Mysore
15
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಮೈಸೂರು ಅರಮನೆಯಲ್ಲಿ ಆಯುಧಪೂಜೆ, ಚಂಡಿಕಾಹೋಮ ಸಂಪನ್ನ

ಮೈಸೂರು: ದಸರಾ ಹಬ್ಬದ 9ನೇ ದಿನದಂದು ಮೈಸೂರು ಅಂಬಾವಿಲಾಸ ಅರಮನೆಯಲ್ಲಿ ಆಯುಧ ಪೂಜೆ, ಚಂಡಿಕಾ ಹೋಮ ಸಂಪನ್ನಗೊಂಡಿತು. ರಾಜವಂಶಸ್ಥ ಯದುವೀರ್ ಒಡೆಯರ್ ಸಾಂಪ್ರದಾಯಿಕ ಪೂಜೆಯನ್ನ ನೆರವೇರಿಸಿದರು. ರಾಜ ವಂಶಸ್ಥರು ಪಟ್ಟದ ಆನೆ, ಹಸು, ಕುದುರೆ, ಒಂಟೆ, ಪಲ್ಲಕ್ಕಿ ಹಾಗೂ ಅವರು ಬಳಸುವ ಅದ್ಧೂರಿ ಕಾರುಗಳಿಗೆ ಪೂಜೆ ಸಲ್ಲಿಸಿದರು.

ನಾಡಹಬ್ಬ ದಸರಾದ 9ನೇ ದಿನ ಆಯುಧ ಪೂಜೆ ಕೈಂಕರ್ಯಗಳು ಅಂಬಾವಿಲಾಸ ಅರಮನೆಯಲ್ಲಿ ಸುಸೂತ್ರವಾಗಿ ನೆರೆವೇರಿತು. ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸಾಂಪ್ರದಾಯಿಕ ಪೂಜೆಯನ್ನ ನೆರವೇರಿಸಿದರು. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಆರಂಭವಾದ ಪೂಜಾ ವಿಧಿವಿಧಾನ 12.30ಕ್ಕೆ ಅಂತ್ಯವಾಯಿತು.
ಬೆಳಗ್ಗೆಯಿಂದಲೇ ಅರಮನೆಯಲ್ಲಿ ಶರನ್ನವರಾತ್ರಿಯ 9ನೇ ದಿನ ಆಯುಧ ಪೂಜೆ ಧಾರ್ಮಿಕ ಕೈಂಕರ್ಯಗಳು ನಡೆದವು. ಬೆಳಗ್ಗೆ 6 ರಿಂದ ಚಂಡಿಕಾ ಹೋಮ ನಡೆದು 9 ಗಂಟೆಗೆ ಹೋಮ ಪೂರ್ಣಾಹುತಿ ಆಯಿತು. 10.30 ರ ಸುಮಾರಿಗೆ ಮತ್ತೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವನ್ನು ಆನೆ ಬಾಗಿಲಿಗೆ ತರಲಾಗುತ್ತದೆ. ಆ ನಂತರ ಆನೆ ಬಾಗಿಲಿನ ಮೂಲಕ ಕಲ್ಯಾಣ ಮಂಟಪದ ಒಳಗೆ ತೆರಳಿ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಿದರು. ನಂತರ ರಾಜ ವಂಶಸ್ಥರು ಪಟ್ಟದ ಆನೆ, ಹಸು, ಕುದುರೆ, ಒಂಟೆ, ಪಲ್ಲಕ್ಕಿ ಹಾಗೂ ಅವರು ಬಳಸುವ ಅದ್ಧೂರಿ ಕಾರುಗಳಿಗೆ ಪೂಜೆ ಸಲ್ಲಿಸಿದರು.

ಮತ್ತೊಂದೆಡೆ ಅಜ್ಜಿ ಪ್ರಮೋದಾದೇವಿ ಒಡೆಯರ್ ಜೊತೆ ಯದುವೀರ್ ಪುತ್ರ ಆದ್ಯವೀರ್ ಅಪ್ಪ ಮಾಡಿದ ಪೂಜೆಯನ್ನ ಅರಮನೆ ಮೇಲಿನಿಂದ ವೀಕ್ಷಣೆ ಮಾಡಿದರು.. ಅರ್ಧ ಗಂಟೆಗೂ ಹೆಚ್ಚು ಕಾಲ ವಿಧಿವಿಧಾನವನ್ನ ನೋಡಿದ್ರು. ಆದ್ಯವೀರ್ ನಗು ಎಲ್ಲರ ಮನಸೂರೆ ಗೊಂಡಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!