Mysore
19
broken clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಪಿ.ಪಟ್ಟಣ : ಬಿಎಂ ರಸ್ತೆಯಲ್ಲಿ ವಾಹನ ಸವಾರರು ಹೈರಾಣ

ರಸ್ತೆ ಎರಡೂ ಬದಿಗಳಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್, ರಸ್ತೆಗೆ ಬಂದು ವ್ಯಾಪಾರ ಮಾಡುವ ವರ್ತಕರು

ಮಹೇಶ ಕೋಗಿಲವಾಡಿ

ಪಿರಿಯಾಪಟ್ಟಣ : ಪಟ್ಟಣದ ಮೂಲಕ ಹಾದು ಹೋಗುವ ಬಿಎಂ ರಸ್ತೆಯ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಗೆ ಸಂಪರ್ಕ ಸೇತುವೆಯ ರಸ್ತೆಉಯಾಗಿದ್ದು ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು, ವಾಹನಗಳು, ಆಂಬ್ಯಲೆನ್ಸ್‌ಗಳು ಸಂಚರಿಸುತ್ತವೆ. ಇಂತಹ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಬೈಕ್ ಸವಾರರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲೇ ಎಲ್ಲೆಂದರಲ್ಲಿ ಸರಿಯಾದ ರೀತಿ ಪಾರ್ಕಿಂಗ್ ಕೂಡ ವಾಡದೆ ಬೇಕಾಬಿಟ್ಟಿ ನಿಲ್ಲಿಸಿ ತಮ್ಮ ವ್ಯವಹಾರಗಳಿಗೆ ತೆರಳುತ್ತಿದ್ದಾರೆ. ಇದರಿಂದಾಗಿ ಪಾದಚಾರಿಗಳು ಮತ್ತು ಪ್ರಯಾಣಿಕರು ಸಂಚಾರ ದಟ್ಟಣೆ ಸಮಸ್ಯೆಯಿಂದ ಹೈರಾಣಾಗುತ್ತಿದ್ದಾರೆ. ಜತೆಗೆ ಅನೇಕ ಅಪಘಾತಗಳು ಕೂಡ ಸಂಭವಿಸುತ್ತಿವೆ.

ಪಟ್ಟಣದ ಅನೇಕ ಅಂಗಡಿ ವಾಲೀಕರು ತಮ್ಮ ಅಂಗಡಿಯ ಸಾವಾನುಗಳನ್ನು ರಸ್ತೆಯಲ್ಲಿ ಇಟ್ಟು ವ್ಯಾಪಾರ ವಾಡುತ್ತಿರುವುದು ಕೂಡ ಪಾದಚಾರಿಗಳು ಮತ್ತು ವಾಹನ ಸವಾರರ ಸಂಚಾರಕ್ಕೆ ಅಡಚಣೆಯಾಗಿದೆ. ಇದನ್ನು ಕಂಡರೂ ಕಾಣದ ಹಾಗೆ ಇರುವ ಪೊಲೀಸ್ ಇಲಾಖೆ ಮತ್ತು ಪುರಸಭೆಯವರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪುರಸಭೆಯವರನ್ನು ಕೇಳಿದರೆ ಈಗಾಗಲೇ ಸಂಬಂಧಪಟ್ಟಂತಹ ಪಾರ್ಕಿಂಗ್ ವ್ಯವಸ್ಥೆಗೆ ಬೋರ್ಡ್ ಗಳನ್ನು ನೀಡಲಾಗಿದ್ದು ಪೊಲೀಸ್ ಇಲಾಖೆ ಕ್ರಮ ಕೈಗೊಂಡು ಅದರ ಜವಾಬ್ದಾರಿ ವಹಿಸಬೇಕಿದೆ ಎಂದು ಹೇಳುತ್ತಾರೆ. ಪೊಲೀಸರ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನಗಳು ಮತ್ತು ಸಾರ್ವಜನಿಕರು ಓಡಾಡಲು ಹರಸಾಹಸ ಪಡುವಂತಾಗಿದೆ. ರಸ್ತೆಗಳಲ್ಲಿ ಬೈಕ್ ವಾಲೀಕರು ರಸ್ತೆಯ ಎರಡೂ ಬದಿಗಳಲ್ಲಿ ನಿಲುಗಡೆ ವಾಡುತ್ತಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ.
ಬ್ಯಾಂಕ್ ಮತ್ತು ಹೋಟೆಲ್‌ಗಳಿಗೆ ಬರುವಂತಹ ಗ್ರಾಹಕರು ರಸ್ತೆಯ ಎರಡೂ ಬದಿಗಳಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ವಾಡುತ್ತಿದ್ದಾರೆ. ಇದರ ಜೊತೆಗೆ ಮೈಸೂರಿಗೆ ತೆರಳುವಂತಹ ಕೆಲವು ನೌಕರರು ತಮ್ಮ ಬೈಕ್‌ಗಳನ್ನು ಇದೇ ರಸ್ತೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಪಾರ್ಕಿಂಗ್ ವಾಡುತ್ತಿದ್ದು, ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಹಬ್ಬ ಹರಿದಿನಗಳಲ್ಲಂತೂ ಸಾರ್ವಜನಿಕರು ಮತ್ತು ವಾಹನಗಳು ಓಡಾಡಲು ಸಾಧ್ಯವೇ ಇಲ್ಲದಂತಾಗಿದೆ.

