Mysore
23
haze

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಆಂದೋಲನ ಕೇವಲ ಪತ್ರಿಕೆಯಲ್ಲ; ಅದೊಂದು ಸಿದ್ಧಾಂತ

-ಪ.ಮಲ್ಲೇಶ್

ಹಿರಿಯ ಹೋರಾಟಗಾರರು, ಮೈಸೂರು.

ನನಗಿನ್ನು ನೆನಪಿದೆ. ಧಾರವಾಡದಲ್ಲಿ ನಡೆದ ಸಮಾಜವಾದಿ ಯುವಜನ ಸಭಾದ ಸಭೆ ಮುಗಿದ ನಂತರ ಮೈಸೂರಿನ ಸ್ನೇಹಿತರು ರಾಜಶೇಖರ ಕೋಟಿಯನ್ನು ಮಾತನಾಡಿಸಿದೆವು. ಸಮಾಜವಾದಿ ಯುವಜನ ಸಭಾದಲ್ಲಿ ಭಾಗವಹಿಸುತ್ತಲೇ ತಮ್ಮ ಪತ್ರಿಕೆಯನ್ನು ಸಭೆಯಲ್ಲಿದ್ದ ಸ್ನೇಹಿತರಿಗೆಲ್ಲ ಕೊಡುತ್ತಿದ್ದರು. ಕೋಟಿ ನಮ್ಮನ್ನು ಆಕರ್ಷಿಸಿದ್ದು ಪತ್ರಿಕೆಯ ಮೂಲಕ. ಪಾಟೀಲ ಪುಟ್ಟಪ್ಪ ಅವರ ಪ್ರಪಂಚದಲ್ಲಿ ಕೆಲಸ ಮಾಡುತ್ತಿದ್ದರು ಎಂದು ನಮಗೆಲ್ಲ ಪರಿಚಯವಾಗಿತ್ತು. ಮೈಸೂರಿನ ನಮಗೆಲ್ಲರಿಗೂ ಪತ್ರಿಕೆಗಿಂತ ಪತ್ರಿಕೆ ಹೆಸರು ಗಮನ ಸೆಳೆದಿತ್ತು. ‘ಆಂದೋಲನ’. ಕೆಂಪು ಶಾಯಿಯಲ್ಲಿ ಅಚ್ಚಾದ ಹೆಸರು. ಆ ಹೆಸರನ್ನು ಓದುತ್ತಿದ್ದಂತೆ ನಾನು ಕಣ್ಮುಚ್ಚಿ ಕೆಲ ನಿಮಿಷಗಳು ಆ ಹೆಸರಿನ ಗುಂಗಿನಲ್ಲೇ ಮೈಮರೆತಿದ್ದೆ. ಸಮಾಜವಾದಿ ಚಳವಳಿ- ಹೋರಾಟ- ಆಂದೋಲನ- ಮನಸ್ಸು ತುಂಬಿ ಬಂತು. ಕೆಂಪು ಅಕ್ಷರಗಳಲ್ಲಿ ಆಂದೋಲನ ಕಣ್ಣಿಗೆ ರಾಚುತ್ತಿತ್ತು. ಆದರೆ, ಸುಮಾರಾದ ಕಾಗದದಲ್ಲಿ ಅಚ್ಚಾಗಿದ್ದ ಕಾರಣಕ್ಕೇನೋ ಅಚ್ಚು ಚೆನ್ನಾಗಿರಲಿಲ್ಲ. ಪತ್ರಿಕೆಯನ್ನು ನಾವೆಲ್ಲರೂ ತಿರುವಿ ಹಾಕಿದೆವು. ಪ್ರತಿಪುಟದಲ್ಲೂ ಅಚ್ಚಾಗಿದ್ದ ಸುದ್ದಿಗಳು, ಅದರ ಭಾಷೆ, ನನಗೆ ತಕ್ಷಣವೇ ಬೆಂಗಳೂರಿನ ಶೇಷಪ್ಪನವರ ‘ಕಿಡಿ’ ಪತ್ರಿಕೆ ನೆನಪಾಯಿತು. ವಾರಪತ್ರಿಕೆಯಾದ್ದರಿಂದ ಸುದ್ದಿಗಿಂತ ಹೆಚ್ಚಾಗಿ ಪ್ರಕರಣಗಳು, ಘಟನೆಗಳು ಚಿತ್ರಗಳ ಸಹಿತ ಅಚ್ಚಾಗಿದ್ದು ಸಮಾಜದಲ್ಲಿನ ತರತಮಗಳ ಸಂಕ್ಷಿಪ್ತ ವರದಿಗಳು ತುಂಬಿದ್ದವು. ಒಟ್ಟಾರೆಯಾಗಿ ಎಡಪಂಥೀಯ ಧೋರಣೆ ಪತ್ರಿಕೆಯ ಪ್ರಣಾಳಿಕೆ ಆಂದೋಲನದ ರೂಪದಲ್ಲೇ ಪ್ರಕಟವಾಗಿತ್ತು.

