Mysore
28
few clouds

Social Media

ಸೋಮವಾರ, 07 ಏಪ್ರಿಲ 2025
Light
Dark

ತ್ರಿವೇಣಿ ಸಂಗಮದಲ್ಲಿ ‘ಆಂದೋಲನ’ ಮಾರ್ದನಿ

ಜನಮಾನಸದಲ್ಲಿ ಮುದ್ರೆಯೊತ್ತಿದ ‘ಪತ್ರಿಕೆ’ಗೆ ಗಣ್ಯರ ಅಭಿಮಾನದ ಹಾರೈಕೆ

ತಿ.ನರಸೀಪುರ: ೫೦ ವರ್ಷಗಳಿಂದ ಪತ್ರಿಕಾರಂಗದಲ್ಲಿ ತನ್ನದೇ ಛಾಪು ಮೂಡಿಸಿ ಸಂವಿಧಾನದ ಆಶಯಗಳಿಗೆ ಹೆಗಲಾಗಿ ಮುಂದಡಿ ಇಡುತ್ತಿರುವ ‘ಆಂದೋಲನ’ ದಿನಪತ್ರಿಕೆಯ ಹೆಜ್ಜೆಗಳ ನೆನಪಿನ ‘ಹಾಡು-ಪಾಡು’ ತ್ರಿವೇಣಿ ಸಂಗಮದ ಭೂಮಿಯು ಮಡಿಲಲ್ಲಿ ಮಅರ್ದನಿಸಿತ್ತು.

‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ಪರಿಶ್ರಮ, ಅನುಭವಿಸಿದ ಸಂಕಷ್ಟ, ಅದರ ನಡುವೆಯೂ ಪತ್ರಿಕಾಧರ್ಮಕ್ಕೆ ಚ್ಯುತಿಯಾಗದಂತೆ ಪ್ರಾಮಾಣಿಕತೆಯಿಂದಲೇ ಈ ಕ್ಷೇತ್ರದಲ್ಲಿ ಎತ್ತರಕ್ಕೇರಿದ ಬಗೆಯನ್ನು ಗಣ್ಯರು, ಹಿತೈಷಿಗಳು, ಸ್ನೇಹಿತರು, ಓದುಗರು ಸಹೃದಯದ ಮಾತುಗಳಲ್ಲಿ ಎಳೆಎಳೆಯಾಗಿಬಿಡಿಸಿಟ್ಟರು. ಅದಕ್ಕೆ ತಿ.ನರಸೀಪುರ ತಾಲ್ಲೂಕು ರುಜುಹಾಕಿದಂತಹ ವಾತಾವರಣ ಕಂಡುಬಂತು.
ಪಟ್ಟಣದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಆಂದೋಲನ ೫೦- ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ಗಣ್ಯರು ‘ಆಂದೋಲನ’ದೊಂದಿಗೆ ಒಡನಾಟ, ಅದರ ಸುದ್ದಿಗಳ ಪ್ರಭಾವ ನೆನಪುಗಳನ್ನು ಹಂಚಿಕೊಂಡರು.
ಸಸಿಗೆ ನೀರೆರೆಯುವ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು, ‘ಆಂದೋಲನ’ ದಿನಪತ್ರಿಕೆಯು ಸಾಮಾಜಿಕವಾಗಿ, ಆರ್ಥಿಕವಾಗಿ ದುರ್ಬಲರಾಗಿರುವವರ ಪರವಾಗಿ ಸುದ್ದಿ, ಲೇಖನ ಪ್ರಕಟಿಸುವ ಮೂಲಕ ಸಮಾಜವಾದವನ್ನು ಪ್ರತಿಪಾದಿಸುತ್ತಿದೆ. ರಾಜಶೇಖರ ಕೋಟಿ ಅವರು ಲೋಹಿಯಾ ಅವರ ಚಿಂತನೆಗಳಿಂದ ಆಕರ್ಷಿತರಾಗಿದ್ದರು. ಅವರು ಧಾರವಾಡದಿಂದ ಮೈಸೂರಿಗೆ ಬಂದು, ಶೋಷಿತರ ಪರವಾಗಿ ಹೋರಾಡುವ ನಿಟ್ಟಿನಲ್ಲಿ ‘ಆಂದೋಲನ’ ಕಟ್ಟಿದರು. ಅವರಿಗೆ ಮೈಸೂರಿನಲ್ಲಿ ದೇವನೂರ ಮಹಾದೇವ ಅವರು ಸೇರಿದಂತೆ ಹಲವಾರು ಸಮಾಜವಾದಿ ಗೆಳೆಯರು ‘ಆಂದೋಲನ’ ಸಂಕಷ್ಟ ಸಹಾಯ ನೀಡಿದ್ದು, ಅದನ್ನು ಕೋಟಿ ಅವರು ‘ಪತ್ರಿಕೆ’ಯನ್ನು ಉಳಿಸುವ ಮೂಲಕ ಸ್ಮರಣೀಯವಾಗಿಸಿದರು ಎಂದರು.
ದೃಶ್ಯ ಮಾಧ್ಯಮಗಳ ಪ್ರವೇಶದಿಂದ ಮುದ್ರಣ ಮಾಧ್ಯಮ ಹಿನ್ನಡೆ ಅನುಭವಿಸಲಿದೆ ಎನ್ನಲಾಗಿತ್ತು. ಆದರೆ, ‘ಆಂದೋಲನ’ದ ಓದುಗರ ಸಂಖ್ಯೆಯಲ್ಲಿ ಹೆಚ್ಚಳವೇ ಆಗಿದೆ. ಅದಕ್ಕೆ ರಾಜಶೇಖರ ಕೋಟಿ ಅವರ ಬದ್ಧತೆೆಯೇ ಕಾರಣ ಎಂದು ಪ್ರಸಾದ್ ಹೇಳಿದರು.
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಾತನಾಡಿ, ‘ಆಂದೋಲನ’ ಪತ್ರಿಕೆಯಲ್ಲಿ ಸ್ಥಳೀಯ ಸುದ್ದಿಗಳು ಮಾತ್ರವಲ್ಲದೆ, ದೇಶ- ವಿದೇಶದ ಸುದ್ದಿಗಳು ಕೂಡ ಪ್ರಕಟವಾಗುತ್ತವೆ. ಹಾಗಾಗಿ ‘ಆಂದೋಲನ’ ಸಚ್ಚಾರಿತ್ರತ್ಯೃವುಳ್ಳ ಏಕೈಕ ಪ್ರಾದೇಶಿಕ ಪತ್ರಿಕೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ಅಶ್ವಿನ್‌ಕುಮಾರ್ ಅವರು, ಕೊಶ್ಚನ್ ಮಾರ್ಕ್ ಇಲ್ಲದ ಸುದ್ದಿಗಳನ್ನು ಪ್ರಕಟಿಸುವ ಏಕೈಕ ಪತ್ರಿಕೆ ಎಂದರೆ ಅದು ‘ಆಂದೋಲನ’ ಮಾತ್ರ. ಯಾವುದೇ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಪ್ರಕಟಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಶಾಸಕ ಡಾ.ಎನ್.ಎಲ್.ಭಾರತೀಶಂಕರ್ ಅವರು, ‘ಆಂದೋಲನ’ದಲ್ಲಿ ಅಧಿಕೃತ ಸುದ್ದಿಗಳು ಮಾತ್ರವೇ ಪ್ರಟಕವಾಗುವುದನ್ನು ಗಮನಿಸಿದ್ದೇನೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಪತ್ರಿಕಾರಂಗ ಬದ್ಧತೆಯಿಂದ ಕೆಲಸ ಮಾಡಬೇಕಿದೆ ಎಂದರು.

