Mysore
18
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಚಾ. ನಗರ : ಚರ್ಚ್​ನಲ್ಲಿ ಕ್ರೈಸ್ತ ಸಮುದಾಯದಿಂದ ಆಯುಧ ಪೂಜೆ

ಚಾಮರಾಜನಗರ: ಪವಿತ್ರ ಹಬ್ಬವಾದ ದಸರಾದಲ್ಲಿ ಹಿಂದೂಗಳು ಆಯುಧ ಪೂಜೆ ಮಾಡುವುದು ಸಂಪ್ರದಾಯ. ಜಿಲ್ಲೆಯ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಕ್ರೈಸ್ತ ಸಮುದಾಯದವರೂ ಸಂತ ಲೂರ್ದುಮಾತೆ ಚರ್ಚ್​ನಲ್ಲಿ ಆಯುಧ ಪೂಜೆಯನ್ನು ಆಚರಿಸಿ ಗಮನ ಸೆಳೆದರು.

ಚರ್ಚ್​ನ ಪಾದ್ರಿಗಳಾದ ಕ್ರಿಸ್ಟೋಫರ್ ಸಗಾಯರಾಜ್ ಮತ್ತು ಸೂಸೈ ರೆಜೀಸ್ ಅವರು ಪ್ರಾರ್ಥನೆ ಮಾಡಿ ಪವಿತ್ರ ಜಲವನ್ನು ವಾಹನಗಳಿಗೆ ಪ್ರೋಕ್ಷಣೆ ಮಾಡಿ ಅಪಘಾತಗಳಿಂದ ಪಾರು ಮಾಡು ರಕ್ಷಕ ಏಸು ಎಂದು ಪ್ರಾರ್ಥಿಸಲಾಯಿತು‌.

ಈ ಹಿಂದೆ ತಮ್ಮ ಪೂರ್ವಜರು ಹಿಂದೂಗಳಾಗಿದ್ದರು. ಆ ಸಂಪ್ರದಾಯ ಬಿಡಬಾರದೆಂದು ನಾವು ಆಯುಧ ಪೂಜೆ ಮಾಡಿದ್ದೇವೆ. ಎಲ್ಲಾ ಸಮುದಾಯದ ಜನರು ಆಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಜಾನ್ ಬ್ರಿಟೋ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