ಪತ್ರಿಕೆಯ ಹುಚ್ಚನ್ನು ತಲೆಗೆ ಕಟ್ಟಿಕೊಂಡು ಮೈಸೂರಿಗೆ ಬಂದು ಮುದ್ರಣಾಲಯವನ್ನು ಸ್ಥಾಪಿಸಿ ಕೇವಲ ಮುದ್ರಣಕ್ಕೆ ಮಾತ್ರ ಸೀಮಿತವಾಗಿ. ಪತ್ರಿಕೆಯ ಗುಂಗಿನಲ್ಲ ಇದ್ದ ನಾನು ಆಂದೋಲನವನ್ನು ನೋಡುತ್ತಿದ್ದಂತೆ ಸ್ನೇಹಿತರ ಮುಖಗಳನ್ನು ನೋಡುತ್ತ ಕೋಟಿಯವರಿಗೆ ಮಯಸೂರಿಗೆ ನೀವೇಕೆ ಬರಬಾರದು. ಪತ್ರಿಕೆಯನ್ನು ಚನ್ನಾಗಿ ಬೆಳೆಸಿ ರಾಜ್ಯ ಮಟ್ಟಕ್ಕೆ ಕೊಂಡೊ್ಂಯೋಣ ಎಂದೆ. ಹರ ಎನ್ನಲಿಲ್ಲ ಶಿವ ಎನ್ನಲಿಲ್ಲ ಕೋಟಿ.

ಮೈಸೂರು ವಾಪಾಸಾಗಿ ಎಂಟು- ಹತ್ತು ದಿನಗಳೇ ಆಗಿತ್ತು. ಮುದ್ರಣಾಲಯದಲ್ಲಿ ಪ್ರೂಫ್ ನೋಡುತ್ತ ಕುಳಿತಿದ್ದೆ. ‘ಸಾರ್’ ಎನ್ನುವ ದನಿ ಕೇಳಿ, ಯಾರು ಎಂದು ತಲೆ ಎತ್ತಿದೆ. ನನ್ನ ಆಶ್ಚರ್ಯಕ್ಕೆ ಕೋಟಿ ನಿಂತಿದ್ದರು. ಅರರೆ- ಯಾವಾಗ ಬಂದಿರಿ ಕೋಟಿ- ಬನ್ನಿ ಕುಳಿತುಕೊಳ್ಳಿ ಎಂದು ಪಕ್ಕದಲ್ಲಿದ್ದ ಬೆಂಚು ತೋರಿಸಿದೆ. ಅಷ್ಟರಲ್ಲಿ ತೇಜಸ್ವಿ ದಿಢೀರನೆ ನುಗ್ಗಿ ನನ್ನ ಟೇಬಲ್ ಮೇಲೆ ನೋಟಿನ ಕಂತೆ ಎಸೆದು ‘ಮಲ್ಲೇಶ ಒಂದು ಸಾವಿರ ಇದೆ. ಇನ್ನು ಮುಂದೆ ಆಂದೋಲನ ನನ್ನ ಪಾಡು ಎಂದು ಹೇಳಿ ನಿಲ್ಲೊ ಎಂದು ಕೂಗಿದರೂ ಕೇಳಿಸಿಕೊಳ್ಳದೆ ದುರ್ದಾನ ತೆಗೆದುಕೊಂಡಂತೆ ಹೊರಟೇ ಹೋದ. ಕೋಟಿ ನಿಂತೇ ಇದ್ದರು.

