Mysore
21
overcast clouds

Social Media

ಶನಿವಾರ, 19 ಅಕ್ಟೋಬರ್ 2024
Light
Dark

ಶೀಘ್ರವೇ ಹೈವೇ ಪ್ಯಾಟ್ರೋಲಿಂಗ್ ಆರಂಭ : ಸಂಸದ ಪ್ರತಾಪ್‌ ಸಿಂಹ

ಚನ್ನಪಟ್ಟಣ :ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಚನ್ನಪಟ್ಟಣದ ಬಳಿ ಅ. 1ರಂದು ಸರಣಿ ಅಪಘಾತವಾಗಿದೆ. ಬಸ್ಸೊಂದು ಆರು ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾಗಿ ನಜ್ಜುಗೊಜ್ಜಾಗಿ ರಸ್ತೆಪಕ್ಕದಲ್ಲಿ ನಿಂತಿರುವ ಕಾರುಗಳ ವಿಡಿಯೋವನ್ನು ಮಾಡಿದ್ದಾರೆ. ಆ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿರುವ ಪ್ರತಾಪ್ ಸಿಂಹ, ‘ಅತಿವೇಗದಿಂದಾಗಿ ಚನ್ನಪಟ್ಟಣದ ಬಳಿ ಆರೇಂಜ್ ಬಸ್ ಚಾಲಕ ಆರು ವಾಹನಗಳಿಗೆ ಹಿಂದಿನಿಂದ ಗುದ್ದಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ. ಒಳ್ಳೆಯ ರಸ್ತೆಯ ಜೊತೆಗೆ, ನಿಯಂತ್ರಿತ ಚಾಲನೆಯೂ ಅಷ್ಟೇ ಮುಖ್ಯ. ಹೈವೇ ಪ್ಯಾಟ್ರೋಲಿಂಗ್ ಆರಂಭಿಸುತ್ತೇವೆ ಎಂದಿದ್ದಾರೆ.

ಚನ್ನಪಟ್ಟಣ: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಶನಿವಾರ ಅಪಘಾತವೊಂದು ಸಂಭವಿಸಿದೆ. ಚನ್ನಪಟ್ಟಣದ ಬಳಿ ನಡೆದಿರುವ ಈ ಅಪಘಾತದಲ್ಲಿ ಮಗುವೊಂದು ಮೃತಪಟ್ಟಿದೆ. ಎಕ್ಸ್ ಪ್ರೆಸ್ ಹೈವೇಯಲ್ಲಿ ವೇಗವಾಗಿ ಸಾಗಿಬಂದ ಖಾಸಗಿ ಬಸ್ಸೊಂದು ಮುಂದೆ ಸಾಗುತ್ತಿದ್ದ ಕಾರೊಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.

, ಉತ್ತಮ ರಸ್ತೆಯಲ್ಲಿ ಸಾಗುವಾಗ ಸ್ವಯಂ ನಿಯಂತ್ರಣವೂ ಅಷ್ಟೇ ಮುಖ್ಯ. ಶೀಘ್ರವೇ ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸಿಬ್ಬಂದಿ ನಿಯೋಜನೆ) ಆರಂಭಿಸುತ್ತೇವೆ ಎಂದು ಹೇಳಿದ್ದಾರೆ. ಬಸ್ ಡಿಕ್ಕಿ ಹೊಡೆದ ಪರಿಣಾಮ, ಆ ಕಾರು ಮುಂದಿನ ಕಾರಿಗೆ ಡಿಕ್ಕಿ ಹೊಡೆದಿದೆ. ಹೀಗೆ, ಸುಮಾರು 6 ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಇದರಲ್ಲೊಂದು ಕಾರಿನಲ್ಲಿದ್ದ ಮಗುವೊಂದು ಸಾವಿಗೀಡಾಗಿದೆ.

ಡಿಕ್ಕಿಯಾಗಿ ನಜ್ಜುಗೊಜ್ಜಾಗಿ ರಸ್ತೆಪಕ್ಕದಲ್ಲಿ ನಿಂತಿರುವ ಕಾರುಗಳ ವಿಡಿಯೋವನ್ನು ಮಾಡಿದ್ದಾರೆ. ಆ ವಿಡಿಯೋವನ್ನು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿರುವ ಪ್ರತಾಪ್ ಸಿಂಹ, ಅತಿವೇಗದಿಂದಾಗಿ ಚನ್ನಪಟ್ಟಣದ ಬಳಿ ಆರೇಂಜ್ ಬಸ್ ಚಾಲಕ ಆರು ವಾಹನಗಳಿಗೆ ಹಿಂದಿನಿಂದ ಗುದ್ದಿ ಮಗುವೊಂದು ಸ್ಥಳದಲ್ಲೇ ಮೃತಪಟ್ಟಿದೆ. ಒಳ್ಳೆಯ ರಸ್ತೆಯ ಜೊತೆಗೆ, ನಿಯಂತ್ರಿತ ಚಾಲನೆಯೂ ಅಷ್ಟೇ ಮುಖ್ಯ. ಹೈವೇ ಪ್ಯಾಟ್ರೋಲಿಂಗ್ (ಗಸ್ತು ಸೇವೆ) ಆರಂಭಿಸುತ್ತೇವೆ. ಸ್ವನಿಯಂತ್ರಣ ಹೇರಿಕೊಳ್ಳಿ ಎಂದು ಜನರಿಗೆ ಕಿವಿಮಾತು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