ಮೈಸೂರು: ನಾಡಹಬ್ಬ ದಸರೆಯಲ್ಲಿ ಹೊಸದಾಗಿ ಅಳವಡಿಸಿರುವ ಮಾರ್ಗಸೂಚಿ ಫಲಕಗಳಲ್ಲಿ ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿದ ಕನ್ನಡ ಪರ ಹೋರಾಟಗಾರರು, ಹಲವೆಡೆ ‘ಕನ್ನಡ ಮೊದಲು’ ಎಂಬುದಾಗಿ ಕಪ್ಪು ಬಣ್ಣದಲ್ಲಿ ಬರೆಯುವ ಮೂಲಕ ಪ್ರತಿಭಟಿಸಿದರು.
ಸೋಮವಾರದವರೆಗೂ ಕನ್ನಡ ಭಾಷೆಯುಳ್ಳ ಮಾರ್ಗ ಸೂಚಿ ಫಲಕಗಳನ್ನು ಹಾಕಿದ್ದ ಪೊಲೀಸರು, ದಿಢೀರ್ ‘ನೋ ಪಾರ್ಕಿಂಗ್’ ಎಂಬ ಇಂಗ್ಲಿಷ್ ಪ್ರಧಾನವಾದ ನೂರಾರು ಫಲಕ ಗಳನ್ನು ಹಾಕಿರುವುದು ಖಂಡನೀಯ ಎಂದು ಕನ್ನಡ ಪರ ಹೋರಾಟಗಾರರಾದ ಸ. ರ. ಸುದರ್ಶನ ಮತ್ತು ಅರವಿಂದ ಶರ್ಮ ಆಕ್ರೋಶ ವ್ಯಕ್ತಪಡಿಸಿದರು.
ಹಾಗೆಯೇ ಆಹಾರಮೇಳದಲ್ಲಿ ಮಳಿಗೆದಾರರು ತಮ್ಮ ನಾಮಫಲಕಗಳನ್ನು ಕೋಕಾ ಕೋಲಾ ಮತ್ತು ಹ್ಯಾಂಗ್ಯೋ ಸಂಸ್ಥೆಗಳಿಗೆ ಪ್ರಾಯೋಜಿಸಲು ಅವಕಾಶಕೊಟ್ಟು, ಅವು ತಮ್ಮ ಲಾಂಛನಗಳನ್ನು ನಾಮಫಲಕದ ಪ್ರಾರಂಭ ದಲ್ಲೇ ಇಂಗ್ಲಿಷ್‌ನಲ್ಲಿ ಬರೆಯಲು ಸಮ್ಮತಿಸಿರುವುದು ವಿಷಾದನೀಯ ಎಂದು ಕಿಡಿಕಾರಿದ ಅವರು, ಆಹಾರ ಮೇಳದಲ್ಲಿ ಇಂಗ್ಲಿಷ್ ಮೆರೆಸಿದ್ದ ಕೋಕಾ ಕೋಲಾ, ಹ್ಯಾಂಗ್ಯೋ, ಕ್ವಾಲಿಟಿ ಮುಂತಾದ ಕಂಪೆನಿಗಳ ಫಲಕ ಗಳಿಗೂ ಕಪ್ಪು ಬಣ್ಣ ಬಳಿದರು. ಪೊಲೀಸರು ಪ್ರದರ್ಶಿಸಲು ಹಾಕಿ ಕೊಂಡಿರುವ ಗುರುತಿನ ಚೀಟಿಯಲ್ಲೂ ಕನ್ನಡ ಕಾಣೆಯಾಗಿದೆ. ಪೊಲೀಸ್ ಇಲಾಖೆಯು ಸರ್ಕಾರದ ಒಂದು ಭಾಗವಾಗಿದ್ದರೂ ಇಂಗ್ಲಿಷ್ ಆದ್ಯ ತೆಗೆ ಅವಕಾಶ ಕಲ್ಪಿಸಿರುವುದು ನಿಯಮ ಉಲ್ಲಂಘನೆಯಾಗಿದೆ. ಈ ಲೋಪಕ್ಕೆ ಕಾರಣರಾದ ಅಽಕಾರಿಗಳ ಮೇಲೆ ಕ್ರಮಕೈಗೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಽಕಾರವು ಶಿಫಾರಸ್ಸು ಮಾಡಬೇಕು ಎಂದು ಅವರು ಆಗ್ರಹಿಸಿದರು.
ಜಂಬೂಸವಾರಿಯಂದು ಶೇ. ೬೦ ಕನ್ನಡ ಕಾಣಲೇಬೇಕು: ವಿಜಯದಶಮಿಯ ದಿನ ಜಂಬೂಸವಾರಿ ಮೆರವಣಿಗೆಯ ಸಂದರ್ಭದಲ್ಲಿ ಪ್ರಾಯೋಜಕರು ಶೇ. ೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯ ಕೊಟ್ಟು ತಮ್ಮ ಪ್ರಚಾರ ಫಲಕಗಳನ್ನು ಹಾಕಬೇಕು. ಇಲ್ಲದಿದ್ದರೆ. ‘ನಮ್ಮನ್ನು ಬಂಽಸಿದರೂ ಸರಿಯೇ’ ನಾವು ಮಸಿ ಬೆಳೆಯುತ್ತೇವೆ ಎಂದು ಸ. ರ. ಸುದರ್ಶನ ಮತ್ತು ಅರವಿಂದ ಶರ್ಮ ಹೇಳಿದರು.