ಕೂತ್ಕೊಳ್ಳಿ ಎಂದರೂ ನಿಂತೇ ಇದ್ದಿವರನ್ನು ನಾನು ದಿಟ್ಟಿಸಿ ನೋಡಿದೆ. ದೇಹದ ಕಣಕಣದಲ್ಲೂ ಪತ್ರಿಕೋದ್ಯಮವನ್ನು ಹರವಿಕೊಂಡಂತಿದ್ದರು. ಒಂದು ಇಸ್ತ್ರಿ ಕಾಣದ ಖಾದಿ ಪೈಜಾಮ- ಪ್ಯಾಂಟ್- ದೊಗಲೆ ಶರ್ಟ್, ಜಬ್ಬು- ಮುಖದ ತುಂಬ ಬೆಳೆದು – ೨-೩ ಇಂಚು ಇಳಿಬಿದ್ದಿದ್ದ ಗಡ್ಡ, ಕೆದರಿದ ಕೂದಲು- ನರಪೇತಲನಂತಿದ್ದ ದೇಹ- ನಡೀರಿ ತಿಂಡಿ ತಿಂದು ಬರೋಣ ಎನ್ನುತ್ತಿದ್ದಂತೆ ‘ಬೇಡ ಆಯಿತು. ಇದೇ ಇನ್ನು ತೇಜಸ್ವಿ- ನಾನು ತಿಂಡಿ ತಿಂದೆವು ಎಂದರು. ಆಗ ನನಗೆ ಅರ್ಥವಾಯಿತು ಇದು ಪೂರ್ವೋಂಜಿತ ವ್ಯವಸ್ಥೆ ಎಂದರು.

ಈ ಪತ್ರಿಕೆೊಂಂದು ಸಿದ್ಧಾಂತ ಎಂದು ತಲೆಬರಹದಲ್ಲಿ ಹೇಳಿದ್ದೇನು. ಈ ಹಂತದಲ್ಲೆ ಅದಕ್ಕೆ ವಿವರಣೆ ಕೊಟ್ಟುಬಿಡುತ್ತೇನೆ. ಇದೊಂದು ಎಡಪಂಥೀಯ ಪತ್ರಿಕೆ. ಅಂದರೆ ಕಮ್ಯುನಿಸ್ಟ್ ಸಿದ್ಧಾಂತ ಎಂದಲ್ಲ. ಗಾಂಧಿ, ಲೋಹಿಯ, ಅಂಬೇಡ್ಕ್ ಸಿದ್ಧಾಂತಗಳಿಂದ ಪ್ರೇರಿತವಾದ ಧೋರಣೆ. ಇವರೆಲ್ಲರ ಸಿದ್ಧಾಂತಗಳನ್ನೊಳಗೊಂಡ ಸಮಾಜವಾದ. ಗಾಂಧೀಜಿ ಒಂದು ಕಡೆ ತಮ್ಮ ಸಮಾಜವಾದದ ವಿವರಣೆ ಕೊಡುತ್ತಾರೆ. ಹೇಗೆಂದರೆ ‘‘ಸಮಾಜವಾದಿ ಹಾಗೂ ಸಮತಾವಾದದೊಳಷ್ಟೇ ಬಂಡವಾಳಶಾಹಿಯನ್ನು ಸಂಪೂರ್ಣವಾಗಿ ಅಲ್ಲದಿದ್ದರೂ ಬಹುಮಟ್ಟಿಗೆ ಕೊನೆಗೊಳಿಸುವುದು ನನ್ನ ಉತ್ಕಟೇಚ್ಛೆ. ಆದರೆ ನಮ್ಮ ದಾರಿ ಬೇರೆ, ಭಾಷೆ ಬೇರೆ. ಭಾರತದಲ್ಲಿ ನಾನು ಕಂಡ ಸಮಾಜವಾದಿಗಳಿಗಿಂತ, ಸಮತಾವಾದಿಗಳಿಗಿಂತ- ಅದರ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಲೇ- ನಾನೊಬ್ಬ ಸಮಾಜವಾದಿ’’. ಇದು ಆಂದೋಲನ ಅ.. ‘ಸಮಾನತೆ’. ಇನ್ನು ಜಾತಿ ವ್ಯವಸ್ಥೆ. ಕೋಟಿ ಜಾತಿ ವಿರೋಧಿ. ಪತ್ರಿಕೆಯಲ್ಲಿ ಜಾತಿ ವಿರೋಧಿ ಸುದ್ದಿಗಳಿಗೆ ಪ್ರಥಮ ಸ್ಥಾನ. ಬೆಂಗಳೂರು, ಮೈಸೂರಿನಲ್ಲಿ ನಡೆದ ವೀರಶೈವ ಜಗದ್ಗುರುಗಳ ಸಮ್ಮೇಳನ, ಮೈಸೂರಿನಲ್ಲಿ ನಡೆದ ಬ್ರಾಹ್ಮಣ, ಗೌಡರ ಸಮ್ಮೇಳನಗಳನ್ನು ಖಂಡತುಂಡವಾಗಿ ವಿರೋಧಿಸಿದರು. ಇನ್ನು ಭಾಷೆ, ಕನ್ನಡದ ಕಟ್ಟಾಳು, ಕನ್ನಡ ಅಂದರೆ ಅತ್ಯಂತ ಅಭಿಮಾನ, ಪ್ರೀತಿ, ಮಮತೆ, ಕನ್ನಡಕ್ಕೆ ಕಟಿಬದ್ಧವಾಗಿ ಅಂದೋಲನ ತನ್ನುದ್ದಕ್ಕೂ ದುಡಿದುಕೊಂಡು ಬಂದಿದೆ. ಈಗಲೂ ದುಡಿಯುತ್ತಿದೆ. ಇತ್ತೀಚಿನ ಎನ್‌ಟಿಎಂಎಸ್ ಶಾಲೆ ಹೋರಾಟದ ಉದಾಹರಣೆ ಸಾಕಲ್ಲವೆ? ಆ ಶಾಲೆಯ ಉಳಿವಿಗಾಗಿ ಹೋರಾಟದ ಜೊತೆಗೆ ತಿಂಗಳಿಗೆ ಸುಮಾರು- ೬೦-೭೦ ಸಾವಿರ ರೂ.ಗಳನ್ನು ಈಗಲೂ ಆಂದೋಲನ ಭರಿಸುತ್ತಿದೆ. ಕನ್ನಡ ನಿಷ್ಠೆ ಎಷ್ಟಿತ್ತು ಎಂದರೆ ನಮ್ಮ ಎಲ್ಲ ಚಳವಳಿಗಳಲ್ಲಿ ಸಕ್ರಯವಾಗಿ ಪತ್ರಿಕೆ ನಡೆಸುವ ಕಾರಣಕ್ಕೆ ಭಾಗವಹಿಸುತ್ತಿರಲ್ಲಿವೆಂದರೂ ಗೋಕಾಕ್ ಚಳವಳಿಯಲ್ಲಿ ಕೋಟಿಯ ಪಾತ್ರ ಚಿರಸ್ಮರಣೀಯ. ಜೀವದ ಹಂಗು ತೊರೆದು ಕಣಕ್ಕಿಳಿದರು- ಆಂದೋಲನದ ಭಾಷೆ ಸಿದ್ಧಾಂತ- ಇನ್ನೂ ಸದಾ ದಲಿತರ ಬೆಂಗಾವಲಿಗೆ ನಿಲ್ಲುತ್ತಿದ್ದ ಆಂದೋಲನ. ಇದಕ್ಕೆ ಉದಾಹರಣೆ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ನಡೆದ ಕೋಮುಗಲಭೆ. ಈ ಪ್ರಕರಣ ಸಂಬಂಧ ಬೆನ್ನುಹತ್ತಿದ್ದ ಲಿಂಗಾಯತ ಯುವಕರಿಂದ ಕೋಟಿಯನ್ನು ಬಚಾವ್ ಮಾಡಿದ್ದು ನನ್ನ, ರಾಮದಾಸರ ಸಾಹಸ ಇನ್ನೂ ನೆನಪಿನಲ್ಲಿದೆ. ದೀನ- ದಲಿತರ, ರೈತರ, ಅಲ್ಪಸಂಖ್ಯಾತರು, … ಸುದ್ದಿಗಳಿಗೆ ಆಂದೋಲನ ಮುಖಪುಟದಲ್ಲಿ ಪ್ರಥಮ ಸ್ಥಾನ- ಈಗಲೂ ಕೊಡುತ್ತದೆ.ಪತ್ರಿಕೋದ್ಯಮವ್ನ ದೇಶದ ನಾಲ್ಕನೇ ಆಯಾಮ ಎಂದು ಕರೆದು ಬಹುದೊಡ್ಡ ಜವಾಬ್ದಾರಿಯನ್ನು ಹೊರಿಸಿದೆ ಸಮಾಜ. ಇದರಲ್ಲಿ ಸತ್ಯ- ಪ್ರಾಮಾಣಿಕತೆ- ಸಮಾಜದ ಆಗುಹೋಗುಗಳಿಗೆ, ಏರುಪೇರುಗಳಿಗೆ- ಅತ್ಯಂತ ಪರಿಷ್ಕರಣೆಗೊಂಡ ಸುದ್ದಿಮೂಲಗಳು- ಪ್ರಕಟಣೆಯ ಹೊಣೆ ನಿಖರತೆಯನ್ನು ಕೇಳುತ್ತವೆ. ಡಾ.