ಗುಂಡ್ಲುಪೇಟೆ : ತಾಲ್ಲೂಕಿನ ರಾಘವಾಪುರ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ನ್ಯಾಯಬೆಲೆ ಅಂಗಡಿಯಲ್ಲಿ ಸರಿಯಾದ ಪಡಿತರ ವಿತರಿಸದ ಕಾರಣ ದೂರಿನ ಆಧಾರದ ಮೇಲೆ ಇಂದು ಸ್ಥಳಕ್ಕೆ ಅಧಿಕಾರಿಗಳಾದ ಭಾರತಿ ಹಾಗೂ ಶಿರಸ್ತೆದಾರ್ ರಮೇಶ್ ಭೇಟಿ ನೀಡಿ ಪರಿಶೀನೆ ನಡೆಸಿದ್ದಾರೆ.
ಗ್ರಾಮದಲ್ಲಿರುವ ಶ್ರೀ ನಂಜುಂಡೇಶ್ವರ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ಕೆಲ ದಿಗಳಿಂದಲೂ ಸರಿಯಾದ ಸಮಯಕ್ಕೆ ಪಡಿತರ ವಿತರಣೆಯಾಗದ ಕಾರಣ ಈ ಸಂಬಂಧ ಗ್ರಾಮದ ನಿವಾಸಿ ದೊರೆಸ್ವಾಮಿಯವರು ದೂರನ್ನು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಇಂದು ಬೆಳಿಗ್ಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ನ್ಯಾಯಬೆಲೆ ಅಂಗಡಿಯಲ್ಲಿದ್ದ ಕಡತಗಳನ್ನು ಪರಿಶೀಲಿಸಿ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕ ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಗ್ರಾಮದಲ್ಲಿ ಸುಮಾರು 2 ಸಾವಿರದಷ್ಟು ಜನಸಂಖ್ಯೆಇದ್ದು, ಒಟ್ಟು 842 ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಗಳನ್ನು ಹೊಂದಾಲಾಗಿದೆ.