ಮೈಸೂರಿನ ಕೆ.ಆರ್.ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಬಿ.ಎನ್.ರವೀಶ್ ತಿ.ನರಸೀಪುರ ತಾಲ್ಲೂಕು 50 ವರ್ಷಗಳ ಮುನ್ನೋಟ ವಿಷುಂ ಕುರಿತು ಹಕ್ಕೊತ್ತಾಯ ಮಂಡಿಸಿದರು.

ಇದೇ ಸಂದರ್ಭದಲ್ಲಿ ಕೃಷಿ ಸಾಧಕ ಮಾದರಹಳ್ಳಿ ಎಂ.ಕೆ.ಶಂಕರ್‌ಗುರು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ವೀಣಾ ಕುರುಬೂರು ಅವರನ್ನು ಸನ್ಮಾನಿಸಲಾಯಿತು. ‘ಆಂದೋಲನ’ ಪತ್ರಿಕೆಯ ತಿ.ನರಸೀಪುರ ವರದಿಗಾರ ಎಂ.ನಾರಾಯಣ ಹಾಗೂ ತಾಲ್ಲೂಕು ಪ್ರತಿನಿಧಿಗಳನ್ನೂ ಗೌರವಿಸಲಾಯಿತು. ಪಟ್ಟಣದ ಪಿಆರ್‌ಎಂ ಪ್ರೌಢಶಾಲೆ ಶಿಕ್ಷಕ ಎಂ.ಮಹದೇವ ನಿರೂಪಿಸಿದರು.


ಅಧಿಕಾರ, ಅಂತಸ್ತು, ಜಾತೀಯತೆ ಪ್ರಭಾವಕ್ಕೆ ಒಳಗಾಗದ ಕೋಟಿ ಅವರು ‘ಆಂದೋಲನ’ವನ್ನು ಬೆಳೆಸಿದರು. ಅವರು ಈ ೫೦ ವರ್ಷಗಳಲ್ಲಿ ಕುಗ್ರಾಮಕ್ಕೂ ಪತ್ರಿಕೆಯನ್ನು ತಲುಪಿಸುವಲ್ಲಿ ಬಹಳ ಪರಿಶ್ರಮಪಟ್ಟಿದ್ದರು. ನನ್ನ ಅವರ ನಡುವೆ ಸುಮಾರು ೪೮ ವರ್ಷಗಳಿಂದ ಆತ್ಮೀಯ ಸಂಬಂಧ ಇತ್ತು. ನಾನು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ ಅವರು ಬಹಳ ನೊಂದುಕೊಂಡರು. ಆದರೆ, ಅಂದಿನ ಪರಿಸ್ಥಿತಿಯಲ್ಲಿ ನನಗೆ ಪಕ್ಷಾಂತರ ಅನಿವಾರ್ಯವಾಗಿತ್ತು
-ವಿ.ಶ್ರೀನಿವಾಸ ಪ್ರಸಾದ್, ಸಂಸದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