ರಾಮಮನೋಹರ ಲೋಹಿಯ ಸತ್ಯದ ಬಗ್ಗೆ ಮುಂದಿನಂತೆ ಉದ್ಗಾರ ಎತ್ತಿದ್ದಾರೆ. ‘‘ ಸತ್ಯ ಗೊತ್ತಾಗುವುದು ಒಂದು ಮಗ್ಗುಲಿನಿಂದ ಅಥವಾ ಒಂದು ಕೋನದಿಂದ. ಹಾಗೆಂದ ಮಾತ್ರಕ್ಕೆ ಸತ್ಯ ಆಂಶಿಕವಾದುದೆಂದು ತಿಳಿಯಲಾಗುದು… ಸತ್ಯವು ಪೂರ್ಣವಾಗಿರುತ್ತದೆ. ಇಲ್ಲದಿದ್ದರೆ ಇಲ್ಲ’’. ಈ ನಡಾವಳಿ ಲೋಹಿಯಾ ಸಂಪಾದಕತ್ವದನಲ್ಲಿ ಪ್ರತಿಪಾದಿತವಾಗಿದೆ. ಆಂದೋಲನ ಈ ನಿಟ್ಟಿನಲ್ಲಿ ತನ್ನ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ನನ್ನ ಗಮನಕ್ಕೆ ಬಂದಿದೆ. ಆಂದೋಲನ ವಾರಪತ್ರಿಕೆಯಲ್ಲಿ ಈ ಪ್ರಯತ್ನ ಸಫಲತೆ ಕಂಡಿತು. ಆದರೆ, ದಿನಪತ್ರಿಕೆಯಾಗಿ ಈ ದಾರಿ ತುಳಿಯುವುದು ಸುಲಭವಲ್ಲ ಅನಿಸುತ್ತದೆ. ಆದರೂ ಕೋಟಿಯ ಪ್ರಯತ್ನ ಮತ್ರ ಸದಾ ಎಚ್ಚರದಲ್ಲೇ ಹೆಜೆಜ ಹಾಕಿದ್ದು ಶ್ಲಾಘನೀಯ.

ಈಗ ಕೆಂಪು ಶಾಯಿಯಲ್ಲಿ ಪ್ರಕಟವಾಗುವ ‘ಆಂದೋಲನ’ ನನ್ನಲ್ಲಿ ಮುದ್ರಣವಾಗುವಾಗಲೂ ಇದೇ ರೀತಿ ಅಚ್ಚಾಗುತ್ತಿತ್ತು. ಶ್ರೀ ಜಯಪ್ರಕಾಶ್ ನಾರಾಯಣ್ ತಮ್ಮ ಆಂದೋಲನಕ್ಕೆ ಮುಂಚೆ ಬೆಂಗಳೂರಿಗೆ ಬಂದಾಗ ಕೋಟಿ ಆಂದೋಲನ ವಾರಪತ್ರಿಕೆ  ವಿಶೇಷ ಸಂಚಿಕೆ ತಂದರು. ನಾವೆಲ್ಲರೂ ಅದನ್ನು ಬೆಂಗಳೂರಿನ ಸಭೆಯಲ್ಲಿ ಮಾರಿದೆವು. ಒಟ್ಟು ಹಣ ಸಂಗ್ರಹವಾದದು ೫,೩೨೧ ರೂ.ಗಳು ಕೋಟಿ ಅಷ್ಟು ಹಣವನ್ನು ಅವರ ಬೊಗಸೆ ಕೈನಲ್ಲಿ ನನ್ನ ಬೊಗಸೆಗೆ ಹಾಕಿದ್ದು ಇನ್ನೂ ನೆನಪಿದೆ. ಅಲ್ಲದೆ ‘‘ಸಾರ್, ನಾನು ನಿಮ್ಮ ಶ್ರಮಕ್ಕೆ ತಕ್ಕದಾಗಿ ಪ್ರತಿಕ್ರಿಯಿಸಲಿಲ್ಲ. ನಿಮಗೆ ತುಂಬಾ ತೊಂದರೆ ಕೊಟ್ಟೆ- ಇನ್ನು ನಾನು ಪತ್ರಿಕೆಗೆ ಬೇರೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕೆಂದಿದ್ದೇನೆ- ಅದಕ್ಕೆ ನಿಮ್ಮ ಸಹಾಯ ಬೇಕೆಂದರು.
