Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ನಾಲ್ಕನೇ ದಿನದ ಕಾಂಗ್ರೆಸ್ ಪಾದಯಾತ್ರೆ ಆರಂಭ

ಮೈಸೂರು: ಮೂರನೇ ದಿನದ ಯಾತ್ರೆ ಬಂಡೀಪಾಳ್ಯದಲ್ಲಿ ಅಂತ್ಯವಾಗಿದ್ದು ದೊಡ್ಡಕೆರೆ ಮೈದಾನದಲ್ಲಿ ರಾಹುಲ್‌ ತಂಡ  ವಾಸ್ತವ್ಯ ಆಗಿದರು. ಪಕ್ಕದಲ್ಲೇ ಇದ್ದ ರಾಜಮನೆತನದವರನ್ನು ಬೇಡಿ ಮಾಡುತ್ತಾರೆಂಬ ನಿರೀಕ್ಷೆಯಿದ್ದು ಅದು ಕನಸಾಗಿಯೇ ಉಳಿಯಿತು. ನಂತರ ಭಾರತ ಐಕ್ಯತಾ ಯಾತ್ರೆ ನೇತಾರ ರಾಹುಲ್ ಗಾಂಧಿ ಅವರು ಮೈಸೂರಿನ ಸುತ್ತೂರು ಮಠಕ್ಕೆ ಸೋಮವಾರ ತೆರಳಿ ಶ್ರೀ ಶಿವರಾತ್ರಿಶ್ವರ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರರು ಇದ್ದರು.

ಭಾರತ್ ಜೋಡೋ ಯಾತ್ರೆ ನಾಲ್ಕನೇ ದಿನದ ಪಾದಯಾತ್ರೆ ಆರಂಭಗೊಂಡಿದೆ. ಸೋಮವಾರ ಬೆಳಗ್ಗೆ ಮೈಸೂರಿನ ಆರ್ ಗೇಟ್ ನಿಂದ ಪಾದಯಾತ್ರೆ ಆರಂಭಗೊಂಡಿದೆ. ಬೆಳಗಿನ ಜಾವ 6:30 ಕ್ಕೆ ಪಾದಯಾತ್ರೆ ಆರಂಭವಾಗಿದೆ. ನಾಲ್ಕನೇ ದಿನ ಸೋಮವಾರ ರಾಹುಲ್ ಗಾಂಧಿ 12 ಕಿ.ಮೀ ಹೆಜ್ಜೆ ಹಾಕಲಿದ್ದಾರೆ. 9:30 ಕ್ಕೆಶ್ರೀರಂಗಪಟ್ಟಣದ ಅಗ್ರಹಾರದಲ್ಲಿ ಬೆಳಗ್ಗಿನ ವಿರಾಮ ಇರಲಿದೆ. ಶ್ರೀರಂಗಪಟ್ಟಣದ ಪರಿವರ್ತನಾ ಸ್ಕೂಲ್ ನಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ.

ಮಧ್ಯಾಹ್ನ 2 ಕ್ಕೆ ಮತ್ತೆ ಪಾದಯಾತ್ರೆ ಶ್ರೀರಂಗಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದೆ. ಸಂಜೆ 4:30 ಕ್ಕೆ ಪಾದಯಾತ್ರೆ ಮುಕ್ತಾಯಗೊಳ್ಳಿದ್ದು, ಪಾಂಡವಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪಾದಯಾತ್ರೆ ಮುಕ್ತಾಯವಾಗಲಿದೆ.

ಮಧ್ಯಾಹ್ನ 10 ಕಿ.ಮೀ ಪಾದಯಾತ್ರೆ ನಡೆಯಲಿದ್ದು, ರಾತ್ರಿ ಜೆಎಸ್ಎಸ್ ಗ್ರೌಂಡ್ ನಲ್ಲಿ ರಾಹುಲ್ ವಾಸ್ತವ್ಯ ಹೂಡಲಿದ್ದಾರೆ. ಸೋನಿಯಾ ಗಾಂಧಿ ಮೈಸೂರಿಗೆ ಆಗಮನದ ಹಿನ್ನೆಲೆಯಲ್ಲಿ ಸಂಜೆ 4:30 ಕ್ಕೆ ಪಾದಯಾತ್ರೆ ಮುಕ್ತಾಯ ಆಗಲಿದೆ. ಬಳಿಕ ರಾಹುಲ್ ಕೊಡಗಿಗೆ ತೆರಳುವ ಸಾಧ್ಯತೆ ಇದೆ.

ಎರಡು ದಿನ ಬ್ರೇಕ್ : ಮಂಗಳವಾರ ಹಾಗೂ ಬುಧವಾರ ದಸರಾ ರಜೆ ಇರುವ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಬ್ರೇಕ್ ಇರಲಿದೆ. ಗುರುವಾರ ಮತ್ತೆ ಪಾದಯಾತ್ರೆ ಆರಂಭಗೊಳ್ಳಲಿದೆ.

ಕಪ್ಪು ಬಾವುಟ ಪ್ರದರ್ಶನ ಸಾಧ್ಯತೆಖಾಕಿ ಫುಲ್ ಅಲರ್ಟ್ : ಮೈಸೂರಲ್ಲಿ ರಾಹುಲ್ ಗೆ ಕಪ್ಪು ಭಾವುಟ ಪ್ರದರ್ಶನ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಹುಲ್ ಪಾದಯಾತ್ರೆಗೆ ಫುಲ್ ಸೆಕ್ಯೂರಿಟಿ ನೀಡಲಾಗಿದೆ. ಭದ್ರತೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ರಾಹುಲ್ ಸುತ್ತಮುತ್ತ 500ಕ್ಕೂ ಹೆಚ್ಚು ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!