Mysore
20
overcast clouds
Light
Dark

ಶಿವನ ಕೂಗುತ್ತಿದ್ದ ಆಜಾನು

• ಅಜಯ್‌ ಕುಮಾರ್‌ ಎಂ ಗುಂಬಳ್ಳಿ

ನಮ್ಮೂರ ಮಸೀದಿಯಲ್ಲಿ ಮಣ್ಣಗೆ ಅಜಾನ್ ಕೂಗಿದ ಮೇಲೆಯೇ ಸಾಮಾನ್ಯವಾಗಿ ಎಲ್ಲಾ ಜನರು ಕಣ್ಣು ಬಿಡುತ್ತಿದ್ದರು. ಅವರು ಅಜಾನ್ ಕೂಗುವುದನ್ನು ಶಿವನ ಕೂಗೋದು’ ಅಂತ ನಮಗೆ ಕರೆಯುತ್ತಿದ್ದರು.

ಮುಂಜಾನೆಯ ಆರು-ಏಳು ಗಂಟೆವರೆಗೂ ನಿದ್ರೆ ಮಾಡುವುದು ಮನುಷ್ಯನ ಸಹಜ ಕಾರ್ಯ, ಊರಿನಲ್ಲಿ ದನಕರು ಇದ್ದವರು, ಕೂಲಿಗೆ ಹೋಗುವವರು, ಬೇರೆಯದೆ ಕೆಲಸ ಕಾರ್ಯಗಳಿಗೆ ಹೋಗುವವರು ಜವಾಬ್ದಾರಿಯಿಂದ ಬೇಗನೇ ಎದ್ದೇಳುವರು. ಅವರಿಗೆ ಮಸೀದಿಯ ಆಜಾನ್ ರಬ್ಬ ಸರಿಯಾದ ವೇಳೆಗೆ ಬಡಿದುಕೊಳ್ಳುವ ಅಲಾರಾಮ್ ನಂತೆ ಕಿರುಚ ಎಚ್ಚರಿಸುತ್ತದೆ. ನಾನು ಸಣ್ಣವನಾಗಿದ್ದಾಗ ಬೆಳಿಗ್ಗೆ ಆದು ಗಂಟೆಯ ಮೇಲೆದ್ದು ‘ನಾನು ಬೇಗನೇ ಎದ್ದಿದ್ದೀನಿ’ ಎಂದಾಗ ನನ್ನ ವಾರಗೆಯವನ ಮತ್ತೊಬ್ಬ ‘ನಾನು ನಿನಗಿಂತ ಬೇಗನೆ ಎದ್ದಿದ್ದೆ. ನಮ್ ಅಪ್ಪ ಮಸೀದಿಲಿ ಕೂಗಿದಾಗಲೇ ನನ್ನನ್ನು ಎಬ್ಬಿಸಿದ ಅಂತ ಹೇಳಿಕೊಳ್ಳುತ್ತಿದ್ದ ಗೆಳೆಯರು ನಾವೆಲ್ಲ ಇಂತಹ ಸಣ್ಣಪುಟ್ಟ ನೆನಪುಗಳ ಜೊತೆ ಬೆಳೆದವರು.