ಅಗ ಶ್ರೀ ವಿ.ಎಚ್.ಗೌಡರು, ವಕೀಲರು ನನ್ನಲ್ಲಿ ಅವರ ಮಾಸಿಕ ‘ಸಮನ್ವಯ’ ಅಚ್ಚು ಹಾಕಿಸುತ್ತಿದ್ದರು. ಅಷ್ಟರಲ್ಲಿ ನನ್ನ ಮುದ್ರಣಾಲಯ ಜೆ.ಪಿ.ಚಳವಳಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಇವೆಲ್ಲವನ್ನು ತೂಗಿಸಿಕೊಂಡು ಹೋಗುವ ಸ್ಥಿತಿಯಲ್ಲಿರಲಿಲ್ಲ. ಕೋಟಿ ಮತ್ತು ವಿ.ಎಚ್.ಗೌಡರಲ್ಲಿ ಒಪ್ಪಂದವಾಗಿ ಗೌಡರು ಪ್ರೆಸ್ ಹಾಕುವುದು ಕೋಟಿ ಅವರ ‘ಸಮನ್ವಯ’ ಪ್ರಿಂಟ್ ಮಾಡಿಕೊಡುವುದು ಹಾಗೆ ಕೋಟಿ ತಮ್ಮ ಪತ್ರಿಕೆಯನ್ನೂ ನಡೆಸುವುದು. ಆರ್ಥಿಕವಾಗಿ ಕೊಡುಕೊಳ್ಳುವುದು ಏನೊಂದೂ ಇರುವುದಿಲ್ಲ ಎಂದಾಯಿತು. ಆ ಕಾಲದಲ್ಲಿ ಆಂದೋಲನಕ್ಕೆ ಬಹಳ ಕಾಲ ಬೆನ್ನೆಲುಬಾಗಿ ನಿಂತದ್ದು ಶ್ರೀ ಹರೀಶ.
ಹೀಗೆ ಸಂಕಷ್ಟದಲ್ಲಿ ದಿನಪತ್ರಿಕೆಯಾಗಿ ಪರಿವರ್ತನೆಗೊಂಡ ಆಂದೋಲನ ಶ್ರೀ ಎಸ್.ಆರ್.ಬೊಮ್ಮಾಯಿಯವರು ಮುಖ್ಯಮಂತ್ರಿಯಾದಾಗ ಅಲ್ಪಸ್ವಲ್ಪ ಆರ್ಥಿಕ ಸ್ವಾಸ್ಥತ್ಯೃ ಕಂಡಿತು. ಹೀಗೇ ಮುಂದುವರಿದು ಇವತ್ತು ಜನಮಾನಸದಲ್ಲಿ ಪತ್ರಿಕೆ ತನ್ನ ಪ್ರೀತಿಯ ಸ್ಥಾನವನ್ನು ಕಂಡುಕೊಂಡಿದೆ.

ʼಆಂದೋಲನʼ  ಪಟ್ಟಪಾಡು ಅಷ್ಟಿಷ್ಟಲ್ಲ ಹೊತ್ತು ಹೊತ್ತಿಗೆ ಊಟ ಇರುತ್ತಿರಲಿಲ್ಲ. ಪತ್ರಿಕೆಯನ್ನು ಬರೆದು ತುಂಬಿಸುವ ಕೆಲಸ, ಅಚ್ಚಾದ ಮೇಲೆ ಅದನ್ನು ಜಿಲ್ಲೆಯ ಎಲ್ಲ ಕಡೆಯೂ ರವಾನಿಸುವ- ಪತ್ರಿಕೆ ರಾತ್ರಿೆುಂಲ್ಲ ಎದ್ದಿದ್ದು, ಬೆಳಗಿನ ಜಾವದಲ್ಲಿ ಮಲಗುತ್ತಿದ್ದುದು ಎಲ್ಲರಿಗೂ ಗೊತ್ತು. ನನಗೆ ದ.ರಾ.ಬೇಂದ್ರೆಯವರ ಪದ್ಯ ನೆನಪಾಗುತ್ತದೆ.

