- ಪ್ರಸಾದ್ ಲಕ್ಕೂರು
ಚಾ. ನಗರ: ಕೇರಳ ರಾಜ್ಯದ ವಯನಾಡಿನ ಮೇಪ್ಪಾಡಿಯಲ್ಲಿ ಸುರಿದ ಭೀಕರ ಮಳೆ ಹಾಗೂ ಭೂ ಕುಸಿತದಿಂದ ಚೂರಲ್ ಮಲೈನಲ್ಲಿ ನಿರ್ಮಿಸಿದ್ದ ಕನಸಿನ ಮನೆ ಜೊತೆಯಲ್ಲಿಯೇ ರಾಜೇಂದ್ರ (ರಾಜನ್) ಮತ್ತು ರತ್ನಮ್ಮ (ರಜನಿ) ದಂಪತಿ ಕೊಚ್ಚಿ ಹೋಗಿದ್ದಾರೆ.
ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ರಾಜೇಂದ್ರ ಇರಸವಾಡಿ ಗ್ರಾಮದ ರತ್ನಮ್ಮಳನ್ನು ಮದುವೆಯಾಗಿದ್ದರು. ಹೆಚ್ಚು ಕೂಲಿ ಹಣ ಅರಸಿ ಕೇರಳದ ಮೇಪ್ಪಾಡಿ ಬಳಿಯ ಚೂರಲ್ ಮಲೈಗೆ ತೆರಳಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.
ಎಸ್ಟೇಟ್‌ನಲ್ಲಿ ಕೆಲಸ ಮಾಡಿ ಒಂದಷ್ಟು ಹಣ ಸಂಪಾದಿಸಿದ ರಾಜೇಂದ್ರ ದಂಪತಿ ಸ್ವಂತ ನೆಲದಲ್ಲೇ ಬದುಕು ಕಟ್ಟಿಕೊಳ್ಳಲು ಮುಂದಾಗಿ ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ಬೇಕರಿ ತೆರೆದಿದ್ದರು. ಆದರೆ, ಬೇಕರಿ ವ್ಯಾಪಾರದಲ್ಲಿ ನಷ್ಟ ಸಂಭವಿಸಿದ್ದರಿಂದ ಮತ್ತೆ ಚೂರಲ್ ಮಲೈಗೆ ತೆರಳಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮುಂದುವರಿಸಿದ್ದರು. ಅಲ್ಲಿಯೇ ಜಾಗ ಖರೀದಿಸಿ, ತಮ್ಮ ಕನಸಿನ ಪುಟ್ಟದೊಂದು ಮನೆಯನ್ನು ಇತ್ತೀಚೆಗೆ ನಿರ್ಮಿಸಿಕೊಂಡು ವಾಸವಿದ್ದರು. ಮಂಗಳವಾರ ತಡರಾತ್ರಿ ಸಂಭವಿಸಿದ ಜಲಪ್ರವಾಹದಿಂದ ಮನೆಯೂ ಮುಳುಗಡೆ ಯಾಗಿ ಅಣ್ಣನ ಶವ ಪತ್ತೆಯಾಗಿ, ಅತ್ತಿಗೆಯ ಗುರುತು ಸಿಗದಂತಾಗಿದೆ. ರಾಜೇಂದ್ರ ದಂಪತಿ, ತಮ್ಮ ಕನಸಿನ ಮನೆ ಜೊತೆಯಲ್ಲಿಯೇ ಕಣ್ಮರೆಯಾಗಿದ್ದಾರೆ.
ಮೇಪ್ಪಾಡಿ ಪ್ರವಾಹದಲ್ಲಿ ಮೃತಪಟ್ಟ ರಾಜೇಂದ್ರ-ರತ್ನಮ್ಮ ?
