Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆರೋಗ್ಯ ಸೇವೆಗೆ ‘ನಮ್ಮ ಕ್ಲಿನಿಕ್’ : ಡಾ ಸುಧಾಕರ್

ಮೈಸೂರು  : ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರು ಸ್ವಂತ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡುವುದು ಹಾಗೂ ದ್ವಿತೀಯ, ತೃತೀಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ, ಪ್ರಾಥಮಿಕ ಆರೋಗ್ಯ ಸೇವೆ ವಿಕೇಂದ್ರಿಕರಣ, ಸಾಂಕ್ರಾಮಿಕ ಕಾಯಿಲೆಗಳ ಕಣ್ಗಾವಲು ವ್ಯವಸ್ಥೆ ಬಲಪಡಿಸುವ ಮೂಲಕ ರೋಗಗಳು ಉಲ್ಬಣವಾಗಿ ದೊಡ್ಡ ಪ್ರಮಾಣದ ಗಂಡಾಂತರಕಾರಿ ಪರಿಸ್ಥಿತಿ ಎದುರಾಗುವುದನ್ನು ನಿಯಂತ್ರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಜನರಿಗೆ ಅಗತ್ಯ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಹೊಸದಾಗಿ ಆರು ‘ನಮ್ಮ ಕ್ಲಿನಿಕ್’ ಕಾರ್ಯಾರಂಭಿಸಲಿವೆ. ಆರೋಗ್ಯ ಸೇವೆಯಿಂದ ವಂಚಿತವಾಗಿರುವ ಕೊಳಗೇರಿ, ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ದುರ್ಬಲ ವರ್ಗದವರು ವಾಸಿಸುವ ಪ್ರದೇಶಗಳಿಗೆ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಮೈಸೂರು ನಗರ ವ್ಯಾಪ್ತಿಯಲ್ಲಿ ಮೂರು, ತಿ.ನರಸೀಪುರ, ಕೆ.ಆರ್.ನಗರ, ಎಚ್.ಡಿ. ಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಆರು ನಮ್ಮ ಕ್ಲಿನಿಕ್ (ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ)ಗಳನ್ನು ಸೆಪ್ಟಂಬರ್ ಮೊದಲ ವಾರದಿಂದಲೇ ಆರಂಭಿಸಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಏನಿದು ನಮ್ಮ ಕ್ಲಿನಿಕ್ ? : ನಗರದಲ್ಲಿ ಪ್ರತಿ 50,000 ಜನಸಂಖ್ಯೆಗೆ ಒಂದರಂತೆ 21 ಪಿಎಚ್ಸಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಅತೀ ಹೆಚ್ಚು ಒತ್ತಡವಿರುವ ಪಿಎಚ್ಸಿಗೆ ಸಮೀಪದಲ್ಲಿ ಉಪ ಕೇಂದ್ರಗಳಾಗಿ ಈ ಕ್ಲಿನಿಕ್ ಆರಂಭಿಸಲಾಗುತ್ತದೆ. ಪಿಎಚ್ಸಿ ಮಾದರಿಯಲ್ಲಿಯೇ ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ. ವೈದ್ಯರು, ಸ್ಟಾಫ್ ನರ್ಸ್, ಗ್ರೂಪ್ ಡಿ, ಡಾಟಾ ಎಂಟ್ರಿ ಸಿಬ್ಬಂದಿ ನೇಮಕಕ್ಕೆ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದೆ. ಈ ಕ್ಲಿನಿಕ್ ಸಮೀಪದಲ್ಲಿರುವ ಪಿಎಚ್ಸಿಯ ಎಎನ್ಎಂ (ಕಿರಿಯ ಆರೋಗ್ಯ ಸಹಾಯಕಿಯರು) ಸೇರಿದಂತೆ ಇನ್ನಿತರ ಕ್ಷೇತ್ರದ ಕಾರ್ಯ ಸಿಬ್ಬಂದಿ, ಲಸಿಕಾ ಸಿಬ್ಬಂದಿಗಳೇ ಇಲ್ಲಿಯೂ ಅದೇ ಕೆಲಸ ಮುಂದುವರಿಸುತ್ತಾರೆ.

ಸೇವೆ ಬಲವರ್ಧನೆಗೆ ಸಹಕಾರಿ :ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರು ಸ್ವಂತ ಹಣ ಖರ್ಚು ಮಾಡುವುದನ್ನು ಕಡಿಮೆ ಮಾಡುವುದು ಹಾಗೂ ದ್ವಿತೀಯ, ತೃತೀಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ, ಪ್ರಾಥಮಿಕ ಆರೋಗ್ಯ ಸೇವೆ ವಿಕೇಂದ್ರಿಕರಣ, ಸಾಂಕ್ರಾಮಿಕ ಕಾಯಿಲೆಗಳ ಕಣ್ಗಾವಲು ವ್ಯವಸ್ಥೆ ಬಲಪಡಿಸುವ ಮೂಲಕ ರೋಗಗಳು ಉಲ್ಬಣವಾಗಿ ದೊಡ್ಡ ಪ್ರಮಾಣದ ಗಂಡಾಂತರಕಾರಿ ಪರಿಸ್ಥಿತಿ ಎದುರಾಗುವುದನ್ನು ನಿಯಂತ್ರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಎಲ್ಲೆಲ್ಲಿ ಸೇವೆ ಆರಂಭ :ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಹಾಗೂ ಇತರ ಸದಸ್ಯರನ್ನು ಒಳಗೊಂಡ ಜಿಲ್ಲಾಸಮಿತಿಯಲ್ಲಿ ನಗರ ವ್ಯಾಪ್ತಿಯಲ್ಲಿ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿಯೂ ಒಂದೊಂದು ಕ್ಲಿನಿಕ್ ಆರಂಭಿಸಲು ಚರ್ಚಿಸಲಾಗುವುದು. ಕೃಷ್ಣರಾಜ ಕ್ಷೇತ್ರದ ಶ್ರೀರಾಂಪುರ, ವಿವೇಕಾನಂದ ನಗರ ಭಾಗ, ಚಾಮರಾಜ ಕ್ಷೇತ್ರದಲ್ಲಿ ವಿಜಯನಗರ 2, 3, 4 ನೇ ಹಂತಕ್ಕೆ ಅನುಕೂಲವಾಗುವಂತೆ, ನರಸಿಂಹರಾಜ ಕ್ಷೇತ್ರದ ಭರತ್ ನಗರ, ಸಾತಗಳ್ಳಿ ಭಾಗದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಜಾಗ ಗುರುತಿಸಲಾಗುತ್ತಿದೆ. ಇದಲ್ಲದೇ ತಿ.ನರಸೀಪುರ, ಕೆ.ಆರ್.ನಗರ, ಎಚ್.ಡಿ.ಕೋಟೆ ಪಟ್ಟಣ ಪಂಚಾಯಿತಿಯಲ್ಲಿ ಈಗಾಗಲೇ ಕಟ್ಟಡಗಳನ್ನು ಬಾಡಿಗೆ ಆಧಾರದಲ್ಲಿಆಯ್ಕೆ ಮಾಡಿಕೊಳ್ಳುತ್ತೇವೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