ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿ ಮತ್ತು ಪುತ್ರಿಯೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಅಂತಹ ಕಾರಣ ಅವರಿಗೇನಿತ್ತು ಎಂಬುದು ಬಯಲಾಗಬೇಕಿದೆ. ಆಸ್ತಿ ವಿಚಾರ, ಕುಟುಂಬದಲ್ಲಿ ಕಲಹ ಅಥವಾ ಓಂ ಪ್ರಕಾಶ್ ಅವರ ನಡವಳಿಕೆಯಲ್ಲಿ ವಿಲಕ್ಷಣವೇನಾದರೂ ಇತ್ತೆ? ಅವರ ಪತ್ನಿ ಈಗಾಗಲೇ ಹಲವು ಬಾರಿ ಪೊಲೀಸ್ ಅಧಿಕಾರಿಗಳ
ವಾಟ್ಸಾಪ್ ಗುಂಪಿನಲ್ಲಿ ಪತಿಯ ನಡವಳಿಕೆ ಬಗ್ಗೆ ಆಕ್ಷೇಪ ಮಾಡಿದ್ದರು.
ಇದನ್ನೂ ಓದಿ:- ಓದುಗರ ಪತ್ರ: ಸರ್ಕಾರವೇ ಪ್ಲಾಸ್ಟಿಕ್ ಉತ್ಪಾದನೆ ನಿಷೇಧಿಸಲಿ
ಓಂ ಪ್ರಕಾಶ್ ಅವರೇ ಪುತ್ರಿಯ ಜೊತೆ ನನಗೂ ವಿಷ ಬೆರೆಸಿದ ಆಹಾರ ನೀಡಿ ಪರೋಕ್ಷವಾಗಿ ಕೊಲೆ ಮಾಡುವ ಸಂಚು ನಡೆಸಿದ್ದರು ಎಂದು ದೂರಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಆದರೆ, ಓಂ ಪ್ರಕಾಶ್ ಅವರ ಪುತ್ರಿ ಪೊಲೀಸರ ವಿಚಾರಣೆಗೆ ಸೂಕ್ತವಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಓಂ ಪ್ರಕಾಶ್ ಅವರ ಹತ್ಯೆಗೆ ಈ ತಾಯಿ ಮತ್ತು ಮಗಳ ಬಳಿ ಏನಾದರೂ ಪುರಾವೆ ಇದ್ದರೆ ಪೊಲೀಸರಿಗೆ ಸಲ್ಲಿಸಬಹುದು ಅಲ್ಲವೇ? ಆದರೆ, ವಿಚಾರಣೆಗೆ ಪ್ರತಿರೋಧಿಸುವುದು ಅವರ ಬಗ್ಗೆ ಸಹಜವಾಗಿ ಅನುಮಾನ ಹುಟ್ಟುಹಾಕುತ್ತದೆ. ಆದರೆ, ಕಾರಣ ಏನೇ ಆಗಿರಲಿ, ಪ್ರಾಣ ತೆಗೆಯುವುದನ್ನು ಒಪ್ಪುವುದು ಕಷ್ಟ ಸಾಧ್ಯ.
-ಆರ್.ವಿ.ಅನ್ವಿತ್, ಕುವೆಂಪುನಗರ, ಮೈಸೂರು.





