ಚಾಮರಾಜನಗರ :ಪಾದಯಾತ್ರೆ ಸ್ವಾಗತ ಕಾರ್ಯಕ್ರಮದಲ್ಲಿ ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದುಕೊಂಡು ರಾಹುಲ್ ಗಾಂಧಿ ಡೋಲು ಬಾರಿಸಿದರು. ಇಬ್ಬರ ಕೈಯನ್ನೂ ಹಿಡಿದುಕೊಳ್ಳುವ ಮೂಲಕ ರಾಹುಲ್ ಗಾಂಧಿ ಒಗ್ಗಟ್ಟಿನ ಸಂದೇಶ ರವಾನಿಸಿದರು.
ಪಾದಯಾತ್ರೆ ವೇಳೆಯೂ ಇಬ್ಬರು ನಾಯಕರನ್ನು ಒಗ್ಗೂಡಿಸುವ ಪ್ರಯತ್ನವನ್ನು ರಾಹುಲ್ ಗಾಂಧಿ ನಡೆಸಿದರು. ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರನ್ನು ಅಕ್ಕ ಪಕ್ಕದಲ್ಲಿ ಜೊತೆಯಲ್ಲೇ ಕರೆದುಕೊಂಡು ರಾಹುಲ್ ಗಾಂಧಿ ಹೆಜ್ಜೆ ಹಾಕಿದರು.
ಭಾರತ್ ಜೋಡೋ ಪಾದಯಾತ್ರೆ ಮಧ್ಯಾಹ್ನದ ವಿರಾಮದ ಬಳಿಕ ಮತ್ತೆ ಆರಂಭಗೊಂಡಿದೆ. ಬೇಗೂರಿನಲ್ಲಿ ಮಧ್ಯಾಹ್ನದ ವಿರಾಮದ ಬಳಿಕ ಮತ್ತೆ ಸಂಜೆ 4 ಗಂಟೆಗೆ ಆರಂಭಗೊಂಡಿತು. ಮಧ್ಯಾಹ್ನದ ವಿರಾಮದ ಬಳಿಕ ಡಿಕೆಶಿ ಪಾದಯಾತ್ರೆಯಲ್ಲಿ ನಡೆದುಕೊಂಡು ಬಂದರೆ ಸಿದ್ದರಾಮಯ್ಯ ಕಾರಲ್ಲಿ ತೆರಳಿದರು.





