ಮೈಸೂರು : ತಿ.ನರಸೀಪುರ ಪಟ್ಟಣದ ಯುವ ಡಿಸೈನರ್ ಆರ್. ಮಂಜುನಾಥ್ ಅವರು ಎಟಿಎಸ್ ಬೆಂಗಳೂರು ಹೆಸರಿನಲ್ಲಿ ನೂತನವಾಗಿ 5 ಹೊಸ ಕನ್ನಡದ ಯೂನಿಕೋಡ್ ಫಾಂಟ್‌ಗಳನ್ನು ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮೈಸೂರಿನ ಖಾಸಗಿ ಕಂಪನಿಯಲ್ಲಿ ಲೀಡ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ನಿವಾಸಿ ಆರ್. ಮಂಜುನಾಥ್ ತಮ್ಮ ಅಕ್ಷರ ಟೈಪ್ ಸ್ಟುಡಿಯೋ ಮೂಲಕ ಜನವರಿಯಲ್ಲಿ ಬಂಡೀಪುರ ಎಂಬ ಹೆಸರಿನಲ್ಲಿ ಹೊಸ ಕನ್ನಡ ಫಾಂಟ್ ನೀಡಿದ್ದರು.
ಈದೀಗ ಮತ್ತೊಮ್ಮೆ ಸಾರ್ವಜನಿಕರ ಬಳಕೆಗೆ ಸರಳ, ಬಿಟ್ ಮ್ಯಾಪ್ ಮಾದರಿಯಲ್ಲಿ ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗೆ ಪೂರಕವಾದ ಬೆಂಗಳೂರು ಹೆಸರಿನಲ್ಲಿ ಡಾಟ್, ಸ್ಮೂತ್,ಫಿಕ್ಸೆಲ್,ಸ್ಕ್ವೈರ್ ಹಾಗೂ ಎಲ್‌ಐಡಿ ಎಂಬ ಹೊಡ ಅಕ್ಷರಗಳನ್ನು ವಿನ್ಯಾಸಗೊಳಿಸುವ ಮೂಲಕ ತಮ್ಮ ವೆಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.
ಫಾಂಟ್ ಡೌನ್‌ಲೋಡ್ ಗೆ ಈ ಲಿಂಕ್ ಅನ್ನು ಬಳಸಬಹುದಾಗಿದೆ.
https://akshratypestudio.in/fonts/bengaluru