ನಿನ್ನಂಗೆ ಹಾಡಾಕೆ, ನಿನ್ನಂಗೆ ಬರಯಾಕೆ
ಪಡೆದು ಬಂದಿರಬೇಕೊ ಗುರುದೇವ
ಹಕ್ಕಾಗಿ ಆಡಿಗೆ ಚುಕ್ಕಾಗಿ ಮೂಡಿದಿ ದಿಕ್ಕೆಲ್ಲ ಕೂಡಿದಿ ಗುರುದೇವ
ಈಗ ಆಂದೋಲನ ರಾಜ್ಯ ಮಟ್ಟದ ಜೊತೆಗೆ ಸಡ್ಡು ಹೊಡೆದು ಬೆಳೆದು ನಿಂತಿದೆ- ಸಂತೋಷವಾಗುತ್ತದೆ.

ಧಾರವಾಡದಿಂದ ಬರಿಗೈಯಲ್ಲಿ ಬಂದ ಆಂದೋಲನ ಇತ್ತೀಚಿನ ವರ್ಷಗಳಲ್ಲಿ ಕೊಡುಗೈ ದೊರೆಯಾಗಿ ಬೆಳೆಯಿತು. ಆಂದೋಲನದ ಅನ್ವರ್ಥನಾಮ ಕೋಟಿೆುೀಂ ಆದದ್ದು ಅದರ ದುಡಿಮೆಯ ಫಲ. ಜನತೆ ಆಂದೋಲನವನ್ನು ಒಪ್ಪಿಕೊಂಡು ಈಗಲೂ ಅಪ್ಪಿಕೊಂಡಿದ್ದಾರೆ. ಜಿಲ್ಲೆಯ ಬಹಳಷ್ಟು ಸಂಘ- ಸಂಸ್ಥೆಗಳು ಸಂಘಟನೆಗಳೂ, ವ್ಯಕ್ತಿಗಳು, ಸ್ನೇಹಿತರು, ಇನ್ನೊಬ್ಬರ, ಮತ್ತೊಬ್ಬರ ಕಷ್ಟಗಳಿಗೆ ಆತುಕೊಳ್ಳುವ ಮನೋಧರ್ಮ ಕೋಟಿಯನು ಜನಾನುರಾಗಿಯನ್ನಾಗಿ ಮಾಡಿದ್ದು ಚರಿತ್ರೆ.

Tags:
ಇನ್ನಷ್ಟು ಸುದ್ದಿಗಳನ್ನು ಓದಿ
ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು ವಿಷಾದನೀಯ ಸಂಗತಿ. ವೈಚಾರಿಕತೆ ಹಾಗೂ ವೈಜ್ಞಾನಿಕ ವಿದ್ಯೆ ಪ್ರತಿಯೊಬ್ಬರಿಗೂ ಸಿಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇಯ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳವಳ್ಳಿಯಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066 ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ರಾಷ್ಟ್ರ ಪತಿಗಳು ಉದ್ಘಾಟನೆ ನೆರವೇರಿಸಿದ್ದಾರೆ. ಈ ಜಯಂತಿ ಮಹೋತ್ಸವ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯುತ್ತಿದ್ದು ಬಹಳ ದಿರ್ಘಕಾಲದಿಂದಲೂ ನಡೆಯುತ್ತಾ ಬಂದಿದೆ. ಮುಂದಿನ ವರ್ಷ ಗುಂಡ್ಲುಪೇಟೆಯಲ್ಲಿ ನಡೆಯುವ ಬಗ್ಗೆ ತಿರ್ಮಾನ ಮಾಡಲಾಗಿದ್ದು ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ಈ ಕಾರ್ಯಕ್ರಮ ಆಚರಣೆ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು. ‌ ನಮ್ಮ ಸಮಾಜದಲ್ಲಿ ಅನೇಕ ಜಾತಿಗಳು ಇರುವುದರಿಂದ ಸಮಾಜದಲ್ಲಿ ಅಸಮಾನತೆ ಇದೆ. ಜಾತಿ ವ್ಯವಸ್ಥೆಯಿಂದ ಶಾಂತಿ ಮೂಡಿಬರುವುದಿಲ್ಲ. ಈ ವಿಷಯವನ್ನು ಈ ಹಿಂದೆ ದಾರ್ಶನಿಕರು, ಬಸವವಾದಿ ಶರಣರು ಹೇಳುತ್ತಾ ಬಂದಿದ್ದಾರೆ. ಕುವೆಂಪು ಅವರು ಮನುಷ್ಯ ಸಮಾಜ ನಿರ್ಮಾಣ ಆಗಬೇಕು ಎಂದು