ಈ ಹಿಂದೆ ಸುಗಮ ಸಂಚಾರಕ್ಕಾಗಿ ಹಲವು ಕಾನೂನನ್ನು ಜಾರಿಗೆ ತಂದಿದ್ದರೂ ಅವುಗಳು ಸರಿಾಂದ ರೀತಿುಂಲ್ಲಿ ಪಾಲನೆಯಾಗುತ್ತಿಲ್ಲ. ಸುಗಮ ಸಂಚಾರಕ್ಕೆ ಹಲವು ರೀತಿುಂ ನಿುಂಮಗಳನ್ನು ರೂಪಿಸುವುದರ ಜೊತೆಗೆ ಪಕ್ಕದ ಜಿಲ್ಲೆಯಾದ ಕೊಡಗಿನ ಗೋಣಿಕೊಪ್ಪ ಪೊಲೀಸರು ಅನುಸರಿಸುವಂತಹ ಟ್ರಾಫಿಕ್ ನಿಯಮಗಳನ್ನು ಇಲ್ಲಿಯ ಕೈಗೊಂಡರೆ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಾಧ್ಯ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಟ್ಟುನಿಟ್ಟನ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ವಾಡಿಕೊಡಬೇಕು ಎಂಬುದು ವಾಹನ ಸವಾರರು ಹಾಗೂ ಪಾದಚಾರಿಗಳು ಆಗ್ರಹವಾಗಿದೆ.

ಈಗಾಗಲೇ ಪುರಸಭಾ ವ್ಯಾಪ್ತಿುಂ ಬಿ.ಎಂ.ರಸ್ತೆಯ ಎರಡೂ ಬದಿಗಳಲ್ಲೂ ನೋ ಪಾರ್ಕಿಂಗ್ ಮತ್ತು ಪಾರ್ಕಿಂಗ್ ಫಲಕಗಳನ್ನು ಅಳವಡಿಸಲು ನೀಡಿದ್ದು, ನಗರದ ಮುಖ್ಯ ರಸ್ತೆಯ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ.

ಮಹೇಶ್, ಪುರಸಭೆ ಅಧ್ಯಕ್ಷ


 

ಈಗಾಗಲೇ ಪುರಸಭಾ ವ್ಯಾಪ್ತಿಯ ಅಂಗಡಿ ಮುಂಗಟ್ಟಿನ ವಾಲೀಕರಿಗೆ ತಮ್ಮ ವಸ್ತುಗಳನ್ನು ರಸ್ತೆಯಲ್ಲಿ ಇಟ್ಟು ವ್ಯಾಪಾರ ವಾಡದಂತೆ ನೋಟಿಸ್ ನೀಡಲಾಗಿದ್ದು ರಸ್ತೆಬದಿಯಲ್ಲಿ ಅಂಗಡಿ ವಾಲೀಕರು ವ್ಯಾಪಾರ ವಾಡುತ್ತಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಪೊಲೀಸ್ ಇಲಾಖೆಗೆ ಸಹಕಾರ ನೀಡಲಾಗುವುದು.

-ಮಹೇಂದ್ರ, ಪುರಸಭಾ ಮುಖ್ಯಾಧಿಕಾರಿ


ಈಗಾಗಲೇ ಪಿರಿಯಾಪಟ್ಟಣದ ಬಿಎಂ ರಸ್ತೆಯಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು, ಟ್ರಾಫಿಕ್ ಸಿಬ್ಬಂದಿಗಳನ್ನು ನೇಮಕ ವಾಡಲಾಗಿದೆ. ಬಿಎಂ ರಸ್ತೆಯಲ್ಲಿ ಟ್ರಾಫಿಕ್ ವ್ಯವಸ್ಥೆ ಸರಿಪಡಿಸುವುದು ಅತ್ಯಂತ ಅಗತ್ಯವಾಗಿದ್ದು, ಸ್ವಲ್ಪ ಜಾಗವನ್ನು ದ್ವಿಚಕ್ರವಾಹನಗಳಿಗೆ, ಸ್ವಲ್ಪ ಜಾಗವನ್ನು ಕಾರುಗಳಿಗೆ ಮೀಸಲಾಗಿಟ್ಟು ಇದ್ದಂತಹ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಮತ್ತು ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಿ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಅನುಕೂಲ ವಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ,

-ಚೇತನ್, ಎಸ್‌ಪಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!