ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೊನೆಯ ಬಾರಿ ನಟಿಸಿರುವ ಚಿತ್ರ ಗಂಧದ ಗುಡಿ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಗೊಂಡಿದೆ.
ಈ ಸಿನಿಮಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.
Appu lives in the hearts of millions around the world. He was brilliance personified, full of energy and blessed with unparalleled talent. #GandhadaGudi is a tribute to Mother Nature, Karnataka's natural beauty and environmental conservation. My best wishes for this endeavour. https://t.co/VTimdGmDAM
— Narendra Modi (@narendramodi) October 9, 2022
ʼಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ವಾಸಿಸುತ್ತಾನೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು, ಶಕ್ತಿಯಿಂದ ತುಂಬಿದ್ದರು ಮತ್ತು ಅಪ್ರತಿಮ ಪ್ರತಿಭೆಯಿಂದ ಆಶೀರ್ವದಿಸಿದರು. #ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ಗೌರವವಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳುʼ ಎಂದು ಟ್ವೀಟ್ ಮಾಡುವ ಮೂಲಕ ನರೇಂದ್ರ ಮೋದಿ ಅವರು ಸಿನಿಮಾಗೆ ಶುಭಾಶಯ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರು ಕೂಡು ಗಂಧದಗುಡಿ ಸಿನಿಮಾಗೆ ಶುಭಕೋರಿದ್ದು,
ಗಂಧದಗುಡಿ ಅಪ್ಪು ಹೃದಯಕ್ಕೆ ಹತ್ತಿರ. ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರ. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ.
#GandhadaGudi ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂಬ ಭರವಸೆ ಟ್ರೇಲರ್‌ನಲ್ಲಿ ಕಾಣುತ್ತದೆ. @Ashwini_PRK ಅವರಿಗೆ ನನ್ನ ಅಭಿನಂದನೆಗಳು.#PuneethRajkumar https://t.co/PYCC2S3vXl— Basavaraj S Bommai (Modi Ka Parivar) (@BSBommai) October 9, 2022
ಗಂಧದಗುಡಿ ಅಪ್ಪು ಹೃದಯಕ್ಕೆ ಹತ್ತಿರ. ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರ. ಗಂಧದಗುಡಿ ಕರ್ನಾಟಕದ ಆಸ್ತಿ, ಅಪ್ಪು ಗಂಧದಗುಡಿಯ ಆಸ್ತಿ.
ಗಂಧದಗುಡಿ ನಮ್ಮನ್ನೆಲ್ಲ ಹೊಸತೊಂದು ಲೋಕಕ್ಕೆ ಕರೆದೊಯ್ಯಲಿದೆ ಎಂಬ ಭರವಸೆ ಟ್ರೇಲರ್‌ನಲ್ಲಿ ಕಾಣುತ್ತದೆ. @Ashwini_PRK ಅವರಿಗೆ ನನ್ನ ಅಭಿನಂದನೆಗಳು. ಎಂದು ಅಭಿನಂದಿಸಿದ್ದಾರೆ.





