ನಂಜನಗೂಡು: ತಾಲ್ಲೂಕಿನ ದೇಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರಾಜ್ಯ ಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ೧೪ ವರ್ಷ ವಿಭಾಗದಲ್ಲಿ ವಿದ್ಯಾರ್ಥಿ ಪೃಥ್ವಿ ೨೦೦ ಮೀ. ಫ್ರೀಸ್ಟೈಲ್‌ನಲ್ಲಿ ದ್ವಿತೀಯ, ೧೦೦ ಮೀ ಫ್ರೀ ಸ್ಟೈಲ್‌ನಲ್ಲಿ ದ್ವಿತೀಯ, ಲೋಹಿತ್ ೨೦೦ ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ, ೧೦೦ ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ತೃತೀಯ, ೫೦ ಮೀ. ಬಟರ್ ನಲ್ಲಿ ತೃತೀಯ, ರೋಹಿತ್ ಕುಮಾರ್ ೪೦೦ ಮೀ. ಫ್ರೀಸ್ಟೈಲ್‌ನಲ್ಲಿ ದ್ವಿತೀಯ, ೧೦೦ ಮೀ. ಬ್ರೆಸ್ಟ್ ಸ್ಟ್ರೋಕ್ ನಲ್ಲಿ ತೃತೀಯ, ಶಿವಸ್ವಾಮಿ ೫೦ ಮೀ. ಬ್ಯಾಕ್ ಸ್ಟ್ರೋಕ್‌ನಲ್ಲಿ ದ್ವಿತೀಯ, ೫೦ ಮೀ. ಬ್ರೆಸ್ಟ್ ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಈ ನಾಲ್ವರೂ ವಿದ್ಯಾರ್ಥಿಗಳು ೪*೧೦೦ ಫ್ರೀ ಸ್ಟೈಲ್ ರಿಲೇ ಹಾಗೂ ೪*೧೦೦ ಮಿಡ್ಲ್ ರಿಲೇ ಎರಡರಲ್ಲೂ ದ್ವಿತೀಯ ಬಹುಮಾವನ್ನು ಪಡೆದಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ವೈ. ರವಿಕುಮಾರ್ ತಿಳಿಸಿದ್ದಾರೆ