ಸಣ್ಣ ವಯಸಲ್ಲಿ ಊರುಕೇರೀಲಿ ಸುತ್ತಾಡುವಾಗ ಬಡಕಲು ವೃದ್ಧೆಯಾಗಿದ್ದ ಫಾತಿಮಾಳ ಭಾಗಶಃ ಒಂಟಿಮನೆ, ಕುಂಟ ಸಾಬರ ಗುಡಿಸಲು ಮನೆ, ಮೆಹಬೂಬನ ಸೈಕಲ್ ಶಾಪ್, ಅಹಮದ್‌ ಚಿಲ್ಲರೆ ಅಂಗಡಿ ಇವೆಲ್ಲ ನನಗೆ ಖುಷಿ ಬೆರಗು, ಗುಮಾನಿ, ರೋಮಾಂಚನ ಇತ್ಯಾದಿ ತರಿಸಿದೆ. ಅಲ್ಲೆಲ್ಲ ಅಡ್ಡಾಡಿ ಬಿದ್ದು ಗಾಯ ಮಾಡಿಕೊಂಡು, ಅಂಗಡಿಯ ಕೆಳಗೆ ಚಿಲ್ಲರೆಗಾಗಿ ತಡಕಾಡಿ ಕಣ್ಣಿಗೆ ಮೆಣಸಿನ ಪುಡಿ ಬಿದ್ದು ನಾನು ಮತ್ತು ಗೆಳೆಯ ಆದಿ ಓಡಾಡಿದ್ದು ಇವತ್ತಿಗೂ ನೆನಪಿದೆ. ಆದರೂ ನಾವು ತುಂಬಾಟ ಬಿಟ್ಟು ನಡೆದಿದ್ದು ಇಲ್ಲ, ಮೇಕೆಗಳಿಗೆ ಕುಸ್ತಿ ಕಲಿ4 ಅವುಗಳ ಪ್ರಣಯವನ್ನು ಕಣ್ಣು ಮಿಟುಕಿಸದೆ ಇಬ್ಬರೂ ಒಟ್ಟಿಗೆ ನೋಡುತ್ತಿದ್ದವು. ಇನ್ನು ಕೆರೆ ಕಾಲುವೆಯಲ್ಲಿ ಈಜು ಹೊಡೆದದ್ದೂ ಇದೆ. ದಪ್ಪ ಕಟ್ಟೆಯಲ್ಲಿ ಶನಿ ಮಹಾತ್ಮಗುಡಿಯ ಕಟ್ಟೆಯಲ್ಲಿ ಕರಿಕಲ್ಲು ಕ್ವಾರಿಯ ಕೆಲಸ ನಡೆಯುತ್ತಿದ್ದ ಸ್ಥಳದ ಪಕ್ಕದಲ್ಲಿನ ಕೆರೆಯಲ್ಲಿ ಈಜಾಡಿದ್ದವು. ನನಗೆ ಅಷ್ಟೇನು ಪಕ್ಕವಾಗಿ ಬರುತ್ತಿರಲಿಲ್ಲ. ಗೆಳೆಯರು ಮುಂಬದಿಗೆ, ಹಿಂಬದಿಗೆ ಈಜಿದರ ನಾನು ಮುಂಬದಿ ಈಜಪ್ಪ ಹೊಡೆಯುತ್ತಿದ್ದೆ. ಒಮ್ಮೆ ಸುಮಾರು ಮೂವತ್ತು ಮೀಟ‌ರ್ ಉದ್ದದ ಕೆರೆಯಲ್ಲಿ ನೀರಿನ ಬಾಟಲಿಗಳನ್ನು ನಡುವಿನ ದಾರಕ್ಕೆ ಸಿಕ್ಕಿಸಿಕೊಂಡು ಈಜುತ್ತಿದ್ದಾಗ ಬಾಟಲಿ ಕಳೆದುಕೊಂಡು ನಾನು ಈಜಲು ಹರಸಾಹಸ ಪಡುತ್ತಿದ್ದಾಗ ಗೆಳೆಯರು ನನ್ನನ್ನು ದಡ ಮುಟ್ಟಿಸಿದ್ದರು. ಅಲ್ಲದೆ ನಾನು ಮತ್ತು ಗೆಳೆಯ ಆದಿ ಕರಿಕಲ್ಲು ಕ್ವಾರಿಯ ಕೆಲಸದ ಟಾಕ್ಟರ್ ಟಯರನ್ನು ಅಲ್ಲಿನ ಕೆರೆಗೆ ತಳ್ಳಿಬಿಟ್ಟಿದವು.

