Mysore
23
broken clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ರಾಸುಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

ಮೈಸೂರು: ಅಕ್ರಮವಾಗಿ ರಾಸುಗಳನ್ನು ಸಾಗಿಸು ತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಾಳು ಠಾಣಾ ಪೊಲೀಸರು ಹಸು, ಕರು ಸೇರಿದಂತೆ ೨೫ ರಾಸುಗಳನ್ನು ರಕ್ಷಿಸಿದ್ದಾರೆ.

ಹುಣಸೂರು ರತ್ನಪುರಿ ಬಳಿಯ ದರ್ಗಾದಲ್ಲಿ ರೋಹನ್ ಹಾಗೂ ಅಸ್ರುಲ್ಲಾ ಷರೀಫ್ ಎಂಬವರು ರಾಸುಗಳನ್ನು ಖರೀದಿಸಿ ಮೈಸೂರಿಗೆ ತರುತ್ತಿದ್ದಾರೆ ಎಂಬ ಮಾಹಿತಿ ಹೆಬ್ಬಾಳು ಠಾಣಾ ಪೊಲೀಸರಿಗೆ ಬಂದಿದೆ. ಕೂಡಲೇ ಜಾಗೃತರಾದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸೆ. ೨೩ರಂದು ರಾತ್ರಿ ೮. ೩೦ರಲ್ಲಿ ಹೆಬ್ಬಾಳು ರಿಂಗ್ ರಸ್ತೆಯ ಬಳಿ ಬರುತ್ತಿದ್ದ ಗೂಡ್ಸ್ ವಾಹನವನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಅಲ್ಲಿ ೨೫ ರಾಸುಗಳನ್ನು ತುಂಬಿ ಸಾಗಿಸುತ್ತಿರುವುದು ಕಂಡು ಬಂದಿದೆ. ಪೊಲೀಸರು ಕೂಡಲೇ ಆರೋಪಿಗಳನ್ನು ವಶಕ್ಕೆ ಪಡೆದು ರಾಸುಗಳನ್ನು ರಕ್ಷಿಸಿದ್ದಾರೆ.

ಯುವ ವೈದ್ಯರಿಗೆ ೫೦ ಲಕ್ಷ ರೂ. ವಂಚನೆ ಮೈಸೂರು: ರೇಡಿಯಾಲಜಿ ವಿಭಾಗದಲ್ಲಿ ಪ್ರವೇಶ ಕೊಡಿಸು ವುದಾಗಿ ನಂಬಿಸಿ ಯುವ ವೈದ್ಯರೊಬ್ಬರಿಂದ ದುಷ್ಕರ್ಮಿ ಗಳು ೫೦ ಲಕ್ಷ ರೂ. ಹಣ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ. ಸಿದ್ದಾರ್ಥನಗರದ ನಿವಾಸಿ ಡಾ. ನಿಶಾಂತ್ ಎಂಬವರೇ ವಂಚನೆಗೆ ಒಳಗಾದವರು. ಬೆಂಗಳೂರು ಮೂಲದ ಪ್ರದೀಪ್ ಕುಮಾರ್ ಹಾಗೂ ಶ್ರುತಿ ಎಂಬವರ ವಿರುದ್ಧ ಇದೀಗ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ವಂಚನೆ ದೂರು ದಾಖಲಾಗಿದೆ. ಡಾ. ನಿಶಾಂತ್ ಕುಟುಂಬದವರಿಗೆ ಆರೋಪಿಗಳ ಪರಿಚಯವಾಗಿದೆ. ಎಂಬಿಬಿಎಸ್ ಪೂರ್ಣಗೊಳಿಸಿದ್ದ ನಿಶಾಂತ್‌ಗೆ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ರೇಡಿಯಾಲಜಿ ವಿಭಾಗದಲ್ಲಿ ಪ್ರವೇಶ ಕೊಡಿಸುವುದಾಗಿ ಅವರ ಪೋಷಕರನ್ನು ನಂಬಿಸಿದ್ದಾರೆ. ಹೀಗಾಗಿ ನಿಶಾಂತ್ ಪೋಷಕರು ಹಂತ ಹಂತವಾಗಿ ಆರೋಪಿಗಳಿಗೆ ೫ ಲಕ್ಷ ರೂ. ಅನ್ನು ನಗದಾಗಿ ಹಾಗೂ ೪೫ ಲಕ್ಷ ರೂ. ಹಣವನ್ನು ಆರ್ ಟಿಜಿಎಸ್ ಮೂಲಕ ಕಳುಹಿಸಿದ್ದಾರೆ. ಆದರೆ, ಅವರ ಮಗನಿಗೆ ಸೀಟ್ ದೊರಕಿಲ್ಲ. ಹೀಗಾಗಿ ಅವರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

 

Tags: