Mysore
21
mist

Social Media

ಶುಕ್ರವಾರ, 02 ಜನವರಿ 2026
Light
Dark

ಓದುಗರ ಪತ್ರ: ಸಂಗೀತ ವಾದಕರನ್ನೂ ಪರಿಗಣಿಸಿ

ಡಾ.ನಾಗರಾಜ ಬೈರಿ ಅವರ ನೇತೃತ್ವದಲ್ಲಿ ಮೈಸೂರಿನ ಸುಗಮ ಸಂಗೀತ ಪರಿಷತ್ ಸಮಾಜ ಸೇವೆಯ ಸದುದ್ದೇಶದಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ.

ಆದರೆ, ಈ ಕಾರ್ಯಕ್ರಮಗಳಲ್ಲಿ ಗಾಯಕರಿಗೆ ಹೆಚ್ಚಿನ ಪ್ರಾಧಾ ನ್ಯತೆಯನ್ನು ನೀಡಲಾಗುತ್ತಿದ್ದು, ಸಂಗೀತ ವಾದಕರನ್ನು ಕಡೆಗಣಿಸಲಾಗುತ್ತಿದೆ ಯೇನೋ ಅನಿಸುತ್ತಿದೆ. ಯಾವುದೇ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಗಾಯನದಷ್ಟೇ ಹಿನ್ನೆಲೆ ಸಂಗೀತವೂ ಅಷ್ಟೇ ಮುಖ್ಯ. ಅದನ್ನು ಸುಗಮವಾಗಿ ನುಡಿಸುವ ವಾದಕರಿಗೂ ಗಾಯಕರಿಗೆ ಸಿಗುವಂತಹ ಸ್ಥಾನಮಾನಗಳು ಸಿಗಬೇಕು.

ಆದರೆ, ಈಗ ಸುಗಮ ಸಂಗೀತ ಪರಿಷತ್ 10ರಿಂದ 15 ಗಾಯಕರನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡು ಅವರಿಗೆ ಮುಖ್ಯ ಕಾರ್ಯಕ್ರಮಗಳಲ್ಲಿ ಹಾಡಲು ಅವಕಾಶ ನೀಡುವುದಾಗಿ ಹೇಳಿದೆ. ಆದರೆ ಎಲ್ಲಿಯೂ ವಾದ್ಯ ನುಡಿಸುವ ಕಲಾವಿದರನ್ನು ಆಯ್ಕೆ ಮಾಡುವುದಾಗಿ ಹೇಳಿಲ್ಲ. ಇದು ವಾದ್ಯಗಾರರಿಗೆ ಆದ ವಂಚನೆಯಲ್ಲವೇ? ಆದ್ದರಿಂದ ಪರಿಷತ್ ಈ ಬಗ್ಗೆ ಗಮನಹರಿಸಿ ವಾದ್ಯಗಾರರಿಗೂ ಗಾಯಕರಷ್ಟೇ ಪ್ರಾತಿನಿಧ್ಯ ನೀಡಿ ಅವರನ್ನೂ ಆಯ್ಕೆ ಮಾಡಿ ಮುಖ್ಯವಾಹಿನಿಗೆ ತರಬೇಕಿದೆ.

-ಎಲ್.ಎನ್.ದಯಾನಂದ, ತಬಲಾ ವಾದಕ, ಕೃಷ್ಣಮೂರ್ತಿಪುರಂ,

 

Tags:
error: Content is protected !!