ಸೈಕಲ್ ಎಂದರೆ ನಮಗೆ ಬಲು ಖುಷಿ ಅದನ್ನು ಹೊಡೆಯೋದು ಕಲಿತದ್ದು; ರೋಚಕ. ದೊಡ್ಡ ಸೈಕಲ್ ಕಲಿಯಲು, ಅದನ್ನು ನಿಭಾಯಿಸಲು ನಮಗೆ ಎತ್ತರ ಸಾಲುತ್ತಿರಲಿಲ್ಲ. ಆದ್ದರಿಂದ ಅರಪೆಟ್ಟಲು ಸೈಕಲ್ ತುಳಿಯಬೇಕಿತ್ತು ಮುಸ್ಲಿಂ ಬೀದಿಯ ಮೆಹಬೂಬ ಹೊಸರಾಗಿ ನಾಲ್ಕು ಚಿಕ್ಕ ಸೈಕಲ್‌ಗಳನ್ನು ಅವನ ಸೈಕಲ್ ಶಾಪಿಗೆ ತಂದಿದ್ದು ನಮಗೆ ತಿಳಿದಿತ್ತು ನಾನು ಮತ್ತು ಗೆಳೆಯ ಅಲ್ಲಿಗೆ ಹೋಗಿ ಎರಡು ರೂಪಾಯಿಗೆ ಸೈಕಲ್ ಪಡೆದು ಅವನು ಹೇಳಿದ ಸಮಯದ ಮೇಲೆ ಐದರಿಂದ ಹತ್ತು ನಿಮಿಷ ತಡಮಾಡಿಕೊಂಡು ಹೋಗುತ್ತಿದ್ದವು. ಮಹಬೂಬ ‘ಇದೇ ತರ ಮಾಡುದ್ರೆ ನಿಮಗೆ ಸೈಕಲ್ ಕೊಡೋದ ಇಲ್ಲ’ ಎಂದು ಗದರಿಸಿದರೂ, ಮತ್ತೆ ನಾಳೆಗೆ ಹೋದರೆ ಸೈಕಲ್ ಕೊಡುತ್ತಿದ್ದ. ಆದು ಅವನಿಗೆ ವ್ಯಾಪಾರ.

ನಾನು ಸಣ್ಣವನಾಗಿದ್ದಾಗಲೇ ವೃದ್ಧೆ ಆಗಿದ್ದ ಫಾತಿಮಾ ಈಗ ಅಜ್ಜಜ್ಜು ಮುದುಕಿ. ನಾನು ಮತ್ತು ಗೆಳೆಯರು ಓಡಾಡುವಾಗಲೆಲ್ಲ ‘ಯಾರ ಮಗನ ನೀನು’ ಅಂತ ಕೇಳುತ್ತಿದ್ದ ಅಜ್ಜಿ ಇಂದಿಗೆ ಕಣ್ಣು ಕಾಣದೆ, ಸಣ್ಣ ಕೆಲಸವನ್ನೂ ಮಾಡಿಕೊಳ್ಳಲು ಅಶಕ್ತಳಾಗಿ ಒಬ್ಬಳೇ ಒಂಟಿ ಮನೆಯಲ್ಲಿ ಅದ್ಹೇಗೆ ಜೀವನ ಮಾಡಿದ್ದಳು ಎಂಬುದೇ ಆಶ್ಚರ್ಯ.

ಅವಳಿಗೆ ಹೆಣ್ಣು ಮಕ್ಕಳಿದ್ದರು. ಅವರೆಲ್ಲ ಮದುವೆ ಆಗಿ ಹೋಗಿದ್ದವರು. ಯಾವಾಗಲಾದರು ಒಮ್ಮೆ ಬಂದು ನೋಡಿ ಹೋಗುತ್ತಿದ್ದರು. ಮಿಕ್ತ ವೇಳೆಯಲ್ಲಿ ಫಾತಿಮಾ ಅಜ್ಜಿ ಒಬ್ಬಳೇ ಆ ಮನೆಯಲ್ಲಿ ಇರುತ್ತಿದ್ದಳು. ಅಲ್ಲದೆ ಕುಂಟು ಸಾಬರನ್ನು ನಾನಂತು ನೋಡೇ ಇಲ್ಲ. ಅವನ ಹೆಂಡತಿ ಬೇಗಮ್ಮ ಬೀಡಿ ಕಟ್ಟಿಕೊಂಡೆ ಮಕ್ಕಳನ್ನು ಸಾಕಿದಳೆಂದು ಜನಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಬಾಲ್ಯದಲ್ಲಿ ಕಂಡವರನ್ನು ಹೀಗೆ ನೆನಪಿಸಿಕೊಂಡಾಗ ನಾನು ಮತ್ತೆ ಬಾಲ್ಯವನ್ನು ಅನುಭವಿಸಿ ಬಂದೆ ಎಂದರೆ ಅತಿಶಯೋಕ್ತಿಯಲ್ಲ.
ajayapta491@gmail.com