Mysore
29
scattered clouds

Social Media

ಶನಿವಾರ, 03 ಜನವರಿ 2026
Light
Dark

ಪಡಿತರಕ್ಕೆ ಗ್ರಾಹಕರ ಪರದಾಟ: ಒಂದರ ಬದಲು ಎರಡು ಒಟಿಪಿ

ಮಂಡ್ಯ: ಪಡಿತರ ಅಂಗಡಿಗಳ ಎದುರು ಇದೀಗ ರಾತ್ರಿವರೆಗೂ ಮೈಲುದ್ದದ ಸರತಿ ಸಾಲು ಕಂಡು ಬರುತ್ತಿದೆ. ರೇಶನ್ ಅಂಗಡಿ ಸಿಬ್ಬಂದಿ ಜತೆಗೆ ವಾಗ್ಯುದ್ಧ, ರಂಪಾಟ ಎಲ್ಲೆಡೆ ಸಾಮಾನ್ಯವಾಗಿದೆ. ನೆಟ್ವರ್ಕ್ ಸಮಸ್ಯೆ ಜತೆಯಲ್ಲಿ ಒಂದು ಒಟಿಪಿ ಜತೆಯಲ್ಲಿ ಎರಡು ಒಟಿಪಿ ಪಡೆಯಬೇಕಾಗಿರುವುದರಿಂದ ಅನಗತ್ಯ ವಿಳಂಬವಾಗುತ್ತಿದೆ. ಇದರಿಂದ ಸರತಿಯಲ್ಲಿ ಪಡಿತರಕ್ಕಾಗಿ ಕಾಯುವ ಜನಸಾಮಾನ್ಯರು ಸಾಮಗ್ರಿ ಪಡೆಯಲು ನಿತ್ಯ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ
ಹಿಂದೆ ಪಡಿತರ ಅಂಗಡಿಗಳಲ್ಲಿ ನಿಮಿಷಕ್ಕೆ ಒಂದು ಕಾರ್ಡ್, ಗಂಟೆಗೆ 40 ಕಾರ್ಡ್ ನಿರ್ವಹಣೆ ಆಗುತ್ತಿತ್ತು. ಈಗ ಒಂದು ಕಾರ್ಡ್ಗೆ 10ರಿಂದ 20 ನಿಮಿಷ ಬೇಕಾಗುತ್ತದೆ. ಸರ್ವರ್ ವಿಳಂಬ ಜತೆಗೆ ಕೆಲವು ಸಲ ಸರ್ವರ್ ಕೈಕೊಡುತ್ತಿರುವುದರಿಂದ ದಿನಕ್ಕೆ 40 ಕಾರ್ಡ್ ಕೂಡ ನಿರ್ವಹಣೆ ಆಗದ ದಿನಗಳಿವೆ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಸೆಪ್ಟೆಂಬರ್ವರೆಗೆ ಒಂದು ಬಾರಿ ಪಡಿತರ ಪಡೆಯಲು ಒಂದು ಸಲ ಮಾತ್ರ ಒಟಿಪಿ ನೀಡಬೇಕಾಗಿತ್ತು. ಈಗ ಕೇಂದ್ರದ ಪಾಲಿನ ಅಕ್ಕಿಗೆ, ರಾಜ್ಯದ ಪಾಲಿನ ಅಕ್ಕಿಗೆ ಎರಡು ಪ್ರತ್ಯೇಕ ಒಟಿಪಿ ಪಡೆಯಬೇಕಾಗಿದೆ.
ಇದು ರಾಜ್ಯವ್ಯಾಪಿ ಸಮಸ್ಯೆ. ಕೇಂದ್ರದ ಮಹತ್ವಾಕಾಂಕ್ಷೆಯ ವನ್ ನೇಶನ್ ವನ್ ರೇಶನ್ ಯೋಜನೆ ಪ್ರಕ್ರಿಯೆ ಆರಂಭವಾಗಿರುವ ಭಾಗವೂ ಆಗಿದೆ. ಹಾಗಾಗಿ ಆರಂಭಿಕವಾಗಿ ಈ ಸಮಸ್ಯೆ ಎದುರಿಸಬೇಕಾಗಿದೆ ಎಂದು ಇಲಾಖಾ ಆಧಿಕಾರಿಗಳು ಸಮಜಾಯಿಶಿಕೆ ನೀಡುತ್ತಿದ್ದಾರೆ.

ಹಿಂದೆ ಪಡಿತರ ಅಂಗಡಿಗಳಲ್ಲಿ ನಿಮಿಷಕ್ಕೆ ಒಂದು ಕಾರ್ಡ್, ಗಂಟೆಗೆ 40 ಕಾರ್ಡ್ ನಿರ್ವಹಣೆ ಆಗುತ್ತಿತ್ತು. ಈಗ ಒಂದು ಕಾರ್ಡ್ಗೆ 10ರಿಂದ 20 ನಿಮಿಷ ಬೇಕಾಗುತ್ತದೆ. ಸರ್ವರ್ ವಿಳಂಬ ಜತೆಗೆ ಕೆಲವು ಸಲ ಸರ್ವರ್ ಕೈಕೊಡುತ್ತಿರುವುದರಿಂದ ದಿನಕ್ಕೆ 40 ಕಾರ್ಡ್ ಕೂಡ ನಿರ್ವಹಣೆ ಆಗದ ದಿನಗಳಿವೆ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!