Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಿದ್ಯಾರ್ಥಿಗಳ ಓದಿಗೆ ಸಹಾಯಹಸ್ತ ನೀಡುವ ಶಿಕ್ಷಕ

ದಾನಿಗಳ ಮೂಲಕ ನೆರವು ದೊರಕಿಸುವ ವಿದ್ಯಾರ್ಥಿಸ್ನೇಹಿ ಗುರು; ಲೇಖನ ಸಾಮಗ್ರಿ, ಪ್ರವೇಶ ಶುಲ್ಕ, ಲ್ಯಾಪ್‌ಟಾಪ್ ವಿತರಣೆ
ಪ್ರಸಾದ್ ಲಕ್ಕೂರು
ಚಾಮರಾಜನಗರ: ಶಾಲೆಗಳಲ್ಲಿ ಪಾಠ, ಪ್ರವಚನಕ್ಕೆ ಸೀಮಿತರಾದ ಶಿಕ್ಷಕರು, ಬೋಧನೆ ಜೊತೆ ಇತರೆ ವಾಣಿಜ್ಯ ವ್ಯವಹಾರಗಳನ್ನು ನಡೆಸುವ ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಇಂತಹವರ ನಡುವೆ ವಿದ್ಯಾರ್ಥಿಸ್ನೇಹಿಯಾಗಿ ಸವಾಜಮುಖಿ ಕಾರ್ಯಗಳನ್ನು ಕೈಗೊಂಡು ಸಾರ್ಥಕ ಭಾವ ಕಾಣುವಂತಹ ಶಿಕ್ಷಕರು ಸಹ ತೆರೆಮರೆಯಲ್ಲಿದ್ದಾರೆ.

ಇಲ್ಲೊಬ್ಬರು ಬೋಧನೆ, ಕ್ರೀಡಾ ಚಟುವಟಿಕೆಗಳನ್ನು ಹೇಳಿಕೊಡುವ ಜೊತೆಗೆ ಕಳೆದ ೫ ವರ್ಷಗಳಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ದಾನಿಗಳ ಮೂಲಕ ನೆರವು ದೊರಕಿಸುತ್ತ ವಿದ್ಯಾರ್ಥಿಸ್ನೇಹಿ ಗುರುವಾಗಿದ್ದಾರೆ. ಅವರೇ ತಾಲ್ಲೂಕಿನ ಸಿದ್ದಯ್ಯನಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾರಾುಂಣ್.
ಈ ದೈಹಿಕ ಶಿಕ್ಷಣ ಶಿಕ್ಷಕರು ಸುವಾರು ೨೩ ವರ್ಷಗಳಿಂದಸಿದ್ದಯ್ಯನಪುರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಧನ ಸಹಾಯ, ಲೇಖನ ಸಾಮಗ್ರಿ, ಪ್ರವೇಶ ಶುಲ್ಕ, ಲ್ಯಾಪ್‌ಟಾಪ್, ಮೊಬೈಲ್‌ಗಳನ್ನು ಕೊಡಿಸುತ್ತ ಒಂದಷ್ಟು ಸವಾಜಮುಖಿ ಕೆಲಸಗಳನ್ನು ವಾಡುತ್ತಿದ್ದಾರೆ.

ಈ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರಿನ ವಿಜುಂನಗರದ ವಾರುತಿ ಮೆಡಿಕಲ್‌ನ ಮಹೇಂದ್ರ ಮೂಣತ್ ಅವರ ನೆರವಿನಿಂದ ೧೫ ಸಾವಿರ ನೋಟ್‌ಬುಕ್‌ಗಳನ್ನು ಪಡೆದಿದ್ದಾರೆ. ಅವುಗಳನ್ನು ಸಿದ್ದಯ್ಯನಪುರ, ಉತ್ತವಳ್ಳಿ, ಅಟ್ಟುಗೂಳಿಪುರ, ಬೇವಿನತಾಳಪುರ ಸೇರಿದಂತೆ ತಾಲ್ಲೂಕಿನ ಹಲವಾರು ಶಾಲೆಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದ್ದಾರೆ.


