ಮೈಸೂರಿನ ಹೆಬ್ಬಾಳದಲ್ಲಿರುವ ಸೂರ್ಯ ಬೇಕರಿ ವೃತ್ತದ ಸಮೀಪದಲ್ಲಿ ರುವ ಎರಡನೇ ಅಡ್ಡ ರಸ್ತೆಯಲ್ಲಿನ ಮ್ಯಾನ್‌ಹೋಲ್ ಬಳಿ ಡಾಂಬರು ಕುಸಿದು ಗುಂಡಿ ನಿರ್ಮಾಣವಾಗಿ ಹಲವಾರು ತಿಂಗಳುಗಳೇ ಕಳೆದರೂ ಪಾಲಿಕೆಯವರು ದುರಸ್ತಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಕಳೆದ ವಾರ ಸ್ಥಳೀಯ ನಿವಾಸಿಗಳೇ ಸೇರಿ ಈ ಗುಂಡಿಗೆ ಮಣ್ಣುತುಂಬಿದ್ದರು. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಣ್ಣು ಸಂಪೂರ್ಣವಾಗಿ ಕೊಚ್ಚಿ ಹೋಗಿ ಗುಂಡಿ ನಿರ್ಮಾಣವಾಗಿ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಈ ಅಡ್ಡರಸ್ತೆ ಕಿರಿದಾದ ಕಾರಣ ಪಾದಚಾರಿಗಳು, ದಾರಿಹೋಕರು ಮತ್ತು ದ್ವಿಚಕ್ರ ವಾಹನ ಸವಾರರು ತಿರುವಿನಲ್ಲಿರುವ ಈ ಗುಂಡಿಯಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಗುಂಡಿಯನ್ನು ಮುಚ್ಚುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕಾಗಿದೆ.
– ಆರ್. ಯಶಸ್, ಮೈಸೂರು





