Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮಾವುತ, ಕಾವಾಡಿಗರ ಮಕ್ಕಳೊಟ್ಟಿಗೆ ಸಮಯ ಕಳೆದ ಸಚಿವ ಬಿ ಸಿ ನಾಗೇಶ್‌

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ರ ಅಂಗವಾಗಿ ದಸರಾ ದಿನದಂದು ಚಾಮುಂಡೇಶ್ವರಿ ದೇವಿಯ ಹೊರುವ ಅಂಬಾರಿಯನ್ನು ಹೊತ್ತು ಸಾಗುವ ಆನೆ ಅಭಿಮನ್ಯು ಹಾಗೂ ತಂಡಕ್ಕೆ ತರಬೇತಿ ನೀಡುವ ಆರೈಕೆ ಮಾಡುವ ಮಾವುತರ ಹಾಗೂ ಕಾವಾಡಿಗರು ಮತ್ತವರ ಮಕ್ಕಳೊಟ್ಟಿಗೆ ಇಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಅರಮನೆ ಆವರಣದಲ್ಲಿ ಕೆಲ ಕಾಲ ಸಮಯ ಕಳೆದರು.

ಸದ್ಯ ಮಾವುತರು ಮತ್ತು ಕಾವಾಡಿಗೆ ಮಕ್ಕಳಿಗೆ ಅರಮನೆಯ ಆವರಣದಲ್ಲೇ ತಾತ್ಕಾಲಿಕ ಶಾಲೆ ವ್ಯವಸ್ಥೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಡಿಸಿಎಫ್‌ ಕರಿಕಾಳನ್‌ ಅವರೊಟ್ಟಿಗೆ ಮಾತನಾಡಿ ಮಾವುತರು, ಕಾವಾಡಿಗರು ಹಾಗೂ ಮಕ್ಕಳ ಕಲಿಕೆಯ ಕುರಿತು ವಿಚಾರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!