ದಾನಿಗಳಿಂದ ಲ್ಯಾಪ್ ಟಾಪ್ ಕೊಡುಗೆ
ಮುಂದಿನ ದಿನಗಳಲ್ಲಿ ಚಾಮರಾಜನಗರ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೋಟ್ ಬುಕ್ ಹಂಚುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಈ ಬಾರಿ ದಾನಿಗಳ ನೆರವಿನಿಂದ ದಿವ್ಯಾ ಎಂಬ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಒಂದು ಲ್ಯಾಪ್‌ಟಾಪ್ ಹಾಗೂ ಸಿದ್ದರಾಜು ಎಂಬ ವಿದ್ಯಾರ್ಥಿ ವಿದ್ಯಾಭ್ಯಾಸಕ್ಕೆ ಒಂದು ಮೊಬೈಲ್ ಹಾಗೂ ಕೆಂಪನಪುರದ ಶೃತಿ ಎಂಬ ವಿದ್ಯಾರ್ಥಿನಿಗೆ ಬಸ್ ಪಾಸ್ ಶುಲ್ಕ ಮತ್ತು ಕಾಲೇಜು ಪ್ರವೇಶಾತಿ ಶುಲ್ಕ ಪಾವತಿಸಲು ೬ ಸಾವಿರ ರೂ. ನೀಡಿದ್ದಾರೆ. ವಿದ್ಯಾರ್ಥಿನಿ ಕಾವ್ಯಳಿಗೆ ೨೨ ಸಾವಿರ ರೂ., ಗಿರಿಜಾಳಿಗೆ ೧೫ ಸಾವಿರ ರೂ. ಹನುಮಂತುಗೆ ೧೧,೫೦೦ ರೂ. ಕಾಲೇಜು ಪ್ರವೇಶಾತಿ ಶುಲ್ಕ ಪಾವತಿಸಿದ್ದಾರೆ. ಸಿದ್ದಯ್ಯನಪುರ ಸರ್ಕಾರಿ ಶಾಲೆಗೆ ೩೦ ಸಾವಿರ ರೂ. ಬೆಲೆಯಲ್ಲಿ ಬಣ್ಣ ಬಳಿಸಿದ್ದಾರೆ.


ವಿದ್ಯಾರ್ಥಿ ಹಾಗೂ ಶಾಲೆ ಸ್ನೇಹಿ ಕೆಲಸಗಳು ಸೇರಿದಂತೆ ಹಲವಾರು ಸವಾಜಮುಖಿ ಕಾರ್ಯಕ್ರಮಗಳನ್ನು ದಾನಿಗಳ ಮುಖಾಂತರ ವಾಡುತ್ತಿದ್ದೇನೆ. ಸರ್ಕಾರಿ ಶಾಲೆಗಳ ಸುಧಾರಣೆಗೆ ಸರ್ವರ ಸಹಕಾರದ ಅಗತ್ಯ ಇದೆ ಎಂಬುದನ್ನು ಅರಿತು ಕೆಲಸ ವಾಡುತ್ತಿದ್ದೇನೆ.
– ನಾರಾಯಣ್, ದೈಹಿಕ ಶಿಕ್ಷಣ ಶಿಕ್ಷಕರು.


ಅಂಕನಶೆಟ್ಟಿಪುರದ ನಾನು ಈ ವರ್ಷ ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪಿುುಂಸಿಗೆ ದಾಖಲಾಗಲು ೨೨ ಸಾವಿರ ರೂ. ಪ್ರವೇಶಾತಿ ಶುಲ್ಕವನ್ನು ಶಿಕ್ಷಕರಾದ ನಾರಾುಂಣ್ ಅವರು ಪಾವತಿಸಿದ್ದಾರೆ. ನನ್ನ ಸಹೋದರ ಅಮಿತ್ ಕೂಡ ಚಾ.ನಗರದ ಪಿಡಬ್ಲೂತ್ಯೃಡಿ ಶಾಲೆಗೆ ೭ನೇ ತರಗತಿಗೆ ದಾಖಲಾಗಲು ನೆರವಾಗಿ ಲೇಖನ ಸಾಮಗ್ರಿ, ಬ್ಯಾಗ್ ಕೊಡಿಸಿದ್ದಾರೆ.
ಕಾವ್ಯ, ಪ್ರಥಮ ಪಿಯು ವಿದ್ಯಾರ್ಥಿನಿ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