಡಾ. ಸೈಯದ್ ಬಾಕರ್, ಮೈಸೂರಿನ ಬಾಲಾ ಫೌಂಡೇಷನ್, ಮೈಸೂರಿನ ಇನ್ನರ್ ವೀಲ್ಸ್ ವೆಸ್ಟ್, ಇಂದಿರಾನಗರದ ಲಯನ್ಸ್ ಕ್ಲಬ್ ಆಫ್ ಮೈಸೂರು ಹಾಗೂ ಮೈಸೂರಿನ ಪಿಆರ್‌ಓಸಿಇಎಸ್ ಎಸ್ ಕಂಪೆನಿಯೂ ಸಹಕಾರ ನೀಡುತ್ತಿದೆ.
ಇಷ್ಟೆಲ್ಲಾ ಉತ್ತಮ ವ್ಯವಸ್ಥೆ ಇದ್ದರೂ ಖಾಸಗಿ ಶಾಲೆಗಳ ಹೊಡೆತ ತಪ್ಪಿಲ್ಲ ಎಂಬುದೂ ಬಹಿರಂಗವಾಗಿ ಕಾಣುತ್ತದೆ. ಆದರೆ ಗಮನಿಸಬೇಕಾದ ಸಂಗತಿ ಎಂದರೆ, ಸಮೀಪದ ಕೆಲವು ಖಾಸಗಿ ಶಾಲೆಗಳಿಂದ ಹಲವು ಪೋಷಕರು ತಮ್ಮ ಮಕ್ಕಳನ್ನು ಈ ‘ಗಾಡಿಚೌಕ ಶಾಲೆ’ಗೆ ಕರೆತಂದು ಸೇರಿಸಿದ್ದಾರೆ. ಶಾಲೆಯ ಸುವ್ಯವಸ್ಥೆ ಅಥವಾ ಉನ್ನತೀಕರಣ ಅದಕ್ಕೆ ಕಾರಣ.
ಈ ಶಾಲೆಯಲ್ಲಿ ಪ್ರಭಾರ ಮುಖ್ಯೋಪಾಧ್ಯಾ ಯರಾದ ಎಸ್. ರವಿಕುಮಾರ್, ಸಹ ಶಿಕ್ಷಕರಾದ ಡಿ. ಕೆ. ಲತಾ, ಮಹದೇವಮ್ಮ, ಎಂ. ಶೀಲಾ ಇದ್ದಾರೆ.
ಶಾಲೆಯಲ್ಲಿರುವ 58 ವಿದ್ಯಾರ್ಥಿಗಳ ಪೈಕಿ ಪರಿಶಿಷ್ಟ ಜಾತಿಗೆ ಸೇರಿದ 6 ಮಕ್ಕಳು, ಪರಿಶಿಷ್ಟ ಪಂಗಡಗಳಿಗೆ ಸೇರಿದ 3, ಅಲ್ಪಸಂಖ್ಯಾತ ಸಮುದಾಯಗಳ 27 ಹಾಗೂ ಹಿಂದುಳಿದ ವರ್ಗಗಳ 22 ಮಕ್ಕಳು ಇದ್ದಾರೆ.
ಕೋಟ್…
ಶಾಲೆಯ ಹಳೆಯ ಕಟ್ಟಡದ ಗೋಡೆ ನಾನು ನಿವೃತ್ತಿಯ ಅಂಚಿನಲ್ಲಿದ್ದೇನೆ. ಶಾಲೆ ಚೆನ್ನಾಗಿರಬೇಕು ಅನ್ನುವುದು ನನ್ನಾಸೆ. ಮುಂದಿನ ವರ್ಷ ಎಲ್ ಕೆಜಿ, ಯುಕೆಜಿ ಆರಂಭಿಸಲು ಇಬ್ಬರು ಶಿಕ್ಷಕರ ನೇಮಕ ಆಗಬೇಕಿದೆ. ಮುಖ್ಯವಾಗಿ ಕಂಪ್ಯೂಟರ್ ಶಿಕ್ಷಕರೊಬ್ಬರು ಬೇಕಾಗಿದ್ದಾರೆ. -ಎಸ್. ರವಿಕುಮಾರ್, ಪ್ರಭಾರ ಮುಖ್ಯೋಪಾಧ್ಯಾಯ, ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮೀಪುರಂ
ಯಾವುದೇ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ನಮ್ಮ ಶಾಲೆ ಸುಸಜ್ಜಿತವಾಗಿದೆ. ಡಿಜಿಟಲ್ ಶಾಲೆಯಾಗಿ ಅಭಿವೃದ್ಧಿಪಡಿಸಿದ್ದೇವೆ. ಕೊರೊನಾ ಕಾಲದಲ್ಲಿ ದಾಖಲಾತಿ ಪ್ರಮಾಣದಲ್ಲಿ ಏರುಪೇರಾಗಿತ್ತು. ಮನೆ ಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡುತ್ತಿದ್ದೇವೆ. -ಮಹದೇವಮ್ಮ, ಸಹ ಶಿಕ್ಷಕರು, ಸರ್ಕಾರಿ ವಿಭಜಿತ ಹಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮೀಪುರಂ
ಸರ್ಕಾರಿ ಶಾಲೆಯಲ್ಲಿ ಓದಿ ಸಾಧನೆಗೈದಿರುವ ಸಾಧಕರಿಲ್ಲವೇ? ಉನ್ನತ ಹುದ್ದೆಯಲ್ಲಿರುವ ನೌಕರರಿಲ್ಲವೇ? ಸರ್ಕಾರಿ ಶಾಲೆಗಳಿಗೆ ಈಗಲೂ ಅವುಗಳದ್ದೇ ಆದ ಮಹತ್ವವಿದೆ. ಶ್ರೀಮಂತರು ತಮಗೆ ಸಮೀಪವಿರುವ ಸರ್ಕಾರಿ ಶಾಲೆಗಳಿಗೆ ಕೈಲಾದ ಸಹಾಯ ಮಾಡಬೇಕು. ಆಗ ಅವರ ಬದುಕೂ ಸಾರ್ಥಕವಾಗುತ್ತದೆ. -ಸೈಯದ್ ತಾಸಿಫ್, ಉದ್ಯಮಿ, ಹಳೆ ವಿದ್ಯಾರ್ಥಿ, ಅಗ್ರಹಾರ, ಮೈಸೂರು





