Mysore
27
few clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಕಂಪನಿಯಿಂದ ಸ್ಥಳೀಯ ನೌಕರರನ್ನು ವಜಾಗೊಳಿಸುವ ಸಂಚು ಖಂಡಿಸಿ ಪ್ರತಿಭಟನೆ

ಹನೂರು : ಬಂಡಳ್ಳಿ ಗ್ರಾಮದ ಸೋಲಾರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳೀಯ ನೌಕರರನ್ನು ವಜಾಗೊಳಿಸಲು ಸಂಚು ನಡೆಸುತ್ತಿರುವುದನ್ನು ಖಂಡಿಸಿ ಕರುನಾಡ ಸೇನೆ ಸದಸ್ಯರುಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಕರುನಾಡು ವಿಜಯಸೇನೆ ಜಿಲ್ಲಾಧ್ಯಕ್ಷರಾದ ನವೀನ್ ಕುಮಾರ್ ರವರ ಮಾತನಾಡಿ ನಮ್ಮ ಬಂಡಳ್ಳಿ ಗ್ರಾಮದಲ್ಲಿರುವ ಸೋಲಾರ್ ಕಂಪೆನಿಯಲ್ಲಿ ಮೊದಲಿಗೆ ನಮ್ಮ ಸ್ಥಳೀಯ ನೌಕರರಿಗೆ ಮೊದಲ ಆದ್ಯತೆ ನೀಡಬೇಕು ವಿಶೇಷವಾಗಿ ನಮ್ಮ ಕನ್ನಡ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಆನಂತರದಲ್ಲಿ ಇತರರಿಗೆ ಅವಕಾಶ ಮಾಡಿಕೊಡಬೇಕೆಂದು ಎಂದು ಸೋಲಾರ್ ಮುಖ್ಯಸ್ಥರಲ್ಲಿ ಮನವಿ ಮಾಡಿದರು.

ಸೋಲಾರ್ ಕಂಪನಿಯ ಮುಖ್ಯಸ್ಥರಾದ ಸಂತೋಷ್ ಮಾತನಾಡಿ ಶೇಕಡ 100ರಷ್ಟು ಕೆಲಸವನ್ನು ಸ್ಥಳೀಯ ನೌಕರರಿಗೆ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಈ ಸಂದರ್ಭದಲ್ಲಿ ಕರುನಾಡ ವಿಜಯ ಸೇನೆಯ ಚಾಮರಾಜನಗರ ಜಿಲ್ಲಾ ಘಟಕದ ಪದಾಧಿಕಾರಿಗಳಾದ
ವಿನೋದ್ ಕುಮಾರ್ ಎಸ್ ,ಸಂಜಯ್ ಮದನ್ ,ಮನೋಜ್ ಪ್ರಮೋದ್ ಹಾಗೂ ಇನ್ನಿತರರು ಭಾಗವಹಿಸಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!