ಹೇಳಿದ್ದರು. ಸಮಾಜದಲ್ಲಿ ಜನರ ನಡುವೆ ಪ್ರೀತಿ ಇರಬೇಕು. ಇದೇ ನಮ್ಮ ಸಂಸ್ಕೃತಿ ಆಗಿದೆ. ಅನೇಕ ಸಾಧು ಮುನಿಗಳು, ಖುಷಿಗಳು ಮನುಷ್ಯ ಮನುಷ್ಯ ನಡುವೆ ಪ್ರೀತಿಯಿಂದ ಇರಬೇಕು ಎಂದು ಹೇಳಿದ್ದಾರೆ‌. ದ್ವೇಷ ಮಾಡಬಾರದು. ಜಾತಿ ಹೋಗಬೇಕಾದರೆ ಸಾಮಾಜಿಕ ಹಾಗೂ ಆರ್ಥಿಕ ಶಕ್ತಿ ಬರಬೇಕು ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಚಲನೆ ಸಿಗುವುದು ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿ ಬಂದರೆ ಮಾತ್ರ ಸಿಗುತ್ತದೆ ಎಂದು ಅವರು ಮುಖ್ಯಮಂತ್ರಿಗಳು ತಿಳಿಸಿದರು. ಜಯಂತಿಗಳನ್ನು ಆಚರಣೆ ಮಾಡುತ್ತಿರುವುದು ಎಲ್ಲಾ ಒಗ್ಗೂಡಿ ಪ್ರೀತಿಯಿಂದ ಇರಬೇಕು ಎಂಬ ಉದ್ದೇಶದಿಂದ ಮಾತ್ರ ಎಂದು ಅವರು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಮಾತನಾಡಿ, ಮಳವಳ್ಳಿಯಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066 ನೇಮ ಜಯಂತಿ ಮಹೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜಯಂತೋತ್ಸವ ನಡೆದಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಹೆಚ್.ಸಿ.ಮಹಾದೇವಪ್ಪ ಮಾತನಾಡಿ, ಸುತ್ತೂರು ಶ್ರೀ ಮಠ ಪ್ರತಿವರ್ಷ ಜಯಂತೋತ್ಸವ ಆಚರಣೆ ಮಾಡುತ್ತಿದೆ. ಶಿವಯೋಗಿಗಳು ನಾಡಿನ ಜನರನ್ನ ಒಗ್ಗೂಡಿಸಿ ಸೋದರತ್ವ ಬೆಳೆಸಿದವರು. ಮನುಷ್ಯ ಹುಟ್ಟಿದ ಮೇಲೆ ಧರ್ಮ, ಧರ್ಮವನ್ನು ಸರಿಯಾಗಿ ಅರ್ಥೈಹಿಸಿ ನಾವೆಲ್ಲರೂ ಒಂದೇ ರೀತಿ ಅನ್ನೋ ಮನೋಭಾವ ಮೂಡಿಸಿರುವುದೇ ಗುರಿ.ಶ್ರೀ ಮಠಕ್ಕೆ ಎಲ್ಲಾ ಪಕ್ಷ, ಎಲ್ಲಾ ಧರ್ಮೀಯರು ಬರುತ್ತಾರೆ. ಪ್ರಜಾಪ್ರಭುತ್ವ ನಡವಳಿಕೆ ಬಗ್ಗೆ ನಂಬಿಕೆ ಇದೆ. ಬಸವಣ್ಣ ಯಾರ ವಿರುದ್ಧ ಸೇಡುತೀರಿಸಿಕೊಳ್ಳಲ್ಲಿಲ್ಲ. ಡಾ ಬಿ.ಆರ್.ಅಂಬೇಡ್ಕರ್ ಬಾಲ್ಯದಲ್ಲೇ ನೋವು ಅನುಭವಿಸಿದರು. ಆದರೂ ಯಾರ ಬಗ್ಗೆಯೂ ದ್ವೇಷ ಮಾಡಿಲ್ಲ. ಶ್ರೀಗಳು ಮನುಷ್ಯರ ನಡುವೆ ಸೋದರತ್ವ ಬಿತ್ತುವ ಕೆಲಸ ಮಾಡಿದ್ದಾರೆ. ಜಯಂತೋತ್ಸವದಲ್ಲಿ ಎಲ್ಲಾ ಧರ್ಮೀಯರು ಸೇರಿದ್ದಾರೆ ಇದೇ ಒಗ್ಗೂಡೂವಿಕೆಯಾಗಿದ್ದು ಸುತ್ತೂರು ಶ್ರೀ ಮಠ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಅವರು ತಿಳಿಸಿದರು‌.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!