ಚಾಮರಾಜನಗರ ಜಿಲ್ಲೆಯ ವೆಂಕಟಯ್ಯನಛತ್ರ ಮೂಲದ ಪತಿ ಪತ್ನಿ ?, ಕೂಲಿ ಕೆಲಸಕ್ಕಾಗಿ ಮೇಪ್ಪಾಡಿಗೆ ತೆರಳಿದ್ದರು ?, ದಂಪತಿಗೆ ಮಕ್ಕಳಿರಲಿಲ್ಲ ?, ಪ್ರಳಯ ಸಂಭವಿಸುವ ಹಿಂದಿನ ದಿನವಷ್ಟೇ ಊರಿಗೆ ಮರಳಿದ್ದ ರಾಜೇಂದ್ರ ಸೋದರಿ.
‘ನಾವೇ ಅಂತ್ಯ ಸಂಸ್ಕಾರ ಮಾಡುತ್ತೇವೆ’
ಮಗಳು ರತ್ನಮ್ಮಳನ್ನು ವೆಂಕಟಯ್ಯನಛತ್ರದ ರಾಜೇಂದ್ರ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಹತ್ತಾರು ವರ್ಷಗಳ ಹಿಂದೆಯೇ ಚೂರಲ್‌ಮಲೈಗೆ ತೆರಳಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಭೂ ಕುಸಿತಕ್ಕೆ ಸಿಲುಕಿ ಇಬ್ಬರೂ ಕಣ್ಮರೆಯಾಗಿದ್ದಾರೆ. ಅವರ ಮೃತದೇಹಗಳನ್ನು ಪತ್ತೆ ಮಾಡಿಕೊಟ್ಟರೆ, ನಾವೇ ಅಂತ್ಯಕ್ರಿಯೆ ನಡೆಸುತ್ತೇವೆ.
-ನಂಜುಂಡಶೆಟ್ಟಿ, ಮೃತರಾದ ರತ್ನಮ್ಮ ಅವರ ತಂದೆ.
‘ಪ್ರವಾಹದ ಹಿಂದಿನ ದಿನವಷ್ಟೇ ವಾಪಸ್ ಬಂದೆ’
ಅತ್ತಿಗೆ ರತ್ನಮ್ಮ, ಅಣ್ಣ ರಾಜೇಂದ್ರರನ್ನು ನೋಡಲು ಕೇರಳದ ಚೂರಲ್ ಮಲೈಗೆ ಹೋಗಿದ್ದೆ. ಅದೃಷ್ಟವಶಾತ್ ಭೂ ಕುಸಿತ ಸಂಭವಿಸಿದ ಹಿಂದಿನ ದಿನವಷ್ಟೇ ಅಂದರೆ ಭಾನುವಾರ ವಾಪಸ್ ಇರಸವಾಡಿಗೆ ಬಂದುಬಿಟ್ಟಿದ್ದೆ. ಅಲ್ಲಿಯೇ ಇದ್ದಿದ್ದರೆ ಬಹುಶಃ ನಾನೂ ಕೂಡ ಜೀವಂತವಾಗಿ ಉಳಿಯುತ್ತಿರಲಿಲ್ಲ ಅನಿಸುತ್ತದೆ ಎಂದು ಮೃತ ರಾಜೇಂದ್ರ ಅವರ ಸೋದರಿ ಜ್ಯೋತಿ ಕಣ್ಣೀರಿಟ್ಟರು. ಅಣ್ಣ-ಅತ್ತಿಗೆ ಶ್ರಮ ಜೀವಿಗಳು. ಎಸ್ಟೇಟ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಮಕ್ಕಳಿರಲಿಲ್ಲ. ಇತ್ತೀಚೆಗೆ ಗ್ರಾಮದಲ್ಲಿ ನಡೆದ ನಮ್ಮ ಸಂಬಂಽಕರ ಶುಭ ಸಮಾರಂಭಕ್ಕೂ ಬಂದಿದ್ದರು ಎಂದು ನೆನಪಿಸಿಕೊಂಡರು