ನಾಡಹಬ್ಬ ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯ್ಕೆ ಮಾಡಿರುವುದು ಸ್ವಾಗತಾರ್ಹ ನು ಮುಷ್ತಾಕ್ ಅವರು ಹೆಣ್ಣಿನ ಶೋಷಣೆಯ ಕುರಿತಾಗಿ ಸುಮಾರು ಐವತ್ತು ಕತೆಗಳನ್ನು ಬರೆದಿದ್ದಾರೆ. ಯಾವುದೇ ಧರ್ಮದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆಯನ್ನು ವಿರೋಧಿಸುವ ಅವರನ್ನು ಸರ್ವ ಧರ್ಮದವರೂ ಸ್ವಾಗತಿಸಬೇಕು.
ಸರ್ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದಾಗ, ಹಿಂದೂಯೇತರ ಅನೇಕ ಪೈಲ್ವಾನರು, ಪಟುಗಳು, ಪೇದೆಗಳು, ಬ್ಯಾಂಡ್-ಭಾಜಂತ್ರಿಗಳು, ಸಂಗೀತಗಾರರು, ಮಂತ್ರಿಗಳು, ಬ್ರಿಟಿಷ್ ಅಧಿಕಾರಿಗಳು ಇತ್ಯಾದಿ ವರಿಷ್ಠರೂ , ಸಾಮಾನ್ಯರೂ ದಸರಾ ಉತ್ಸವಗಳಲ್ಲಿ ಭಾಗಿಯಾಗಿದ್ದಾರೆ. ಕವಿ ನಿಸಾರ್‌ಅಹಮದ್ ಅವರೂ ಈ ಹಿಂದೆ ನಾಡಹಬ್ಬ ದಸರಾವನ್ನು ಉದ್ಘಾಟಿಸಿದ್ದಾರೆ. ಹಾಗಾಗಿ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ.
-ರವಿ ಬಳೆ, ಯಾದವಗಿರಿ , ಮೈಸೂರು





