ಮೈಸೂರು : ಕ್ರಿಕೆಟ್ ದಿಗ್ಗಜ ಎಂಎಸ್ ಧೋನಿ ಅವರ ಮೇಣದ ಪ್ರತಿಮೆಯನ್ನು ತಯಾರಿಸಿದ ಮೈಸೂರಿನ ಹುಡುಗನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿದ್ದಾನೆ.
ಹೌದು ಮೇಣದ ಪ್ರತಿಮೆಯನ್ನು ತಯಾರಿಸಿದ ಅಪ್ಪಟ ಎಂಎಸ್ ಧೋನಿ ಅವರ ಅಭಿಮಾನಿಯಾದ ಈ ಹುಡುಗ ಪ್ರತಿಮೆಯ ಬಳಿ ನಿಂತುಕೊಂಡು ಫೋಟೋ ತೆಗೆಸಿ ಅದನ್ನು ಸೋಶಿಯಲ್ ವಿಡಿಯೋಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟಿಗೆ ಸಾಕಷ್ಟು ಜನರಿಂದ ರೆಸ್ಪಾನ್ಸ್ ಬಂದಿದ್ದು ಹಲವರು ಈ ಮೇಣದ ಪ್ರತಿಮೆ ದೋನಿ ಅವರನ್ನು ಹೋಲುತ್ತಿಲ್ಲ ಎಂದು ಕಾಮೆಂಟ್ ಕೊಟ್ಟಿದ್ದಾರೆ.
ಮತ್ತೊಂದಷ್ಟು ಜನ ಇದರಲ್ಲಿ ಧೋನಿ ಎಲ್ಲಿದ್ದಾರೆ, ಮೂರ್ತಿಯ ಪಕ್ಕ ನಿಂತ ಯುವಕನೇ ಧೋನಿಯನ್ನು ಹೆಚ್ಚು ಹೋಲುತ್ತಾರೆ ಎಂದು ಮತ್ತಷ್ಟು ಜನರು ಟೀಕಿಸಿದ್ದಾರೆ. ಮತ್ತಷ್ಟು ಜನ ಪ್ರಶoಸೆ ವ್ಯಕ್ತಪಡಿಸಿದ್ದು ಅಭಿಮಾನಿಕ್ಕೆ ಸಾಟಿ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





