Mysore
17
scattered clouds

Social Media

ಸೋಮವಾರ, 12 ಜನವರಿ 2026
Light
Dark

ಟಿಪ್ಪು ನಿಜಕನಸುಗಳು ನಾಟಕ : ಕೃತಿ, ನಾಟಕ ಪ್ರದರ್ಶನ ತಡೆಗೆ ಆಗ್ರಹ

ಮೈಸೂರು: ಟಿಪ್ಪು ನಿಜಕನಸುಗಳು ಹೆಸರಿನಲ್ಲಿ ತನ್ನ ಸುಳ್ಳು ಅಜೆಂಡಾ ಹೇರಲು ಹೊರಟಿರುವ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರನ್ನು ಕೂಡಲೇ ಬಂಧಿಸಿ, ಟಿಪ್ಪು ನಿಜಕನಸುಗಳು ನಾಟಕ ಕೃತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಜತೆಗೆ ನಾಟಕ ಪ್ರದರ್ಶನವನ್ನೂ ತಡೆಹಿಡಿಯಬೇಕು ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಒತ್ತಾಯಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಕ್ಷೇಮ ಕಾಪಾಡುವ ಜತೆಗೆ ಸುಭಿಕ್ಷ ನೆಲೆಸಲು ಸರ್ಕಾರ ಮುಂದಾಗಬೇಕು. ಆದರೆ, ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಲಾಗದ ಬಿಜೆಪಿ ನೆಗಟಿವ್ ರಾಜಕೀಯ ಮಾಡುತ್ತಿದೆ ಎಂದು ದೂರಿದರು.
ಟಿಪ್ಪು ಪತ್ರಿಮೆ ಸ್ಥಾಪನೆ ಹೇಳಿಕೆ ವಿಚಾರವಾಗಿ ಬಜರಂಗದಳದ ಸಕಲೇಶಪುರ ರಘು, ಮೈಸೂರಿನ ಬಿಜೆಪಿ ಮುಖಂಡ ಗಿರಿಧರ್ ಅವರು ತನ್ವೀರ್ ಸೇಠ್ ಅವರನ್ನು ಸಂಹಾರ ಮಾಡಬೇಕು ಎಂದು ಹೇಳಿಕೆ ನೀಡಿರುವುದು ಖಂಡ ನೀಯ. ಇವರಿಬ್ಬರ ವಿರುದ್ಧ ಅಲ್ಲಿನ ಜಿಲ್ಲಾಡಳಿತಗಳು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಮ್ಮ ಪಕ್ಷದ ಶಾಸಕ, ಮಾಜಿ ಸಚಿವರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದರೂ ರಾಜ್ಯ ಕಾಂಗ್ರೆಸ್‌ನ ಯಾವೊಬ್ಬ ನಾಯಕರೂ ತನ್ವೀರ್ ಸೇಠ್ ರಕ್ಷಣೆಗೆ ಮುಂದಾಗದಿರುವುದು ಖಂಡನೀಯ ಎಂದರು.
ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಜಿಲ್ಲಾಧ್ಯಕ್ಷ ರಫತ್ ಖಾನ್, ಜಿಲ್ಲಾ ಉಪಾಧ್ಯಕ್ಷ ಸ್ವಾಮಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!