Mysore
18
clear sky

Social Media

ಬುಧವಾರ, 07 ಜನವರಿ 2026
Light
Dark

ದಸರಾ ಹಿನ್ನೆಲೆ ನಗರದೆಲ್ಲೆಡೆ ಟ್ರಾಫಿಕ್‌ ಜಾಂ

ದಸರಾ ರಜೆಗಾಗಿ ಊರಿಗೆ ಬಂದ ಜನ: ಟ್ರಾಫಿಕ್ಜಾಂ

ದಸರಾ ಹಬ್ಬ ಹಾಗೂ ವಾರಾಂತ್ಯದ ಸಾಲು ರಜೆಗಳ ಹಿನ್ನೆಲೆಯಲ್ಲಿ ಶನಿವಾರ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ರಾಜ್ಯದ ಇತರೆ ನಗರಗಳು ಹಾಗೂ ಹೊರ ರಾಜ್ಯದಿಂದ ಬಂದ ಪರಿಣಾಮ ನಗರದ ಬಸ್ನಿಲ್ದಾಣ, ಕೇಂದ್ರೀಯ ಬಸ್‌ ನಿಲ್ದಾಣ, ಹಾಗೂ  ರೈಲು ನಿಲ್ದಾಣವಿರುವ ಜೆ. ಎಲ್‌. ಬಿ. ರಸ್ತೆ ಹಾಗೂ ಮೈಸೂರು ನಂಜನಗೂಡು, ಮೈಸೂರು ಎಚ್‌ ಡಿ ಕೋಟೆ, ಮೈಸೂರು ಹುಣಸೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು. ದಸರಾ ಹಬ್ಬ ಹಾಗೂ ವಾರಾಂತ್ಯದ ಸಾಲು ರಜೆಗಳ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ರಾಜ್ಯದ ಇತರೆ ನಗರಗಳು ಹಾಗೂ ಹೊರ ರಾಜ್ಯದಿಂದ ಪ್ರವಾಸಿಗರು ಬಂದ ಪರಿಣಾಮ ನಗರದೆಲ್ಲೆಡೆ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.

ಜನಸಂದಣಿಯ ವೇಳೆಯೇ ಮಳೆಯೂ ಆಗಿದ್ದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ವಾಹನ ಚಾಲಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಧ್ಯಾಹದಿಂದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಕೊಂಚವೇ ಏರಿಕೆಯಾಯಿತು. ರಾತ್ರಿ 7 ವೇಳೆಗೆ ಮೈಸೂರು, ನಂಜನಗೂಡು, ಎಚ್ಡಿ ಕೋಟೆ. ಹಾಗೂ ಹುಣಸೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಮಂದಗತಿಯಲ್ಲಿ ಸಾಗಿದವು. ಇದೇ ವೇಳೆ ನಗರದ ಹಲವೆಡೆ ಅಲ್ಲಲ್ಲಿ ಜಿಟಿ ಜಿಟಿ ಮಳೆಯೂ ಸುರಿದ ಪರಿಣಾಮ ವಾಹನ ಸವಾರರು ಹೈರಾಣಾದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!