ಮೈಸೂರು: ಆಂದೋಲನ ತನ್ನ ೫೦ ವರ್ಷದ ಸಾರ್ಥಕ ಪಯಾಣದಲ್ಲಿ ಜನಪರ ಕಾಳಜಿಗಾಗಿ ದುಡಿದಿದೆ. ಧ್ವನಿ ಇಲ್ಲದವರ ಧ್ವನಿಯಾಗಿ ಹಿಂದುಳಿದ ವರ್ಗಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವ ಮೂಲಕ ಅವರ ಅಭಿವೃದ್ಧಿಗಾಗಿ ದುಡಿದ ಪತ್ರಿಕೆ ಎಂದರೆ ಅದು ಆಂದೋಲನ. ನಮ್ಮ ಕ್ಷೇತ್ರದಲ್ಲಿಯೂ ಹೆಚ್ಚಾಗಿ ಆದಿವಾಸಿಗಳು ವಾಸಿಸುತ್ತಿದ್ದು, ಅವರ ವಾಸಿಸುವ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಅವರ ಸಮಸ್ಯೆಗಳಿಗೂ ಸ್ಪಂದಿಸುತ್ತಾ ಬಂದಿದೆ ಆಂದೋಲನ ಪತ್ರಿಕೆ. ಇಂದು ಒಂದು ಪ್ರಾದೇಶಿಕ ಪತ್ರಿಕೆಯಾಗಿ ಆಂದೋಲನ ೫೦ ನೇ ವರ್ಷಕ್ಕೆ ಕಾಲಿಟ್ಟಿರುವುದು ಸಂತಸದ ವಿಚಾರ.
-ಅನಿಲ್ ಚಿಕ್ಕಮಾದು, ಶಾಸಕ, ಎಚ್.ಡಿ.ಕೋಟೆ